ಪ್ರಧಾನಿ ಮೋದಿ ಸಮಾವೇಶ, ಪ್ರಚಾರ ವೆಚ್ಚ ಮೀರಿಸುವ ಸಾರಿಗೆ ಬಸ್ ವ್ಯವಸ್ಥೆ ಖರ್ಚು | ಲೆಕ್ಕಾಚಾರ ದಲ್ಲಿ ವ್ಯತ್ಯಾಸ ತಂದ ಆಪತ್ತು.
ಕಾರವಾರ:ಪ್ರಧಾನಿ ಮೋದಿ ಸಮಾವೇಶ, ಇಕ್ಕಟ್ಟಿಗೆ ಸಿಲಿಕಿದ ಬಿಜೆಪಿ ಪ್ರಚಾರ ವೆಚ್ಚ ಮೀರಿಸುವ ಸಾರಿಗೆ ಬಸ್ ವ್ಯವಸ್ಥೆ ಖರ್ಚ್ಚು ಲೆಕ್ಕಾಚಾರ ದಲ್ಲಿ ವ್ಯತ್ಯಾಸ ತಂದ ಆಪತ್ತು. ಉತ್ತರ ಕನ್ನಡ ಜಿಲ್ಲೆಯ ಶಾಸಕರಾದ ದಿನಕರ ಶೆಟ್ಟಿ, ಶಿವರಾಮ ಹೆಬ್ಬಾರ ಸೇರಿದಂತೆ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ಆರು ಅಭ್ಯರ್ಥಿಗಳಿಗೆ ‘ಚುನಾವಣೆ ಲೆಕ್ಕ’ ನೀಡುವ ವಿಷಯದಲ್ಲಿ ದೊಡ್ಡ ಸವಾಲು ಸೃಷ್ಟಿಯಾಗಿದೆ ಎಂದು ವಿಜಯ ಕರ್ನಾಟಕ ಪತ್ರಿಕೆಯು ಸುದ್ಧಿ ಮಾಡಿದೆ.
ಚುನಾವಣೆಯ ಪ್ರಚಾರದ ವೇಳೆ ಅಂಕೋಲಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷದ ಅಭ್ಯರ್ಥಿಗಳ ಪರವಾಗಿ ಸಮಾವೇಶ ನಡೆಸಿದ್ದು. ಬಿಜೆಪಿಯಿಂದ ಸ್ಪರ್ಧಿಸದ ಎಲ್ಲರೂ ಮೋದಿ ಅವರ ಜೊತೆಗೆ ವೇದಿಕೆ ಯನ್ನು ಹಂಚಿಕೊಂಡಿದ್ದರು. ಸಮಾವೇಶಕ್ಕೆ ಜನರನ್ನು ಕೆರೆ ತರಲು 500 ಕ್ಕೂ ಅಧಿಕ ಬಸ್ ಗಳನ್ನು ಬಳಸಲಾಗಿತ್ತು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯಿಂದಲೇ ವಿವಿಧ ವಿಭಾಗಳಿಂದ 496 ಬಸ್ ಗಳನ್ನು ಬಾಡಿಗೆ ಪಡೆಯಲಾಗಿದೆ. ಗೋವಾದ ಕದಂಬ ಸಾರಿಗೆ ಸಂಸ್ಥೆಯಿಂದ ಸುಮಾರು 100 ಬಸ್ ಬಳಿಕೆಯಾಗಿದ್ದವು ಎಂಬ ಅಂದಾಜಿಸಿದೆ. ಕದಂಬ ಹೊರತು ಪಡಿಸಿ ಉಳಿದೆಲ್ಲವನ್ನು ಲೆಕ್ಕಾಚಾರ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಖರ್ಚು 2.47 ಕೋಟಿ ರೂಪಾಯಿ ಆಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನು ಆರು ಅಭ್ಯರ್ಥಿಗಳಿಗೆ ವಿಭಜಿಸಿದಾಗ ಪ್ರತಿಯೊಬ್ಬರ ವೆಚ್ಚ 41 ಲಕ್ಷ ರೂಪಾಯಿ ದಾಟ್ಟುತ್ತಿದೆ. ಒಂದು ವೇಳೆ ಈ ಅಭ್ಯರ್ಥಿಗಳು ವೇದಿಕೆ ಮೇಲೆ ಹತ್ತದೇ ಇದ್ದಿದ್ದರೆ, ಪ್ರಧಾನಿ ಕಾರ್ಯಕ್ರಮದ ವೆಚ್ಚ ಪಕ್ಷಕ್ಕೆ ಸೇರುತ್ತಿತ್ತು. ಎಲ್ಲರೂ ಮೋದಿ ಅವರ ಜೊತೆ ಕಾಣಿಸಿಕೊಂಡ ಪ್ರರಿಣಾಮ, ವೆಚ್ಚವನ್ನು ಸಮನಾಗಿ ಹಂಚಿಕಿಕೊಳ್ಳಬೇಕಾಗಿದೆ.!
ವಿಧಾನದಸಭೆ ಚುನಾವಣೆಯಲ್ಲಿ ಅಭ್ಯರ್ಥಿಯ ಚುನಾವಣಾ ವೆಚ್ಚ 40 ಲಕ್ಷ ರೂಪಾಯಿ. ಮೀರುವಂತಿಲ್ಲ, ಮೀರಿದರೆ, ಗೆದ್ದ ಅಭ್ಯರ್ಥಿ ಶಾಸಕ ಸ್ಥಾನದಿಂದ ಅನರ್ಹ ಆಗುತ್ತಾರೆ. ಆರು ವರ್ಷ ಚುನಾವಣೆಯಿಂದ ನಿಷೇಧಕ್ಕೆ ಒಳಗಾಗುತ್ತಾರೆ. ಸೋತ ಅಭ್ಯರ್ಥಿಗಳಿಗೂ ಇದು ಅನ್ವಯ ಆಗುತ್ತದೆ. ಹಾಗಾಗಿ ಸವಾಲಿನಿಂದ ಅಭ್ಯರ್ಥಿಗಳನ್ನು ಪಾರು ಮಾಡಲು ಬಸ್ ಬಾಡಿಗೆ ವೆಚ್ಚವನ್ನು ಕೈ ಬಿಡುವ ಪ್ರಯತ್ನವೂ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಮಾಹಿತಿ ಮುಚ್ಚಿಟ್ಟ ಗೋವಾ
ಪ್ರಧಾನಿ ಸಮಾವೇಶಕ್ಕೆ ಗೋವಾದ ಕದಂಬ ಸಂಸ್ಥೆಯಿಂದ ಸುಮಾರು 100 ಬಸ್ ಪಡೆಯಲಾಗಿತ್ತು ಎಂಬ ಅಂದಾಜಿದೆ. ಆದರೆ, ಎಷ್ಟು ಪತ್ರ ಬರೆದರೂ ಕದಂಬ ಸಂಸ್ಥೆಯ ಬಸ್ ಗಳ ಅವಧಿ ಕೃತಕ ಮಾಹಿತಿ ತಿಳಿಸಿಲ್ಲ, ಗೋವಾ ಸಂಬಂಧಿಸಿದ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದರು ಪ್ರತಿಕ್ರಿಯೆ ಬಂದಿಲ್ಲ ಎಂದು ಚುನಾವಣಾ ವೆಚ್ಚ ಮೇಲ್ವಿಚಾರಣೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದಡೆ ಸಮಾವೇಶಕ್ಕೆ ಜನರನ್ನು ಕರೆ ತರಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪಡೆದ 150 ಹೆಚ್ಚು ಜನರಿಗೆ ಚುನಾವಣಾ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಚುನಾವಣಾ ಪ್ರಚಾರ ಸಭೆಗೆ ಅಷ್ಟೊಂದು ಜನರನ್ನು ಕರೆ ತರಲು ಬಸ್ ಪಡೆಯುವ ಮೊದಲು ಆಯೋಗದ ಅನುಮತಿ ಪಡೆಯಬೇಕಿತ್ತು ಎಂದು ದಾಖಲಿಸಲಾಗಿದೆ.
ಅಂಕೋಲಾದಲ್ಲಿ ನಡೆದ ಪ್ರಧಾನಿ ಸಮಾವೇಶಕ್ಕೆ ಬಾಡಿಗೆ ಪಡೆದ ಸಾರಿಗೆ ಸಂಸ್ಥೆ ಬಸ್ ಗಳ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಆದರೆ ಗೋವಾದ ಕದಂಬ ಸಂಸ್ಥೆ ಇನ್ನು ಮಾಹಿತಿ ನೀಡಿಲ್ಲ, ಸಂಸ್ಥೆಯ ವ್ಯವಸ್ಥಾಪಕರಿಗೆ ಎರಡು ಬಾರಿ ಮತ್ತು ಸಂಬಂಧಿಸಿದ ಜಿಲ್ಲಾಧಿಕಾರಿಗೆ ಒಮ್ಮೆ ಪತ್ರ ಬರೆಯಲಾಗಿದೆ ಆದರೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಸತೀಶ್ ಪವಾರ ಚುನಾವಣಾ ವೆಚ್ಚ ಮೇಲ್ವಿಚಾರಣೆ ಅಧಿಕಾರಿ, ಉತ್ತರ ಕನ್ನಡ ಅವರು ಪ್ರತಿಕ್ರಿಯಿಸಿದರು.