ಮಾಜಿ ಸಚಿವೆ ಜೊಲ್ಲೆ ತನ್ನ ವಿರೂದ್ದ ಪ್ರಸಾರ ತಡೆಗಾಗಿ ದಾಖಲು ಮಾಡಿದ್ದ ದಾವಾ ವಜಾ ಮಾಡಿದ ನ್ಯಾಯಾಲಯ.
ಬೆಳಗಾವಿ: ಮಾಜಿ ಸಚಿವೆ ಶಶಿಕಲಾ ಜೊಲ್ಲೆ ತನ್ನ ವಿರೂದ್ದ ಮೊಟ್ಟೆ ಪ್ರಕರಣವನ್ನು ಪ್ರಸಾರ ಮಾಡಬಾರದೆಂದು ಖಾಸಗಿ ಸುದ್ಧಿ ವಾಹಿನಿಯ ವಿರೂದ್ದ ನ್ಯಾಯಾಲಯದ ಕಟ್ಟೆ ಎರಿದ್ದ ಪ್ರಕರಣವನ್ನು ಇಂದು ನಿಪ್ಪಾಣಿ ನ್ಯಾಯಾಲಯ ವಜಾ ಮಾಡಿದೆ.
ನಿಪ್ಪಾಣಿ ನ್ಯಾಯಾಲಯದಲ್ಲಿ ಖಾಸಗಿ ಸುದ್ಧಿ ವಾಹಿನಿಯ ವಿರುದ್ದ ಪ್ರಸಾರದ ತಡೆಯಾಜ್ಞೆ ಪಡೆದ ನಂತರ ಸಚಿವೆ ಮತ್ತು ಅವರ ನ್ಯಾಯಾಲಯದ ಮುಂದೆ ನಿರಂತರ ಗೈರು ಹಾಜರಿದ್ದು ಇತ್ತು. ಆದರೆ ಹಿಂದಿನ ದಿನಾಂಕದಂದು ನ್ಯಾಯಾಲಯ 100=೦೦ ರೂ ಕಾಸ್ಟ್ ಮೇಲೆ ಪ್ರಕರಣವನ್ನು ಇಂದಿನವರೆಗೆ ಮುಂದುಡಿತ್ತು. ಆದರೆ ನ್ಯಾಯಾಲಯದ ಮುಂದೆ ಪಕ್ಷಗಾರರು ಮತ್ತು ವಕೀಲರು ಗೈರು ಹಾಜರಾಗಿದ್ದರಿಂದ ನ್ಯಾಯಾಲಯ ಅಸಲು ದಾವೆಯನ್ನು ವಜಾ ಮಾಡಿದೆ.
ಖಾಸಗಿ ಸುದ್ಧಿ ವಾಹಿನಿಯ ಪರವಾಗಿ ವಕಾಲತ್ತು ವಹಿಸಿದ್ಫ಼ ವಕೀಲ ಸುರೇಂದ್ರ ಉಗಾರೆ ಇವರು ಸದರಿ ಪ್ರಕರಣವನ್ನೇ ಅಂದೇ ಹಿಂದೆತೆಗೆದುಕೊಳ್ಳಬೇಕಾಗಿತ್ತು. ಆದರೆ, ನ್ಯಾಯಾಲಯದ ಮುಂದೆ ಸತತ ಗೈರು ಹಾಜರು ಇರುವದರಿಂದ ನ್ಯಾಯಾಲಯ ಇಂದು ವಜಾ ಮಾಡಿದೆ ಎಂದು ತಿಳಿಸದ್ದಾರೆ.