ವಿವಾದಿತ ಡಿಸಿಎಫ್ ಶಿವಾನಂದ ನಾಯಿಕವಾಡಿ ಸಸ್ಪೆಂಡ್.
ಬೆಳಗಾವಿ: ಗೋಕಾಕ್ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಕವಾಡಿ ಅವರನ್ನು ಅಮಾನತು ಮಾಡಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ ದಿಕ್ಷಿತ ಅವರು ಆದೇಶ ಹೊರಡಿಸಿದ್ದಾರೆ.
ತೆರವಾದ ಸ್ಥಾನಕ್ಕೆ ಬೆಳಗಾವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಕೆ.ಕಲ್ಲೋಳಿಕರ ಅವರನ್ನು ನಿಯೋಜನೆ ಮಾಡಲಾಗಿದೆ.
ವಿವಾದಿತ ಅಧಿಕಾರಿ: ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಅವರೊಂದಿಗೆ ಅನುಚಿತ ವರ್ತನೆ ತೋರಿದ್ದರು. ಅಲ್ಲದೇ ಮಹಿಳೆಯೊಂದಿಗೆ ಸಾರ್ವಜನಿಕವಾಗಿ ಜಗಳವಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಕಂಪಾ ಯೋಜನೆಯಲ್ಲಿಯೂ ಅಕ್ರಮ ಮಾಡಿರುವುದು ಬೆಳಿಕಿಗೆ ಬಂದಿತ್ತು. ಅಲ್ಲದೇ ನೇಮಕಗೊಂಡಾಗಿನಿಂದಲ್ಲೂ ಬೆಳಗಾವಿ, ಚಿಕ್ಕೋಡಿ ಹಾಗೂ ಗೋಕಾಕನಲ್ಲೆ ಕೆಲಸ ಮಾಡಿದ್ದ ಈ ವಿವಾದಿತ ಅಧಿಕಾರಿಗೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಎಂದರೆ ಕಣ್ಣಿಗೆ ಕಾಣುತ್ತಿರಲಿಲ್ಲ. ಇವರನ್ನು ಪ್ರಶ್ನಿಸಿದರೆ ಕೇಸ್ ಹಾಕುವುದಾಗಿ ಬೆದರಿಕೆ ಹಾಕುವ ಚಾಳಿ ಈ ಅಧಿಕಾರಿಯದ್ದಾಗಿತ್ತು. ಇತನ ವರ್ತನೆಯ ವಿರೂದ್ದ ಜಿಲ್ಲೆಯ ತುಂಬಾ ಹೊರಾಟ ಮಾಡಲಾಗಿತ್ತು.ಕೊನೆಗೆ, ಈತನ ವರ್ತನೆಯಿಂದ ಬೇಸತ್ತ ಬೆಂಗಳೂರಿನ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೇ ಕ್ರಮ ಕೈಗೊಂಡಿದ್ದಾರೆ.