ಸರಕಾರಿ ವಕೀಲರ ನೇಮಾಕತಿಯಲ್ಲಿ 24% ರಷ್ಟು SC/ST ಗಳಿಗೆ ಆಧ್ಯತೆ : ರಾಜ್ಯ ಸರಕಾರ ಮಹತ್ವದ ಆದೇಶ.
ಬೆಂಗಳೂರು: ಸರ್ಕಾರಿ ವಕೀಲರನ್ನು ನೇಮಿಸುವಾಗ ಕನಿಷ್ಠ 24% ರಷ್ಟು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಕೀಲರನ್ನು ನೇಮಿಸಿಕೊಳ್ಳಲು ರಾಜ್ಯ ಸರಕಾರ ಮಹತ್ವದ ಆದೇಶ ಮಾಡಿದೆ.
ಸರಕಾರ ಕಾನೂನು ಇಲಾಖೆಗೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದ್ದು, ಸಭಾ ನಡವಳಿಯಲ್ಲಿ ಕ್ರಮವಹಿಸಲು ನಿರ್ದೇಶನವಿರುತ್ತದೆ. ಅದರಂತೆ, ಸರ್ಕಾರಿ ವಕೀಲರನ್ನು ನೇಮಿಸುವ ಸಂದರ್ಭದಲ್ಲಿ ಕನಿಷ್ಠ 24% ರಷ್ಟು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಕೀಲರನ್ನು ನೇಮಿಸುವಂತೆ ಶೇ.24 ರಷ್ಟು ಪರಿಶಿಷ್ಟ ಜಾತಿ/ ಪಂಗಡದವರಿಗೆ ಪ್ರಾತಿನಿಧ್ಯತೆ ನೀಡಬಹುದೆಂಬ ಅಭಿಪ್ರಾಯದೊಂದಿಗೆ ಪ್ರಸ್ತಾವನೆಯನ್ನು ಕಾನೂನು ಇಲಾಖೆಗೆ ಕಳುಹಿಸಲು ಸೂಕ್ತ ಆದೇಶವನ್ನು ಹೊರಡಿಸುವಂತೆ ಕೋರಿರುತ್ತಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯಪತ್ರ ಸಂಖ್ಯೆ: ಸಂವ್ಯಶಾಇ 29 ಶಾಸನ 2022, ದಿನಾಂಕ:23.10.2022ರಲ್ಲಿ ಅಧ್ಯಾದೇಶಿಸಿದಂತೆ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಮೀಸಲಾತಿಯನ್ನು ಅನುಸೂಚಿತ ಜಾತಿಗಳಿಗೆ ಶೇಕಡ 17ರಷ್ಟು ಮತ್ತು ಅನುಸೂಚಿತ ಪಂಗಡಗಳಿಗೆ ಶೇಕಡ 7ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿರುತ್ತದೆ. ಆ ಕಾರಣದಿಂದ ಸರ್ಕಾರಿ ವಕೀಲರನ್ನು ನೇಮಿಸುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅಧ್ಯಾದೇಶದಲ್ಲಿ ಹೇಳಿರುವಂತೆ ಒಟ್ಟು ಶೇಕಡ 24ರಷ್ಟು ಮೀಸಲಾತಿಯನ್ನು ಕಲ್ಪಿಸಬಹುದಾಗಿದೆ ಎಂದು ಅಭಿಪ್ರಾಯ ನೀಡಿರುತ್ತದೆ.