ಅಮೀನಗಡ್ ಅಧ್ಯಕ್ಷೆಯ ದರ್ಪ, ಪಂಚಾಯತಿಗೆ ಬೀಗ ಜಡೆದ ಅಧ್ಯಕ್ಷೆ ಬಸಲಿಂಗಮ್ಮ!?
ರಾಯಚೂರು: ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಅಮೀನಗಡ ಗ್ರಾಮ ಪಂಚಾಯಿತಿಯಲ್ಲಿ ಕಳೆದು 02 ತಿಂಗಳಿಂದ ಪಂಚಾಯತಿಯ ಸಿಬ್ಬಂದಿಗೆ ವೇತನ ನೀಡದೇ ಪಂಚಾಯತಿಯ ಅಧಿಕಾರಿಗಳಿಗೆ ಧಾಮ ಹಾಕಿ ಕೊನೆಗೆ ಗ್ರಾಮ ಪಂಚಾಯಿತಿಗೆ ಬೀಗ ಜಡೆದಿರುವ ಪ್ರಸಂಗ ನಡೆದಿದೆ.
ಕಳೆದ ತಿಂಗಳಿಂದ ಅಮೀನಗಡ ಗ್ರಾಮ ಪಂಚಾಯಿತಿಯಲ್ಲಿ ಈ ಬಸಲಿಂಗಮ್ಮ ಅವರಿಂದಲೇ ಸದಸ್ಯರ ಮಧ್ಯ ಹಲ್ಲೆಗಳು ಜಗಳು ನಡೆದು ಕವಿತಾಳ ಪೋಲಿಸ್ ಠಾಣೆಯಲ್ಲಿ ಎಪ್ಫ಼್.ಆಯ್.ಆರ್ ಕೂಡಾ ಆಗಿದ್ದು ಅದು 103/2024ರ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣವು ದಾಖಲಾಗಿರುತ್ತದೆ.
ಈ ಪ್ರಕರಣ ದಾಖಲಾಗುವ ಹಿಂದಿನ ದಿನ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಮಸ್ಕಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯಾದ ಅಮರಪ್ಪ ಸಮ್ಮುಖದಲ್ಲಿ ಸದಸ್ಯರು ಮತ್ತು ಅಧ್ಯಕ್ಷರ ಮಧ್ಯ ಮಾರಾಮಾರಿ ನಡೆದಿದ್ದು, ತಾಲ್ಲೂಕು ಪಂಚಾಯಿತಿ ಇಒ ಅಮರಪ್ಪ ಅವರು ಯಾವುದೇ ಸದಸ್ಯರಿಗೆ ಇದುವರೆಗೂ ಒಂದೂ ನೋಟಿಸ್ ನೀಡದಿರುವುದು ವಿಪರ್ಯಾಸವೇನಿಸಿದೆ, ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ನಡೆದಿರುವ ಮಾರಾ-ಮಾರಿ ಹೊಡೆದಾಟದ ಈ ಎಲ್ಲಾ ಕೃತ್ಯವು ಸರ್ಕಾರಿ ಕಛೇರಿಯಲ್ಲಿ ಸರ್ಕಾರಿ ಅಧಿಕಾರಿಯ ಎದುರ ಜರುಗಿರುತ್ತದೆ.
ಅಮರಪ್ಪ ಇಒ ಮಸ್ಕಿ ತಾಲ್ಲೂಕು ಪಂಚಾಯಿತಿ ಇವರು ಬೆಂಬಲದಿಂದಲೇ ಅಮೀನಗಡ ಪಂಚಾಯತಿ ಅಧ್ಯಕ್ಷಳಾದ ಬಸಲಿಂಗಮ್ಮ ಅವರು ರಾಜಾರೋಷವಾಗಿ ಗ್ರಾಮ ಪಂಚಾಯಿತಿ ಕಛೇರಿಗೆ ಬೀಗ ಹಾಕುತ್ತಿರುವ ದೃಶ್ಯಗಳು ಲಭಿಸಿದ್ದು, ಗ್ರಾಮ ಪಂಚಾಯಿತಿ ಸಿಬ್ಬಂದಿಗೂ ವೇತನ ಪಾವತಿಸದೆ ಇಡೀ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ನೆಲಕಚ್ಚುವಂತೆ ಮಾಡಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಒಟ್ಟಾರೆಯಾಗಿ ಅಮರಪ್ಪ ಇಒ ಹಾಗೂ ಬಸಲಿಂಗಮ್ಮ ಅವರಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ವೇತನವಿಲ್ಲದೆ ನಲುಗುತ್ತಿರುವುದು ವಿಡಿಯೋ ದೃಶ್ಯವಳಿಗಳಲ್ಲಿ ಕಂಡುಬಂದಿದ್ದು, ಇಂತಹ ಅಧ್ಯಕ್ಷರಿಂದ ಹಾಗೂ ಇಒ ಅವರಿಂದ ಸಾರ್ವಜನಿಕ ಕೆಲಸ ಕಾರ್ಯಗಳು ಕೂಡ ಮೂಲೆ ಗುಂಪಾಗಿದ್ದು ಅಧ್ಯಕ್ಷರ ಗೂಂಡಾ ವರ್ತನೆಗೆ ಹಾಗೂ ಅಮರಪ್ಪ ಇಒ ಅವರ ರಾಜಕೀಯ, ಆಡಳಿತದ ನಿರ್ಲಕ್ಷತನದ ವಿರುದ್ಧ ಜಿಲ್ಲಾ ಪಂಚಾಯಿತಿ ಇದುವರೆಗೂ ಯಾವುದೇ ಕ್ರಮವಹಿಸದೆ ಇರುವುದು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸಹ ಇವರಿಗೆ ಬೆಂಬಲವಿದೆ ಎಂದು ತೋರುತ್ತಿದೆ ಸಾರ್ವಜನಿಕರು ಮಾತಾಡುತ್ತಿದ್ದಾರೆ.