Belgaumsuvarna giri times

ಬೆಳಗಾವಿ: ರಾಣಿ ಚೆನ್ನಮ್ಮ ವಿ.ವಿ.ಯ ಪ್ರೊ. ಸಿ ಎಮ್ ತ್ಯಾಗರಾಜ್ ವಿರುದ್ದ ತನಿಖೆ ಆರಂಭ !?

ಬೆಳಗಾವಿ: ಬೆಳಗಾವಿಯ ಚೆನ್ನಮ್ಮ ವಿವಿಯ ಎಂ ಬಿ ಎ ವಿಭಾಗದ ಪ್ರೊ. ತ್ಯಾಗರಾಕ್ ವಿರುದ್ದ ತನಿಖೆ ಸುರು ಮಾಡಿದೆ ಎಂದು ತಿಳಿದು ಬಂದಿದೆ.

ಈ ಕುರಿತು 2019 ರಲ್ಲಿ ಬೆಳಗಾವಿ ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಉಗಾರೆ ಇವರು ಪ್ರೋ. ತ್ಯಾಗರಾಜ ನೇಮಕಾತಿ ಮತ್ತು ಶೈಕ್ಷಣಿಕ ಅರ್ಹತೆಯ ಬಗ್ಗೆ ದಾಖಲಾತಿಯ ಪಟ್ಟಿಯೊಂದಿಗೆ ದೇಹಲಿಯ ಯುಜಿಸಿ ಕೇಂದ್ರ ಕಚೇರಿಗೆ ದೂರು ನಿಡಿದ್ದರು.

ನಂತರ ಯುಜಿಸಿ ಆದೇಶದಂತೆ ರಾಣಿ ಚೆನ್ನಮ್ಮ ವಿ ವಿ ಯು ಜಿಲ್ಲಾ ನಿವೃತ್ತ ಹುಬ್ಬಳ್ಳಿಯ ನ್ಯಾಯಾದೀಶರಾದ ಶ್ರೀ ಪತ್ತಾರ ಇವರ ಅಧ್ಯಕ್ಷತೆಯಲ್ಲಿ ಒಂದು ಕಮೀಟಿ ಮಾಡಿ ಆದೇಶ ಹೊರಡಿತ್ತು. ಆದರೆ ಕೊವಿಡ್ ಕಾರಣದಿಂದ ಸಾಕ್ಷಿ ಸಂಗ್ರಹ ಮುಂದೂಡಲಾಗಿತ್ತು.

ಎರಡು ವರ್ಷಗಳ ನಂತರ ಈಗ ಮತ್ತೇ ಪ್ರಕರಣವನ್ನು ಕೈಗೆತ್ತಿಕೊಂಡಿರುವ ನ್ಯಾ ಪತ್ತಾರ ಇವರು ಎಂ ಬಿ ಎ ವಿಭಾಗದ ಪ್ರೊ. ತ್ಯಾಗರಾಜರ ನೇಮಕಾತಿ ಮತ್ತು ಅವರ ಶೈಕ್ಷಣಿಕ ಅರ್ಹತೆ ಕುರಿತು ಸಾಕ್ಷಗಳನ್ನು ಸಂಗ್ರಹ ಮಾಡುತ್ತಿದೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button