ಕಿತ್ತೂರು ಕರ್ನಾಟಕ: ಒಂಬತ್ತು ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 64 ಸರಕಾರಿ ಶಾಲೆ ಬಂದ್.
ಬೆಳಗಾವಿ: ಬೆಳಗಾವಿ, ಉತ್ತರ ಕನ್ನಡದಂತಹ ಗಡಿ, ಸೂಕ್ಷ್ಮ ಪ್ರದೇಶ ಹೊಂದಿರುವ ಕಿತ್ತೂರು ಕರ್ನಾಟಕದ ಒಂಬತ್ತು ಶೈಕ್ಷಣಿಕ ಜಿಲ್ಲೆಗಳಲ್ಲಿ 64 ಸರಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ ಎಂದು ಪತ್ರಿಕೆ ವರದಿ ಮಾಡಿದೆ.
ದಾಖಲಾತಿ ಇಲ್ಲ ಎನ್ನುವ ಕಾರಣಕ್ಕೆ ಶಾಲೆಗಳನ್ನು ಬಂದ್ ಮಾಡಿ ಅಲ್ಲಿನ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ನಿಯೋಜಿಸಲಾಗಿದೆ. ಗಡಿ ಜಿಲ್ಲೆಗಳ ಸರಕಾರಿ ಶಾಲೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಂದ್ ಆಗಿರುವುದು ಹೆಚ್ಚಿನ ಗಮನಸೆಳೆಯುತ್ತಿದೆ. ಇದರ ಜತೆಗೆ ಕಿತ್ತೂರು ಕರ್ನಾಟಕದ ಒಂಬತ್ತು ಶೈಕ್ಷಣಿಕ ಜಿಲ್ಲೆಗಳಲ್ಲಿ 550ಕ್ಕೂ ಅಧಿಕ ಸರಕಾರಿ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ದಾಖಲಾತಿ ಇದೆ.
ಗಡಿ ಭಾಗದ ಜಿಲ್ಲೆಗಳಾದ ಉತ್ತರ ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾರವಾರ, ಶಿರಸಿ ಶೈಕ್ಷಣಿಕ ಜಿಲ್ಲೆ ಜಿಲ್ಲೆ) 19, ಬೆಳಗಾವಿ ಬೆಳಗಾವಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಜಿಲ್ಲೆಯಲ್ಲಿ 15, ವಿಜಯಪುರ 14 ಪ್ರಾಥಮಿಕ ಶಾಲೆಗಳು ಬಂದ್ ಆಗಿವೆ. ಇವುಗಳ ಜತೆಗೆ ಅನುದಾನಿತ 6 ಶಾಲೆಗಳು ಮತ್ತು 100 ಕ್ಕೂ ಹೆಚ್ಚು ಖಾಸಗಿ ಪ್ರಾಥಮಿಕ ಶಾಲೆಗಳು ಬಂದ್ ಆಗಿವೆ.
ಸರಕಾರದ ನಿಯಮದ ಪ್ರಕಾರ ಸತತ 4-5 ವರ್ಷ ಯಾವುದೇ ದಾಖಲಾತಿ ಆಗದೆ ಇದ್ದರೆ, ಆ ಶಾಲೆಗಳನ್ನು ಶೂನ್ಯ ದಾಖಲಾತಿ ಎಂದು ಪರಿಗಣಿಸಲಾಗುತ್ತದೆ. ಮತ್ತೆ ಆ ಶಾಲೆಗಳನ್ನು ಆರಂಭಿಸಲು ಸರಕಾರದ ವಿವಿಧ ಮಾನದಂಡ ಪೂರ್ಣವಾಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಸ್ತವದಲ್ಲಿ ಒಮ್ಮೆ ಬಂದ್ ಆಗಿರುವ ಸರಕಾರಿ ಶಾಲೆ ಮರಳಿ ಆರಂಭವಾಗಿರುವುದು ಅಪರೂಪ.
ಶಾಲೆಗಳ ಮಾಹಿತಿ.
ಈ ಶೈಕ್ಷಣಿಕ ಜಿಲ್ಲೆಯಲ್ಲಿ ಮುಚ್ಚಿದ ಶಾಲೆಗಳು.
ಕಾರವಾರ 11, ಶಿರಸಿ 8, ಬಾಗಲಕೋಟೆ 8, ಬೆಳಗಾವಿ 7, ಚಿಕ್ಕೋಡಿ 8, ಧಾರವಾಡ 1, ಗದಗ 2, ಹಾವೇರಿ 5, ವಿಜಯಪುರ 14, ಒಟ್ಟು 64.
ಕಷ್ಟದಲ್ಲಿ 548 ಶಾಲೆಗಳು ರಾಜ್ಯದಲ್ಲಿ ಪ್ರತಿ ವರ್ಷವೂ ಶೂನ್ಯ ದಾಖಲಾತಿ ಕಾರಣಕ್ಕೆ ಒಂದಿಲ್ಲೊಂದು ಶಾಲೆಗಳು ಬಂದ್ ಆಗುತ್ತಿವೆ. 10 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಶಾಲೆಗಳೇ ನಂತರದಲ್ಲಿ ಶೂನ್ಯ ದಾಖಲಾತಿ ಪರಿಸ್ಥಿತಿ ಎದುರಿಸಿ ಬಾಗಿಲು ಹಾಕಿಕೊಳ್ಳುತ್ತಿವೆ. ಪ್ರಸಕ್ತ ವರ್ಷ ಶಿಕ್ಷಣ 7 ಇಲಾಖೆ ರೂಪಿಸಿದ ವರದಿಯಲ್ಲಿ ಧಾರವಾಡ ಶೈಕ್ಷಣಿಕ ವಿಭಾಗದ ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ, ಧಾರವಾಡ, ಗದಗ, ಹಾವೇರಿ, ಶಿರಸಿ, ಕಾರವಾರ, ವಿಜಯಪುರ ಶೈಕ್ಷಣಿಕ ಜಿಲ್ಲೆಯಲ್ಲಿ 548 ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಂತ ಕಡಿಮೆ ಇದೆ. ಇದರಲ್ಲಿ ಎಲ್ಲವೂ ಪ್ರಾಥಮಿಕ ಶಾಲೆಗಳು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ ಎಂದು ವಿಜಯ ಕರ್ನಾಟಕ ವರದಿಯನ್ನು ಮಾಡಿದೆ.