ಕಸ್ಟಡಿಯಲ್ಲಿದ್ದ ಕಳ್ಳ ಪರಾರಿ: ಮಹಿಳಾ ಪಿಎಸ್ ಐ ಸೇರಿ ಐವರು ಅಮಾನತು.!
ತುಮಕೂರು: ಗುಬ್ಬಿ ಪೊಲೀಸ್ ಠಾಣೆ ಪಿಎಸ್ ಐ ದೇವಿಕಾ ಸೇರಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ಅಧೀಕ್ಷರ ಕೆ.ವಿ.ಆಶೋಕ್ ಆದೇಶ ಹೊರಡಿಸಿದ್ದಾರೆ.
ಕಳ್ಳತನ ಪ್ರಕರಣದಲ್ಲಿ ವಿಚಾರಣೆಗೆ ಕತೆತಂದಿದ್ದ ಆರೋಪಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಘಟನೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪಿಎಸ್‌ಐ ದೇವಿಕಾ ಸೇರಿ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ..
ಗುಬ್ಬಿ ಪೊಲೀಸ್ ಠಾಣೆ ಪಿಎಸ್‌ಐ ದೇವಿಕಾ ಹಾಗೂ ಮೂವರು ಎಚ್ ಸಿ ಮತ್ತು ಒಬ್ಬ ಪಿಸಿ ಸೇರಿ ಐವರು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತಾಗಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕು ಹುಲ್ಲೂರು ಗ್ರಾಮದ ನೃತ್ಯ ಕಲಾವಿದ ಎನ್ನಲಾದ ಸಯ್ಯದ್ ಅಲಿ ಬಾಳ ಸಾಹೇಬ್ ನದಾಫ್(35) ಶುಕ್ರವಾರ ಬೆಳಗಿನ ಜಾವ ಪೊಲೀಸ್ ಠಾಣೆಯಿಂದ ಎಸ್ಕೆಪ್ ಆಗಿದ್ದನು.
ಗೃಹ ಸಚಿವರ ಜಿಲ್ಲೆಯಲ್ಲಿಯೇ ಇಂತಹ ಘಟನೆ ವರದಿಯಾಗಿದ್ದು ಇಡೀ ಪೊಲೀಸ್ ಇಲಾಖೆಗೆ ಮುಜುಗರ ತಂದಿತ್ತು. ಸರ ಕಳ್ಳತನ ಪ್ರಕರಣ ಸಂಬಂಧವಾಗಿ ಆರೋಪಿ ಸಯ್ಯದ್ ಬೆಂಗಳೂರಿನಲ್ಲಿ ಬಾಳ ಸಾಹೇಬ್ ನದಾಫ್‌ನನ್ನು బంధిసి ವಿಚಾರಣೆಗಾಗಿ ನ್ಯಾಯಾಲಯದಿ೦ದ ಪೊಲೀಸ್ ವಶಕ್ಕೆ ಪಡೆದು ಠಾಣೆಯಲ್ಲಿಟ್ಟಾಗ ಪರಾರಿಯಾಗಿದ್ದ.