ನಿಯಮ ಮೀರಿ ಉಪ ನಿರ್ದೆಶಕರ ಹುದ್ಧೆ ನೀಡಿದ ಬೆಳಗಾವಿ ಡಿಸಿ. ಜಿಲ್ಲಾ ಮಟ್ಟದ ಅಧಿಕಾರಿಗಳ ವರ್ಗದಲ್ಲಿ ಬಿಸಿ ಬಿಸಿ ಸುದ್ಧಿಯ ಡಿಸ್ಕಸ್ಸನ್ !!
ಬೆಳಗಾವಿ: ಯಾರ್ ಯಾರಿಗೋ ಲಕ್ ಹೇಗೆ ಒಲಿಯುತ್ತೋ ಎಂಬುದಕ್ಕೆ ತಾಜಾ ಉದಾಹರಣೆ ಬೆಳಗಾವಿ ಡಿ ಸಿ ಸಾಹೇಬರ ಪ್ರವಾಸೋಧ್ಯಮ ಇಲಾಖೆಗೆ ಸಂಬಂದಿಸಿದ ಆದೇಶ ಒಂದು ಬೆಳಗಾವಿ ಜಿಲ್ಲಾ ಮಟ್ಟದ ಅಧಿಕಾರಿಗಳ ವಲಯದಲ್ಲಿ ಬಿಸಿಯಾದ ಗುಸು ಗುಸು ಸುದ್ಧಿಯೊಂದು ಹರಿದಾಡುತ್ತಿದೆ.
ಅದೇನಪ್ಪ ಅಂದ್ರೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸಾಹೇಬರು ದಿ: 2/8/2023 ರಂದು ಮಾಡಿದ ಆದೇಶದ ಪ್ರಕಾರ ಸಹಾಯಕ ಆಡಳಿತಾಧಿಕಾರಿ, ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆ ಅಶೋಕ ನಗರದ ಅಧಿಕಾರಿ ಜಗದೀಶ್ ಪಾಟೀಲರಿಗೆ ಬೆಳಗಾವಿಯಲ್ಲಿರುವ ಪ್ರವಾಸೋಧ್ಯಮ ಇಲಾಖೆಯ ಉಪ ನಿರ್ದೇಶಕರ ಹುದ್ಧೆಯ ಪ್ರಭಾರ ಹುದ್ದೆಗೆ ಗ್ರೀನ್ ಸಿಗ್ನಲ್ ಕೊಟ್ಟುಬಿಟ್ಟಿದ್ದಾರೆ. ಈ ಆದೇಶವು ಅಧಿಕಾರ ವಲಯದಲ್ಲಿ ಹುದ್ದೆ ಪಡೆಯಲು ವ್ಯಕ್ತಿಗೆ “ಲಕ್ಕ್ ಬೇಕೋ ಅಥವಾ ಹೆಸರಿನ ಮುಂದೆ ಅಡ್ಡ ಹೆಸರು ಬೇಕೋ” ಎಂದು ಚರ್ಚೆ ಸುರು ಆಗಿ ಬಿಟ್ಟಿದೆ.
ಜಗದೀಶ ಪಾಟೀಲರು ನಿಜವಾಗಿಯೂ ಈ ಹುದ್ದೆಗೆ ಅರ್ಹರಾ ? ಅಥವಾ ಇವರ ಅರ್ಹತೆ ಕುರಿತು ಜಿಲ್ಲಾಧಿಕಾರಿಗಳಿಗೆ ಇವರೊಬ್ಬರೇ ಕಾಣಿಸಿದರಾ ? ಅನ್ನೊದು ಸಂದೇಹ ಬರದೇ ಇರದು. ಆ ಸಂದೇಹಕ್ಕೆ ಉತ್ತರ ಇಲ್ಲಿದೆ. ಉಡುಪಿ ಜಿಲ್ಲೆಯ ಉಸ್ತುವಾರಿ ಹಾಗೂ ಬೆಳಗಾವಿಯ ಖಡಕ್ ಸಚಿವೆ ಹೆಬ್ಬಾಳಕರರವರು 18/7/2024 ರಂದು ಪತ್ರ ಬರೆದಿದ್ದರಂತೆ. ಆಪತ್ರದ ಪ್ರಕಾರ ಜಿಲ್ಲಾಧಿಕಾರಿ ಸಾಹೇಬರು, ಆ ಪತ್ರದ ಉಲ್ಲೇಖ ಹಾಕಿ ವಿಮಾ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಜಗದೀಶ್ ಪಾಟೀಲರಿಗೆ ಪ್ರವಾಸೋಧ್ಯಮದ ಇಲಾಖೆಯ ಹುದ್ಧೆಯನ್ನು ಅಲಂಕರಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈಗಾಗಲೇ ಒಂದ್ಸಲ ಜಗದೀಶ ಪಾಟೀಲರು ಪ್ರವಾಸೋಧ್ಯಮ ಹುದ್ಧೆಯ ಕುರ್ಚಿಯಲ್ಲಿ ಕುಳಿತು ಬಂದಿದ್ದಾರೆ. ಮತ್ತೇ ಆ ಪ್ರಯತ್ನವನ್ನು ಮುಂದುವರೆಸಿ ಕುರ್ಚಿ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಹಾಗಾದರೆ ಕಾಯಿದೆ ಹೇಳೋದೇನು ? ಕೆ ಸಿ ಎಸ್ ಆರ್ ನಿಮಯದ 68 ರ ಪ್ರಕಾರ ಪ್ರವಾಸೋಧ್ಯಮದ ಹುದ್ದೆಗೆ ಗೆಜೆಟೆಡ್ ಅಧಿಕಾರಿ ಮತ್ತು ಅವರ ಪೇ ಸ್ಕೇಲ್ ನೋಡಿ ಅರ್ಹತೆಯನ್ನು ಅಳಿಯಬೇಕು. ಹಾಗಾದರೆ, ಸಹಾಯಕ ಆಡಳಿತಾಧಿಕಾರಿ ಜಗದೀಶ ಪಾಟೀಲ್ ಗೆಜೆಟಡ್ ಅಧಿಕಾರಿನಾ ? ಅವರಿಗೆ ಇರುವ ಪೇ ಸ್ಕೇಲ್ ಎಷ್ಟಿದೆ ? ಅದಕ್ಕೆ ಉತ್ತರ ಡಿ ಸಿ ಸಾಹೇಬರೇ ಕೊಡಬೇಕು.
ಈ ಕುರಿತು ಸಾಮಾಜಿಕ ಹೊರಾಟಗಾರ ಸುರೇಂದ್ರ ಉಗಾರೆಯವರು ಬೆಳಗಾವಿಯಲ್ಲಿ ನಿಯಮ ಮೀರಿ ಅಧಿಕಾರ ಪಡೆದುಕೊಂಡ ಇಂತಹ ಅಧಿಕಾರಿಗಳು ಸಾಕಷ್ಟು ಸಿಗುತ್ತಾರೆ. ಸೇವಾ ನಿಯಮ ಮೀರಿ ಅಧಿಕಾರ ಕೋಡಬಾರದು ಕೊಟ್ಟರೇ ಅಧಿಕಾರ ವರ್ಗದಲ್ಲಿ ಸೇವಾ ವೃತ್ತಿಗೆ ಕಳಂಕ ಅನ್ನೊದು ಗೊತ್ತಿದ್ದರೂ ಅಧಿಕಾರಿಗಳು, ತಮ್ಮ ಕುರ್ಚಿಗಾಗಿ ಹಾಗೂ ರಾಜಕೀಯ ನಾಯಕರ ಮರ್ಜಿ ಕಾಯಲು ಇಂತಹ ಅಡ್ಡ ದಾರಿಯನ್ನು ಹೀಡಿಯುತ್ತಾರೆ. ತಕ್ಷಣ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿದ ಅದೇಶವನ್ನು ವಾಪಸ್ಸು ಪಡೆಯದಿದ್ದರೆ ಆದೇಶದ ವಿರೂದ್ದ ಲೋಕಾಯುಕ್ತರ ದೂರು ಕೊಡುವದಾಗಿ ಹೇಳಿದ್ದಾರೆ.