suvarna giri timesದೆಹಲಿ

NDA & INDIA ಪಕ್ಷಗಳ ಒಕ್ಕೂಟ ಬಿಟ್ಟು ದೂರ ಉಳಿದ 11 ಪಕ್ಷಗಳು..!!

ದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ NDA ಸರ್ಕಾರ ಸೋಲಿಸಲು 26 ವಿರೋಧ ಪಕ್ಷಗಳು ಒಟ್ಟಾಗಿ INDIA ಎಂಬ ನೂತನ ಮೈತ್ರಿಕೂಟ ರಚಿಸಿಕೊಂಡಿವೆ. ಆದರೆ ದೇಶದ 11 ಪಕ್ಷಗಳು ಎರಡು ಗುಂಪನ್ನು ಬಿಟ್ಟು ದೂರ ಉಳಿದಿವೆ ಇದರಿಂದಾಗಿ ರಾಜಕೀಯ ದಿಕ್ಕನ್ನೇ ಬದಲಿಸಬಹುದು ಅನ್ನುವ ಲೆಕ್ಕಾಚಾರ ಇವುಗಳಲ್ಲಿ ಕಾಣುತ್ತಿವೆ.

ಆದರೆ INDIA ದಿಂದ ಎಚ್ಚೆತ್ತುಕೊಂಡಿರುವ ನರೇಂದ್ರ ಮೋದಿಯವರು ತಮ್ಮ NDA ಮೈತ್ರಿಕೂಟಕ್ಕೆ ಹಲವು ಸಣ್ಣ ಪುಟ್ಟ ಪಕ್ಷಗಳನ್ನು ಸೇರಿಸಿಕೊಂಡು ಸಭೆ ನಡೆಸಿದ್ದಾರೆ. ಅಲ್ಲದೇ ತಮ್ಮೊಡನೆ ಒಟ್ಟು 38 ಪಕ್ಷಗಳಿವೆ ಎಂದಿದ್ದಾರೆ. ಆದರೆ NDA ಜೊತೆಗಿರುವ 38 ಪಕ್ಷಗಳ ಕಥೆಯೇ ಬೇರೆ ಬೇರೆ ಇದೆ. ಅದರ ಒಟ್ಟು 15 ಪಕ್ಷಗಳು ಕಳೆದ ಬಾರಿ ಒಂದೂ ಲೋಕಸಭಾ ಸ್ಥಾನ ಗೆದ್ದಿಲ್ಲ, 10 ಪಕ್ಷಗಳು ಸ್ಪರ್ಧಿಸಿಯೇ ಇಲ್ಲ! 8 ಪಕ್ಷಗಳು ಮಾತ್ರ ತಲಾ ಒಂದೊಂದು ಲೋಕಸಭಾ ಸ್ಥಾನ ಗೆದ್ದಿವೆ ಅಷ್ಟೇ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್ ವಿಶೇ‍ಷ ವರದಿ ಪ್ರಕಟಿಸಿದೆ.

ಬಿಜೆಪಿ ಹೊರತುಪಡಿಸಿ NDA ಮೈತ್ರಿಕೂಟದಲ್ಲಿ 37 ಪಕ್ಷಗಳಿವೆ. ಅದರಲ್ಲಿ ಹೊಸದಾಗಿ ಸೇರ್ಪಡೆಗೊಂಡ ಎನ್‌ಸಿಪಿ ಅಜಿತ್ ಪವಾರ್ ಬಣ, ಏಕನಾಥ್ ಶಿಂಧೆ ಶಿವಸೇನೆ ಬಣ ಮತ್ತು ಎಲ್‌ಜೆಪಿ ಪಕ್ಷಗಳು ಸಭೆಯಲ್ಲಿ ಭಾಗವಹಿಸಿವೆ. ಈ ಪಕ್ಷಗಳು ಮಾತ್ರವೇ ಕಳೆದ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿವೆ ಬಿಟ್ಟರೆ ಸಭೆಯಲ್ಲಿ ಭಾಗವಹಿಸಿದ್ದ 10 ಪಕ್ಷಗಳು 2019ರ ಲೋಕಸಭಾ ಚುನಾವಣೆಯನ್ನು ಎದುರಿಸಿರಲಿಲ್ಲ. ಉಳಿದ 23 ಪಕ್ಷಗಳು ಸ್ಪರ್ಧಿಸಿದ್ದರೂ ಅವುಗಳಲ್ಲಿ 8 ಪಕ್ಷಗಳು 9 ಸ್ಥಾನಗಳನ್ನಷ್ಟೇ ಗೆದ್ದಿದ್ದವು. 15 ಪಕ್ಷಗಳು ಒಂದೂ ಸ್ಥಾನ ಗೆಲ್ಲಲಾಗಿರಲಿಲ್ಲ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷವೊಂದೇ 37.69 ಮತ ಪ್ರಮಾಣದೊಂದಿಗೆ 303 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಆಗ ಬಿಜೆಪಿ ಮೈತ್ರಿ ಪಕ್ಷವಾಗಿದ್ದ ಶಿವಸೇನೆ ಮಹಾರಾಷ್ಟ್ರದಲ್ಲಿ 18 ಸ್ಥಾನಗಳನ್ನು ಗೆದ್ದಿತ್ತು. ಈಗ ಅದು ಉದ್ಧವ್ ಬಣ ಮತ್ತು ಶಿಂಧೆ ಬಣವಾಗಿ ಎರಡು ಹೋಳಾಗಿದ್ದು ಶಿಂಧೆ ಬಣ ಎನ್‌ಡಿಎ ಜೊತೆಗಿದೆ. ಎಲ್‌ಜೆಪಿ ಪಕ್ಷವು ಎನ್‌ಡಿಎ ಜೊತೆ ಮೈತ್ರಿಯೊಂದಿಗೆ ಸ್ಪರ್ಧಿಸಿ ಬಿಹಾರದಲ್ಲಿ 6 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಆನಂತರ ಅದು ಸಹ ಎರಡು ಹೋಳಾಗಿದೆ. ಎನ್‌ಸಿಪಿ ಪಕ್ಷ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಯೊಂದಿಗೆ ಸ್ಪರ್ಧಿಸಿ 5 ಸ್ಥಾನಗಳನ್ನು ಗೆದ್ದಿತ್ತು. ಅದು ಎರಡು ಹೋಳಾಗಿದ್ದು ಅಜಿತ್ ಪವಾರ್ ಬಣ ಎನ್‌ಡಿಎ ಜೊತೆಗೆ ಗುರುತಿಸಿಕೊಂಡಿದೆ. ಈ ಪಕ್ಷಗಳನ್ನು ಬಿಟ್ಟರೆ ಉಳಿದ ಎನ್‌ಡಿಎ ಜೊತೆಗಿರುವ ಪಕ್ಷಗಳ ಸಾಧನೆ ಅಷ್ಟಕಷ್ಟೆ ಎನ್ನುವಂತಿದೆ.

ಎರಡು ಪಕ್ಷಗಳ ಬಣ ಬಿಟ್ಟು ದೂರ ಉಳಿದ 11 ಪಕ್ಷಗಳು ಒಟ್ಟು 91 ಸಂಸದರನ್ನು ಹೊಂದಿವೆ. ಅ ಪಕ್ಷಗಳು ಯಾವವು ಅಂದ್ರೆ ವಾಯ್ ಎಸ್ ಆರ್ ಕಾಂಗ್ರೆಸ್, ಬಿಜೆಡಿ, ಬಿ.ಅರ್.ಎಸ್, ಬಿ ಎಸ್ ಪಿ, ಎಮ್ ಆಯ್ ಎಮ್, ಟಿಡಿಪಿ, ಎಸ್.ಏ ಡಿ, ಯುಡಿಎಫ್, ಜೆಡಿಎಸ್, ಆರ್ ಎಲ್ ಪಿ, ಎಸ್ ಎ ಡಿ. ಗಳಿ ಯಾರನ್ನು ಬೆಂಬಲಿಸಿಲ್ಲಾ ಇವುಗಳನ್ನು ಬಹುತೇಕ BJP ಯ B ಟೀಮ್ ಎಂದೇ ಕರೆಯಲಾಗುತ್ತಿದೆ. ಆದರೆ ತಟಸ್ಥ ಉಳಿದಿದ್ದು ಮಾತ್ರ ವಿಚಿತ್ರ ಅನ್ನಿಸುತ್ತಿದೆ. ಇವುಗಳ ಉದ್ದೇಶ ಮತಗಳನ್ನು ಒಡೆಯುವ ಸಲುವಾಗಿಯೇ ಹೊರಗೆ ಉಳಿದಿದ್ದಾ ? ಎಂದು ಚರ್ಚಿಸಲಾಗುತ್ತಿದೆ. ಆದರೆ ಇ ಹನ್ನೊಂದು ಪಕ್ಷಗಳು NDA ದಿಂದ ದೂರ ಉಳಿದರೆ ಮುಂದಿನ ವರ್ಷ ನಡೆಯುವ ಚುನಾವಣೆಗೆ ಹೊಸ ಸರಕಾರ ಫಿಕ್ಷ ಅನ್ನುವಂತಿದೆ ?

Related Articles

Leave a Reply

Your email address will not be published. Required fields are marked *

Back to top button