ಉಡುಪಿಸುವರ್ಣ ಗಿರಿ ಟೈಮ್ಸ್

ಉಡುಪಿ: ವರ್ಗಾವಣೆಯಾಗಿ ಬಂದ ಪಿಡಿಓ ಗಳಿಗೆ ‘ಡಿ’ ದರ್ಜೆ ಹುದ್ದೆ !?

ಉಡುಪಿ: ಪಿಡಿಓ ಗಳಲ್ಲಿ ‘ಎ’ ಹುದ್ದು ‘ಬಿ’ ಹುದ್ದೆಯ ಗೊಂದಲ ಇರುವಾಗಲೇ ಪಿಡಿಓ ಗಳಿಗೆ ‘ಡಿ’ ದರ್ಜೆಯ ಹುದ್ಧೆಯನ್ನು ಉಡುಪಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನೀಡಿದ್ದಾರೆ.

ಸರಕಾರ ರಾಜ್ಯ ಮಟ್ಟದಲ್ಲಿ ಪಿಡಿಓಗಳ ವರ್ಗಾವಣೆ ಮಾಡಿದೆ. ಹುದ್ದೆ ಸಿಗುವವರೆಗೂ ವರ್ಗಾವಣೆ ಪಡೆದವರಿಗೆ ಸಮಾನ ಹುದ್ಧೆಯನ್ನು ಜಿಲ್ಲಾ ಪಂಚಾಯತ ನಿಯೋಜಿಸಬೇಕು. ಆದರೆ ಉಡುಪಿಯ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ ಹೆಚ್ ಇವರು ವರ್ಗಾವಣೆಯಾಗಿ ಬಂದ ಪಿ.ಡಿ.ಓ.ಗಳಿಗೆ ಡಿ ದರ್ಜೆಯ ಹುದ್ದೆಯನ್ನು ನಿಯೋಜಿಸಿದೆ. ಈ ಕುರಿತು ಸಾಮಾಜಿಕ ಹೊರಾಟಗಾರ ಸುರೇಂದ್ರ ಉಗಾರೆ ಇವರು ಜಿಲ್ಲಾಡಳಿತ ಪಿ.ಡಿ.ಓ.ಗಳನ್ನು ಯಾವ ದೃಷ್ಟಿಯಿಂದನೋಡುತ್ತದೆ ಎಂಬುದು ಇದರಿಂದ ತಿಳಿಯುತ್ತದೆ. ಇದಕ್ಕೇನು ಕನ್ನಡಿ ಬೇಕಿಲ್ಲಾ ಎಂದು ಪ್ರತಿಕ್ರಿಯಿಸಿದ್ದಾರೆ.

ಸಿ‌.ಇ.ಓ ಪ್ರಸನ್ನ ಇವರು ವರ್ಗಾವಣೆಯಾಗಿ ಬಂದ ನಾಲ್ಕು ಪಿಡಿಓ ೧ ಪುರ್ಣಿಮಾ ೨) ಶ್ರೀಮತಿ ಪುಷ್ಪಲತಾ ೩) ನಾಗವೇಣಿ ೪) ನಾಗೇಂದ್ರ ಜೆ ಇವರಿಗೆ ‘ಡಿ’ ದರ್ಜೆಯಾದ ಅಭಿಲೇಖಾಲಯದ ಹುದ್ದೆಯನ್ನು ನಿಯೋಜಿಸಿದ್ದಾರೆ.

Related Articles

One Comment

  1. ಪಿಡಿಓ ಗಳಿಗೆ ಎಲ್ಲ ರಿಂಡಲ್ಲು ತೊಂದರೆ ಎಸ್ಟ್ಟು ಗ್ರಾಮ ಪಂಚಾಯತ ಖಾಲಿ ಇವೇ …

Leave a Reply

Your email address will not be published. Required fields are marked *

Back to top button