“ಸಾವರ್ಕರ್, ಹೆಡಗೇವಾರ್ ಪಠ್ಯೆಕ್ಕೆ ಕೊಕ್: ನೆಹರು, ಅಂಬೇಡ್ಕರ್ ಪಠ್ಯ ಸೇರ್ಪಡೆಗೆ ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು: ಈ ಹಿಂದಿನ ಬಿಜೆಪಿ ಸರ್ಕಾರ ಶಾಲಾ ಪಠ್ಯದಲ್ಲಿ ಸೇರಿಸಿದ್ದ ಆರ್‌ಎಸ್‌ಎಸ್ ಮುಖಂಡ ಹೆಡಗೇವಾರ್, ಹಿಂದೂ ಮಹಾಸಭಾ ಮುಖಂಡ ವಿ.ಡಿ ಸಾವರ್ಕರ್ ಹಾಗೂ ಸೂಲಿಬೆಲೆ ಚಕ್ರವರ್ತಿಯವರ ಪಠ್ಯವನ್ನು ಕೈಬಿಡಲು ಸಚಿವರು ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ವಿಷಯದಲ್ಲಿ ಸಿಎಂ ನಿರಂತರ ಮಾರ್ಗದರ್ಶನ ಮಾಡುತ್ತಿದ್ದಾರು. ಈಗಾಗಲೇ ಪಠ್ಯ ಶಾಲೆಗಳಿಗೆ ಹೋಗಿದೆ. ಮತ್ತೆ ಪ್ರಿಂಟ್ ಮಾಡಿ ಕಳಿಸುವುದು ಕಷ್ಟ. ಆದರೆ ಸಪ್ಲಿಮೆಂಟರಿ ಪರಿಷ್ಕರಣೆ ಮಾಡಲು ಅವಕಾಶವಿದೆ. ಯಾವುದು ಉಳಿಸಿಕೊಳ್ಳುವುದು ಎಂದು ನಿರ್ಧರಿಸಬಹುದು ಎಂದರು.
ರಾಜಪ್ಪ ದಳವಾಯಿ, ಪ್ರೊ.ಚಂದ್ರಶೇಖರ್, ರಾಜೇಶ್, ಅಶ್ವತ್ಥನಾರಾಯಣ ಅವರ ಸಮಿತಿಯು 45 ಬದಲಾವಣೆಗಳನ್ನು ಮಾಡಲು ಸಲಹೆ ನೀಡಿತ್ತು. ಪ್ಯಾರಾಗ್ರಾಫ್, ಪದಗಳನ್ನು ಬದಲಿಸಲು ಕೋರಿಕೆ ಇಡಲಾಗಿತ್ತು ಎಂದು ಹೇಳಿದರು.
ಆರರಿಂದ ಹತ್ತನೇ ತರಗತಿವರೆಗಿನ ಕನ್ನಡ, ಸಮಾಜ ಪಠ್ಯ ಪುಸ್ತಕದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಸಾವಿತ್ರಿ ಬಾಯಿ ಫುಲೆ, ಡಾ. ಬಿ.ಆರ್ ಅಂಬೇಡ್ಕರ್ ಅವರ ‘ನೀ ಹೋದ ಮರುದಿನ‘ ಕವನ, ಮಗಳಿಗೆ ಬರೆದ ಪತ್ರ (ನೆಹರು) ಸೇರಿಸಲಾಗಿದೆ. ಹೆಡಗೇವಾರ್ , ವಿ.ಡಿ ಸಾವರ್ಕರ್ ಮತ್ತು ಸೂಲಿಬೆಲೆ ಚಕ್ರವರ್ತಿ ಪಾಠಗಳನ್ನು ತೆಗೆಯಲಾಗಿದೆ,
ಆದರಿಂದ ಪಾಠ ಯಾವುದು ಹೇಳಿಕೊಡಬೇಕು, ಯಾವುದು ಹೇಳಿಕೊಡಬಾರದೆಂದು ಶಿಕ್ಷಕರಿಗೆ ತಿಳಿಸಲಾಗುತ್ತದೆ. ಅಂದಾಜು 15 ಪುಟಗಳ ಪುಸ್ತಕ ಇರಲಿದೆ ಎಂದು ಹೇಳಿದರು.
ಮಕ್ಕಳಿಗೆ ಯಾವ ಪಠ್ಯ ಅಗತ್ಯವಿದೆ ಅನ್ನೋದನ್ನು ಮಾತ್ರ ಇರಿಸಲಾಗಿದೆ. ಅನಗತ್ಯ ಪಠ್ಯಗಳನ್ನು ತೆಗೆಯಲಾಗಿದ ಪಠ್ಯದ ಜಾಗದಲ್ಲಿ ಅಂಬೇಡ್ಕರ್, ನೆಹರೂ ಪಠ್ಯಗಳನ್ನು ಸೇರಿಸಲಾಗಿದೆ.
ಹಾಗೂ ಶಾಲೆಯಲ್ಲಿ ರಾಷ್ಟ್ರಗೀತೆ, ನಾಡಗೀತೆ ಜೊತೆಗೆ ಸಂವಿಧಾನ ಪೀಠಿಕೆ ಓದಬೇಕು ಎಂದು ಕಡ್ಡಯಗೊಳಿಸಲು ತೀರ್ಮಾನಿಸಲಾಗಿದೆ. ಎಂದು ಮಧು ಬಂಗಾರಪ್ಪ ರವರು ಪ್ರತಿಕ್ರಿಯಿಸಿದರು.