“ಮಂಗಳೂರಿನಲ್ಲಿ: ಆ್ಯಂಟಿ ಕಮ್ಯೂನಲ್ ವಿಂಗ್ ಕಳೆದರಡು ದಿನದಿಂದ ಕಾರ್ಯಾ ಆರಂಭ
ಮಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೊಚಿಸಿದ್ದಂತೆ ಮಂಗಳೂರಿನಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಕಳೆದೆರಡು ದಿನಗಳಿಂದ ಕಾರ್ಯ ಆರಂಭಗೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ಪೋಲಿಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ, ಗೃಹ ಸಚಿವರಾದ ಬಳಿಕ ಮಂಗಳೂರಿಗೆ ಪ್ರಥಮ ಬಾರಿಗೆ ಬೇಟಿಯ ಸಂದರ್ಭ ಡಾ.ಜಿ.ಪರಮೇಶ್ವರ ಅವರು ಆ್ಯಂಟಿ ಕಮ್ಯೂನಲ್ ವಿಂಗ್ ಅನ್ನು ಘೋಷಣೆ ಮಾಡಿದರು. ಅವರ ಸೂಚನೆಯನ್ವಯ ನಗರದಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಅನ್ನು ಕಳೆದ ಎರದರೆಡು ದಿನಗಳಿಂದ ಕಾರ್ಯ ಆರಂಭಗೊಳಿಸಲಾಗಿದೆ.
ಸಿಟಿ ಸ್ಪೆಷಲ್ ಬ್ರಾಂಡ್ (ಸಿ ಎಸ್ ಬಿ) ಇನ್ ಸ್ಪೆಕ್ಟರ್ ಶರೀಫ್ ನೇತೃತ್ವದಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ತಂಡ ರಚಿಸಿ ಸಿ ಎಸ್ ಬಿ ಇನ್ ಸ್ಪೆಕ್ಟರ್ ಸಿಸಿಬಿ ಎಸಿಪಿ ಪಿ.ಎ. ಹೆಗ್ಡೆ ಹಾಗೂ ಐದು ಜನರ ತಂಡ ಇದರ ಮೇಲು ಉಸ್ತುವಾರಿ ನೋಡಿಕೊಳ್ಳುತ್ತಿದೆ. ಈ ಬಗ್ಗೆ ಏನೇ ವಿಚಾರಗಳಿದ್ದರೂ ನೇರವಾಗಿ ಪೋಲಿಸ್ ಕಮೀಷನರ್ ಗೆ ತಂಡ ವರದಿಯನ್ನು ಸಲ್ಲಿಸಿದೆ ಎಂದರು.
ಆ್ಯಂಟಿ ಕಮ್ಯೂನಲ್ ವಿಂಗ್ ಎಲ್ಲಾ ಕೋಮು ಗಲಭೆ ಪ್ರಕರಣಗಳಲ್ಲಿ ಹಾಗೂ ಆರೋಪಿಗಳ ಕಾರ್ಯಾಚರಣೆಯ ಬಗ್ಗೆಯೂ ನಿಗಾವಹಿಸಲಿದೆ. ಕಳೆದ 10 ವರ್ಷ ಗಳಿಂದ ಮಂಗಳೂರು ನಗರದಲ್ಲಿ ನಡೆದ ಸುಮಾರು 200 ಪ್ರಕರಣಗಳ ಬಗ್ಗೆ ಈಗಾಗಲೇ ಗಮನಹರಿಸಲಾಗಿದೆ. ಹಿಂದಿನ ಎಲ್ಲಾ ಪ್ರಕರಣಗಳ ಸಂಬಂಧ ಪಟ್ಟ ನ್ಯಾಯಾಲಯದ ವಿಚಾರಗಳ ಬಗ್ಗೆ ನಿಗಾವಹಿಸಲ್ಲಿದು ಸಂತ್ರಸ್ತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಿದೆ ಎಂದು ಪ್ರತಿಕ್ರಿಯಿಸಿದರು.