ಯುವ ನಿಧಿ ನೊಂದಣಿ ಪ್ರಕ್ರಿಯೆ ಆರಂಭ.
ಬೆಳಗಾವಿ: ಸರ್ಕಾರದ ಗ್ಯಾರಂಟಿ ಯೋಜನೆ ಯುವನುಧಿಗೆ ಶ್ರೀಮತಿ. ಸಾಧನಾ ಪೋಟೆ, ರಾಜ್ಯ ನೋಡಲ್ ಅಧಿಕಾರಿ ಮತ್ತು ಉದ್ಯೋಗ ವಿನಿಮಯ ನಿರ್ದೇಶಕರು, ಬೆಂಗಳೂರು ಆರ್ಸಿಯು ಬೆಳಗಾವಿಯ ಯುವನಿಧಿ ಸಹಾಯ ಕೇಂದ್ರವನ್ನು ಪರಿಶೀಲಿಸಲು ಆರ್ಸಿಯುಗೆ ಭೇಟಿ ನೀಡಿ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಯ ಪದವಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದರು.
ವಿದ್ಯಾರ್ಥಿಗಳ ಸಮಸ್ಯೆ ಬಗೆ ಹರಿಸುವು ನಮ್ಮ ಕರ್ತವ್ಯ ಪ್ರತಿ ತಿಂಗಳು 1 ರಿಂದ 25ರ ಒಳಗೆ ಮಾಸಿಕ ಸ್ವಯಂ ನಿರುದ್ಯೋಗ ಘೋಷಣ ನೀಡುವುದು ಯುವ ನಿಧಿ ಯೋಜನೆಯ ಕಡ್ಡಾಯವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಎಸ್ ಎಸ್ ಎಲ್ ಸಿ, ಪಿ ಯು ಸಿ, ಪದವಿ, ಸ್ನಾತಕೋತ್ತರ, ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ಪಡಿತರ ಕಾರ್ಡನೊಂದಿಗೆ ನೋಂದಾಣಿ ಮಾಡಿಕೊಳ್ಳಬೇಕು
ಪ್ರತಿ ತಿಂಗಳು ಪದವಿ ಹಾಗೂ ಸ್ನಾತಕೋತ್ತರ, ಪದವಿದರರಿಗೆ 3 ಸಾವಿರ ರೂ ಗಳು ಪ್ರತಿ ನಿರುದ್ಯೋಗ ಭತ್ಯೆಯನ್ನು ಪಡೆಯಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ , ಪ್ರೊ: ರವೀಂದ್ರನಾಥ್ ಕದಮ್ ಮೌಲ್ಯಮಾಪನ ಕುಲ ಸಚಿವರು ಬೆಳಗಾವಿ, ಡಿವೈ. ಕುಲಸಚಿವ ಗೌರಿ ಪಾಟೀಲ, ಕಚೇರಿ ಅಧೀಕ್ಷಕ ದಿವಾಕರ ಕುಲಕರ್ಣಿ, ರುದ್ರೇಶ ವಿಕ್ರಮ್ ಮಿರ್ಜಾ ಹಾಗೂ ಪರೀಕ್ಷಾ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.