Notice: Function _load_textdomain_just_in_time was called incorrectly. Translation loading for the loginizer domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home2/suvarnagiritimes/public_html/wp-includes/functions.php on line 6114
ಡಾ. ಬಿ ಆರ್ ಅಂಬೇಡ್ಕರ ನೀಡಿದ ಸಂವಿಧಾನದಿಂದ ಇವತ್ತು ನಾವು ಈ ಸ್ಥಾನದಲ್ಲಿ ಇದ್ದೇವೆ: ಶಾಸಕ ಎಂ.ಸಿ. ಶ್ರೀನಿವಾಸ. - suvarna giri times
ಬೆಳಗಾವಿಸುವರ್ಣ ಗಿರಿ ಟೈಮ್ಸ್

ಡಾ. ಬಿ ಆರ್ ಅಂಬೇಡ್ಕರ ನೀಡಿದ ಸಂವಿಧಾನದಿಂದ ಇವತ್ತು ನಾವು ಈ ಸ್ಥಾನದಲ್ಲಿ ಇದ್ದೇವೆ: ಶಾಸಕ ಎಂ.ಸಿ. ಶ್ರೀನಿವಾಸ.

ರಾಯಬಾಗ: ಜನೇವರಿ 21ರಂದು ಬೆಳಗಾವಿ ನಗರದಲ್ಲಿ ನಡೆಯಲ್ಲಿರುವ, ಜೈ ಬಾಪು, ಜೈ ಭೀಮ್ ಜೈ ಸಂವಿಧಾನ ಶತಮಾನೋತ್ಸವ ಸಮಾವೇಶದ ಪೂರ್ವಭಾವಿ ಸಭೆಯನ್ನು ಕುಡಚಿ ಪಟ್ಟಣದ ರೋಶನಿ ಪ್ಯಾಲೇಸನಲ್ಲಿ ಜರುಗಿತು.

ಶತಮಾನೋತ್ಸವದ ಪೂರ್ವಭಾವಿ ಸಭೆಯಲ್ಲಿ ಬೆಂಗಳೂರಿನ ಪುಲಿಕೇಶ ನಗರದ ಶಾಸಕ ಎ ಸಿ ಶ್ರೀನಿವಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು 1924 ರಲ್ಲಿ ಮಹಾತ್ಮ ಗಾಂಧಿ ಅವರು ಅಧ್ಯಕ್ಷತೆಯಲ್ಲಿ ಕಾಂಗ್ರೇಸ್ ಸಮಾವೇಶ ಜರುಗಿ ನೂರು ವರ್ಷಗಳ ಶತಮಾನೋತ್ಸವ ಸ್ಮರಣೆಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂದಿ, ರಾಹುಲ ಗಾಂಧಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ ಕೆ ಶಿವಕುಮಾರ ಹಾಗೂ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯದ ವಿವಿಧ ಮುಖಂಡರ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಕಾರ್ಯಕರ್ತರು ಭಾಗವಹಿಸಲಿದ್ದು ಕುಡಚಿ ಮತ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಯಶಸ್ವಿಗೊಳಿಸಲು ವಿನಂತಿಸಿದರು.

ಕುಡಚಿ ಮತಕ್ಷೇತ್ರದಿಂದ ಶಾಸಕ ಮಹೇಂದ್ರ ತಮ್ಮಣ್ಣವರ, ನೇತ್ರತ್ವದಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಬೇಕೆಂದು ಕೇಳಿ ಕೊಂಡರು,

ಬಳೆಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಎ ಸಿ ಶ್ರೀನಿವಾಸ, ಮಹಾತ್ಮ ಗಾಂಧಿ ಅವರ ತ್ಯಾಗದಿಂದ ಇವತ್ತು ನಮ್ಮ ದೇಶ ಸ್ವತಂತ್ರವಾಗಿದೆ, ಮತ್ತು ಡಾ; ಬಿ ಆರ್ ಅಂಬೇಡ್ಕರ ನೀಡಿದ ಸಂವಿಧಾನದ ಫಲವಾಗಿ ಇವತ್ತು ಅನೇಕರು ಶಾಸಕರಾಗಿದ್ದರೆ, ಸಚಿವರಾಗಿದ್ದಾರೆ ಉನ್ನತ ಹುದ್ದೇಗಳನ್ನು ಅಲಂಕರಿಸಲು ಸಾಧ್ಯವಾಗಿದೆ ಎಂದರು.

ಅಷ್ಟೆ ಯಾಕೆ ಚಹಾ ಮಾರುವ ರುವ ವೈಕ್ತಿ ಕೂಡಾ ಈ ದೇಶದ ಪ್ರಧಾನಿಯಾಗಲು ಸಾಧ್ಯವಾಗಿದೆ. ಎಂದರೆ ಅದು ಡಾ: ಬಿ ಆರ್ ಅಂಬೇಡ್ಕರ ಅವರು ನೀಡಿದ ಸಂವಿಧಾನ ಶಕ್ತಿ ಎಂದು ತೀಳಿಸಿದರು,

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ಗ್ಯಾರಂಟಿ ಕುರಿತು ವಿವರಿಸುತ್ತಾ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವವರು ಇವತ್ತು ಬೇರೆ ರಾಜ್ಯದವರು ಅನುಕರಣೆ ಮಾಡುತ್ತಿರುವುದಾಗಿ ಹೇಳಿದರು, ಮಹಾರಾಷ್ಟ್ರ, ದಿಲ್ಲಿ, ಸೇರಿ ವಿವಿಧ ರಾಜ್ಯಗಳಲ್ಲಿ ಕರ್ನಾಟಕ ಮಾಧರೆಯ ಯೋಜನೆಗಳನ್ನು ಘೋಷಿಸುತ್ತಿದ್ದಾರೆ ಎಂದು ತಿಳಿಸುತ್ತಾ, ನಮ್ಮ ಸರ್ಕಾರ ಗ್ಯಾಂರಟಿಗಳನ್ನು ಕೊಡುತ್ತಾ ಅಭಿವೃಧಿಗಳನ್ನು ಕೂಡಾ ಮುಂದು ವರಿಸುತ್ತದೆ ಎಂದು ತಿಳಿಸಿದರು,

ಈ ಸಂಬಂಧದಲ್ಲಿ ಮಹೇಂದ್ರ ತಮ್ಮಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಾಸ್ಮೀನ ಅಲಾಸೆ, ಬ್ಲಾಕ್ ಅಧ್ಯಕ್ಷ ಪ್ರದೀಪ್ ಹಾಲ್ಗುಣಿ, ಪುರಸಭೆ ಅಧ್ಯಕ್ಷ ಹಮಿದ್ದೀನ ರೋಹಿಲೆ, ಮುಶ್ಫಿಕ ಜಿನಾಬಡೆ, ಮುರಾರಿ ಬಾನೆ, ಪರಗೌಡ ಪಾಟೀಲ, ಗುರುಪಾದ ಚೌಗಲಾ, ಸಾಹೇಬಲಾಲ ರೋಹಿಲೆ, ಇಮಾಮದಿನ ಸಜ್ಜನ, ಅಬ್ದುಲಖಾದರ ರೋಹಿಲೆ,ಮಹಾದೇವ ಖಟಕಬಾವಿ, ಆನಂದ ಪಾಟೀಲ, ಲಲೀತಾ ಪೀಡಾಯಿ, ಮತಕ್ಷೇತ್ರದ ವಿವಿಧ ಗ್ರಾಮಗಳ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button