ಪೌರಸೇವೆಯ ವೃಂದದ ಹಿರಿಯ ಆರೋಗ್ಯ ನಿರೀಕ್ಷಕರ ವರ್ಗಾವಣೆ.
ಬೆಂಗಳೂರು: ಪೌರಸೇವೆಯ ಹಿರಿಯ ಆರೋಗ್ಯ ನಿರೀಕ್ಷಕರ ಮೂಲ ವೃಂದದ 25 ನೌಕರರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಪೌರಾಡಳಿತ ಸೇವೆಯ ಮುಖ್ಯಾಧಿಕಾರಿ ಶ್ರೇಣಿ-1 ವೃಂದದ ಅಧಿಕಾರಿಗಳೆಂದು ಪರಿಗಣಿಸಿ, ವೇತನ ಶ್ರೇಣಿ ರೂ.33450-62600/- 2024ರ ಪರಿಷ್ಕೃತ ವೇತನ ಶ್ರೇಣಿ ರೂ.54175-99400 ರಲ್ಲಿ ಅವರುಗಳು ಪ್ರಸ್ತುತ ಹೊಂದಿರುವ ಹುದ್ದೆಯಲ್ಲಿ ಪಡೆಯುತ್ತಿರುವ ವೇತನ ಸೇವಾ ಸೌಲಭ್ಯಗಳೊಂದಿಗೆ ಮುಖ್ಯಾಧಿಕಾರಿ ಶ್ರೇಣಿ-11 ವೃಂದಕ್ಕೆ ಆಯ್ಕೆ ಮೂಲಕ ನೇಮಕ ಮಾಡಿ ಆದೇಶಿಸಿದೆ ಹಾಗೂ ಕರ್ನಾಟಕ ಪೌರಾಡಳಿತ ಸೇವೆಯ ವೃಂದದ ಅಧಿಕಾರಿಗಳಿಗೆ ಅನ್ವಯವಾಗುವ ಸೇವಾ ನಿಯಮಾವಳಿ ಮತ್ತು ಈ ಆದೇಶದಲ್ಲಿ ವಿಧಿಸಿರುವ ಷರತ್ತಿಗೆ ಒಳಪಟ್ಟು ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.
ನಟರಾಜ್ ಹೆಚ್.ಎನ್. ಹಿರಿಯ ಆರೋಗ್ಯ ನಿರೀಕ್ಷಕರು, ನಗರಸಭೆ, ಕೋಲಾರ. ಮುಖ್ಯಾಧಿಕಾರಿ, ಪುರಸಭೆ, ಕೆ.ಆರ್.ಪೇಟೆ- ಖಾಲಿ ಹುದ್ದೆಗೆ ಸ್ವಂತ ವೇತನ ಶ್ರೇಣಿಯ ಮೇಲೆ.
ನವೀನ್ ಕುಮಾರ್ ಟಿ. ಕೆ ಹಿರಿಯ ಆರೋಗ್ಯ ನಿರೀಕ್ಷಕರು ಪ್ರಸ್ತುತ ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ದೊಡ್ಡತೋಗೂರು. ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ದೊಡ್ಡತೋಗೂರು, ಬೆಂಗಳೂರು ನಗರ ಜಿಲ್ಲೆ.
ಇನ್ನುಳಿದಂತೆ ಅಧಿಕಾರಿಗಳ ವರ್ಗಾವಣೆಯಾದ ಸಂಪೂರ್ಣ ಅಧಿಕಾರಿಗಳ ಪಟ್ಟಿ ಕೆಳಕಂಡಂತೆ ಇದೆ.