ಬೆಂಗಳೂರುಸುವರ್ಣ ಗಿರಿ ಟೈಮ್ಸ್
HMT ವಶದಲ್ಲಿರುವ ಐದು ಎಕರೆ ಜಮೀನು ವಶಪಡಿಸಿಕೊಂಡ ಅರಣ್ಯ ಇಲಾಖೆ.
ಬೆಂಗಳೂರು: ಬಹುವರ್ಷಗಳಿಂದ ಹೆಚ್.ಎಮ್.ಟಿ. ಆದೀನದಲ್ಲಿ ಐದು ಎಕರೆ ಜಮೀವನನ್ನು ವಶಪಡಿಸಿಕೊಂಡು ಅರಣ್ಯ ಇಲಾಖೆಗೆ ಸೇರಿಸಲಾಗಿದೆ.
ಈ ಕುರಿತು ಅರಣ್ಯ ಮಂತ್ರಿ ಖಂಡ್ರೆ ತಮ್ಮ ಎಕ್ಸ್ ದಲ್ಲಿ ವಶಪಡಿಸಿಕೊಂಡ ಫೊಟೊ ಸಮೇತ ಅಪ್ಲೋಡ್ ಮಾಡಿ “ಬೆಂಗಳೂರಿನಲ್ಲಿ ಹಸಿರು ಪ್ರದೇಶವನ್ನು ವೃದ್ಧಿಸಲು, ಎಚ್.ಎಂ.ಟಿ ವಶದಲ್ಲಿರುವ ಪೀಣ್ಯ ಪ್ಲಾಂಟೇಷನಲ್ಲಿ 5 ಎಕರೆ ಅರಣ್ಯ ಭೂಮಿಯನ್ನು ಇಂದು ಮರು ವಶಪಡಿಸಿಕೊಳ್ಳಲಾಯಿತು
ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ಮಾದರಿಯ ಬೃಹತ್ ಉದ್ಯಾನವನ್ನು ನಿರ್ಮಿಸುವ ಗುರಿಯೊಂದಿಗೆ, ಈ ಕ್ರಮವು ಉತ್ತರ ಬೆಂಗಳೂರಿನಲ್ಲಿ ಶುದ್ಧ ವಾತಾವರಣ ಒದಗಿಸಲು ನೆರವಾಗಲಿದೆ.
“once a forest is always a forest” ಎಂಬ ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು, ನಮ್ಮ ನೈಸರ್ಗಿಕ ಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಅರಣ್ಯ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದೆ” ಎಂದು ತಮ್ಮ ಖಾಸಗಿ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.