ಉತ್ತರ ಕನ್ನಡಸುವರ್ಣ ಗಿರಿ ಟೈಮ್ಸ್
ಶಾಲೆಯಲ್ಲಿ ಹೊಕ್ಕ ಹಾವನ್ನು ಹಿಡಿಯುವದನ್ನು ತೋರಿಸಿದ ಉಪ ವಲಯ ಅರಣ್ಯಾಧಿಕಾರಿ.
ಮುಂಡಗೋಡ: ಶಾಲೆಯಲ್ಲಿ ಹಾವನ್ನು ಹಿಡಿದು ಮಕ್ಕಳಿಗೆ ತೊರಿಸುತ್ತಿರುವ ವಿಡಿಯೋ ಒಂದು ಜೋರಾಗಿ ವೈರಲ್ ಆಗಿದ್ದು, ಮಕ್ಕಳಿಗೆ ಭಯದ ಚಿಂತೆ ದೂರಮಾಡುತ್ತಿರುವ ಅರಣ್ಯ ಅಧಿಕಾರಿ ಬಗ್ಗೆ ಪ್ರಸಂಶೆ ವ್ಯಕ್ತವಾಗಿದೆ.
ಇಂದು ಸಿಂಗನಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ಚಿಕ್ಕ ಹಾವೊಂದು ಬಂದಿತ್ತು. ನಂತರ ಅದನ್ನು ನೋಡಿದ ಮಕ್ಕಳು ಓಡಿ ಹೋದರಂತೆ. ಸುದ್ಧಿ ತಿಳಿಯುತ್ತಿದ್ದಂತೆ ತಾಲೂಕಿನ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ ಹೊನ್ನಾವರ ಹಾವನ್ನು ಹಿಡಿದು ಅವರಿಗೆ ಹೇಗೆ ಹಾವನ್ನು ಹಿಡಿಯಬೇಕು ಎಂದು ತೋರಿಸಿಕೊಟ್ಟಿದ್ದಾರೆ.
ಮಕ್ಕಳಿಗೆ ಅದರ ಬಗ್ಗೆ ಅರಿವು ಮೂಡಿಸಿ ನಂತರ ಅರಣ್ಯದಲ್ಲಿ ಬಿಟ್ಟಿದ್ದಾರೆ. ಈ ಕುರಿತು ವಿಡಿಯೋ ವೈರಲ್ ಆಗಿದ್ದು ಅಧಿಕಾರಿ ಬಗ್ಗೆ ಪ್ರಸಂಶೆ ವ್ಯಕ್ತವಾಗಿದೆ.