ಅರಣ್ಯ ಇಲಾಖೆ ಅಧಿಕಾರಿ ಪರಶುರಾಮ ಮಣಕೂರ DRFO ಮೇಲೆ SC ST ಅಟ್ರಾಸಿಟ್ ಪ್ರಕರಣ ದಾಖಲು
ಧಾರವಾಡ: ಧಾರವಾಡ ಅರಣ್ಯ ಇಲಾಖೆಯ ಅಧಿಕಾರಿ ಪರಶುರಾಮ ಮಣಕೂರ ಈತನು ಅವಿನಾಶ ರಣಕಾಂಬೆ ಉಪ ವಲಯ ಅರಣ್ಯ ಅಧಿಕಾರಿ ಇವರನ್ನು ಹೊಡೆದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ, ಕೊಲೆ ಬೆದರಿಕೆ ಹಾಕಿದ ಕುರಿತು ಉಪ ನಗರ ಪೋಲಿಸ್ ಠಾಣೆಯಲ್ಲಿ ಎಪ್.ಐ.ಆರ್ ಧಾಖಲಾಗಿದೆ.
ವೈಯಕ್ತಿಕ ದ್ವೇಶದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಮೇಲೆಯೇ ಅರಣ್ಯದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿರುವುದಾಗಿ ಪ್ರಕರಣ ಧಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಇದಾದನಂತರ ಏಕಾಎಕಿ ಬಂದು ಪರಶುರಾಮ ಮಣಕೂರ ಎಂಬಾತನು ಬಂದು ಸಿಬ್ಬಂದಿಯ ಕೊಲೆ ಬೆದರಿಕೆ ಹಾಕಿ ದಲಿತ ನೌಕರರ ಮೇಲೆ ದೌರ್ಜನ್ಯ ಎಸಗಿದ್ದು ನ್ಯಾಯಕ್ಕಾಗಿ ಪೋಲಿಸ್ ಠಾಣೆ ಮೆಟ್ಟಿಲು ಎರುವಂತಾಗಿರುತ್ತದೆ.
ಇದಕ್ಕೆಲ್ಲ ಕಾರಣ ಒಬ್ಬ ಅಧಿಕಾರಿಗಳ ಕುಮ್ಮಕ್ಕಿನಿಂದ ಎಂದು ತಿಳಿದು ಬಂದಿದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಸಲುವಾಗಿ ಕೆಳಹಂತದ ಸಿಬ್ಬಂದಿಗಳನ್ನು ಬಲಿಪಶು ಮಾಡುತ್ತಿರುವುದು ಅರಣ್ಯ ಇಲಾಖೆ ಮೊದಲಿನಿಂದಲೂ ಇರುವುದು ಹೊಸತೇನಲ್ಲ, ಆದರೆ ಈಗತಾನೇ ಧಾರವಾಡಕ್ಕೆ ಬಂದ ಒರ್ವ ಅಧಿಕಾರಿಗಳ ದುರ್ವತನೆಯಿಂದ ಇಡೀ ಇಲಾಖೇಯೇ ತಲೆತಗ್ಗಿಸುವಂತಾಗಿರುವುದು ಮಾತ್ರ ಸುಳ್ಳಲ್ಲಾ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಅಕ್ರಮವಾಗಿ ಸಾಗವಾನಿ ನಾಟಾಗಳನ್ನು ಪತ್ತೆ ಹಚ್ಚಿ ವರದಿ ಮಾಡುದ್ದೇ ತಪ್ಪಾಯಿತಾ?
ಹೌದು ತನ್ನ ವಸತಿ ಗೃಹದಲ್ಲಿ ಮಾರಾಟಕ್ಕಾಗಿ ಅಕ್ರಮವಾಗಿ ಸಾಗವಾನಿ ನಾಟಾಗಳನ್ನು ಇಟ್ಟುಕೊಂಡಿರುವುದನ್ನು ಪತ್ತೆ ಹಚ್ಚಿ ವರದಿ ಮಾಡಿದ ಅರಣ್ಯ ರಕ್ಷಕ ಮತ್ತು ಸಹೋದ್ಯೋಗಿಗಳ ವಿರುದ್ದ ತಿರುಗಿ ಬಿದ್ದ ಅಧಿಕಾರಿ, ಇತ್ತಿಚೆಗೆ ಮಣಕೂರ ಎಂಬಾತನು ಅರಣ್ಯ ಪ್ರದೇಶದಲ್ಲಿ ಸಾಗವಾನಿ ಮರಗಳನ್ನು ಕಟಾವು ಮಾಡಿ ಸಾಗಾಟ ಮಾಡುತ್ತಿರುವ ವೇಳೆಯಲ್ಲಿ ರೇಡ್ ಮಾಡಿ ಮೇಲಾಧಿಕಾರಿಗಳಿಗೆ ವರದಿ ಮಾಡಿದ ಬೆನ್ನಲ್ಲಿ, ಮೇಲಾಧಿಕಾರಿಗಳ ಕೈ ಕಾಲು ಹಿಡಿದುಕೊಂಡು ಕ್ಷಮೆ ಯಾಚಿಸಿ, ಸಿಬ್ಬಂದಿಗಳ ಜೊತೆಯಲ್ಲಿ ಸಂಧಾನ ಮಾಡಿಕೊಂಡು, ನಂತರ ಉಲ್ಟಾ ಹೊಡೆದು ಅವರ ಮೇಲೆಯೇ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡಿ ಎಪ್.ಐ.ಆರ್ ದಾಖಲಿಸಿ ಅರಣ್ಯ ಇಲಾಖೆಯಲ್ಲಿಯೇ ಪ್ರಥಮವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆಯೇ ಎಪ್.ಐ.ಆರ್ ಧಾಖಲಿಸಿದ್ದರು.
ಈ ಹಿಂದೆಯು ಇದೇ ರೀತಿ ಅಕ್ರಮವಾಗಿ ಸಾಗವಾನಿ ಮರಗಳನ್ನು ಕಟಾವು ಮಾಡಿದಾಗ ಅಮಾನತ್ತು ಮಾಡಲಾಗಿದ್ದರೂ ಇನ್ನೂ ಸಹ ಬುದ್ದಿ ಬಂದಿರುವುದಿಲ್ಲ. ಅಧಿಕಾರಿಗಳು ತಮ್ಮ ಸಬೂಬಿಗೆ ಕೆಳ ಹಂತದ ಸಿಬ್ಬಂದಿಗಳನ್ನು ಪಲಿಪಶು ಮಾಡಿರುವುದು ಕಂಡು ಬರುತ್ತಿದೆ.
ಅಧಿಕಾರಿಗಳಿಗೆ ತಪ್ಪು ಮಾಹಿತಿ, ಸುಳ್ಳು ಧಾಖಲೆ ಸೃಷ್ಟಿ:
ಕೆಳ ಹಂತದ ಸಿಬ್ಬಂದಿಗಳು ಕರ್ತವ್ಯದ ಮೇಲೆ ಇದ್ದರೂ ಅವರು ಕರ್ತವ್ಯ ಮೇಲೆ ಇರುವುದಿಲ್ಲ, ಗೈರು ಹಾಜರು ಇರುವುದಾಗಿ ರಿಪೋರ್ಟ್ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡು, ಕೆಳ ಹಂತದ ಸಿಬ್ಬಂದಿಗಳ ಅಮಾನತು ಮಾಡಿಸಿ ದಬ್ಬಾಳಿಕೆ, ವೈಯಕ್ತಿಕ ದ್ವೇಷ, ದೌರ್ಜನ್ಯ ಎಸಗಿರುವುದು ಕಂಡು ಬರುತ್ತದೆ.
ಇದಕ್ಕೆಲ್ಕಾ ಕಡಿವಾಣ ಹಾಕಲು ಕೂಡಲೇ ಹಿರಿಯ ಅಧಿಕಾರಿಗಳು ಮದ್ಯಸ್ತಿಕೆ ವಹಿಸಿ ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ವಹಿಸದಿದ್ದಲ್ಲಿ ಇಲಾಖೆ ಇನ್ನಷ್ಟು ಅಕ್ರಮಗಳು, ಹಗರಣಗಳು ಹೊರಬರುವುದರಲ್ಲಿ ಸಂಶಯವಿಲ್ಲ.