ರಾಯಚೂರುಸುವರ್ಣ ಗಿರಿ ಟೈಮ್ಸ್
ಪಾಮನಕಲ್ಲೂರ ಗ್ರಾಮ ಪಂಚಾಯತ ಕಾರ್ಯಾಲಯವೇ ಬಾರ್ !? ಕಣ್ಮುಚ್ಚಿ ಕುಳಿತ ಜಿಲ್ಲಾಧಿಕಾರಿಗಳು.
ಮಸ್ಕಿ: ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರ ಗ್ರಾಮ ಪಂಚಾಯತ್ ಕಾರ್ಯಾಲಯವನ್ನು ಸೂಗಪ್ಪ ಪರಿಚಾರಕ್ಕ ಬಾರ್ ಮಾಡಿಕೊಂಡು ಕುಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಗ್ರಾಮ ಪಂಚಾಯತಿಯಲ್ಲಿ ಈ ಬಾರ್ ಮಾಡಿಕೊಂಡು ಕುಡಿಯುತ್ತಿರುವ ವ್ಯಕ್ತಿ ಹಾಗೂ ಇನ್ನೊಬ್ಬ ವ್ಯಕ್ತಿ ಪರಸ್ಪರ ಸೇರಿ mgnreg ಕೆಲಸದ ಬಗ್ಗೆ ಮಾತನಾಡಿಕೊಂಡ ವಿಡಿಯೋ ವೈರಲ್ ಆಗಿದೆ. ಆದರೂ, ಜಿಲ್ಲಾಡಳಿತ ಇದರ ಬಗ್ಗೆ ಕ್ರಮದ ಬಗ್ಗೆ ಚಕಾರ ಎತ್ತದೇ ತುಟಿ ಬಿಚ್ಚದೇ ಸುಮ್ನೆ ಇದ್ದಾರೆ. ಇದೇ ರೀತಿ ಅನೇಕ ಸಲ ದೂರುಗಳು ತಾಲೂಕ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಪಂಚಾಯತಿಯಲ್ಲಿ ಮಧ್ಯ ಕುಡಿಯುವದು ಮಾತ್ರ ತಪ್ಪಿಲ್ಲಾ.
ನೌಕರರ ವರ್ಗವೇ ಪಂಚಾಯತಿಯನ್ನು ಬಾರ ಮಾಡಿಕೊಂಡರೇ ಇನ್ನು ಪಕ್ಕಾ ಕುಡುಕರು(ಮಧ್ಯಪ್ರೀಯರು) ಅಲ್ಲೆ ಟಿಕಾನೇ ಹಾಕುವದರಲ್ಲಿ ತಪ್ಪಿಲ್ಲಾ ಎಂದು ಗ್ರಾಮದ ಜನಾ ಮಾತನಾಡುತ್ತಿದ್ದಾರೆ.