ಬೆಳಗಾವಿಸುವರ್ಣ ಗಿರಿ ಟೈಮ್ಸ್
ಯಲ್ಲಮ್ಮನವಾಡಿಯ ವಕೀಲ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ವಕೀಲನ ಮೃತ ದೇಹ ನದಿಯಲ್ಲಿ ಪತ್ತೆ !!
ಅಥಣಿ: ಯಲ್ಲಮ್ಮವಾಡಿ ಗ್ರಾಮದ ವಕೀಲರೊಬ್ಬರು ಮನೆ ಯಿಂದ ಅಥಣಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಮನೆಗೆ ಬಾರೆದೆ ಕಾಣೆಯಾದ ವಕೀಲನ ದೇಹ ನದಿಯಲ್ಲಿ ಪತ್ತೆ ಆಗಿದೆ.
ಸುಭಾಷ ಮಾರುತಿ ಪಾಟಣಕರ (58) ಸಹೋದರನ ಪುತ್ರನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಮಿತ್ರರಿಗೆ ಕೊಟ್ಟು ಬರುವುದಾಗಿ ಹೇಳಿ ಹೋದವರು ಮರಳಿ ಬಂದಿದ್ದಿಲ್ಲಾ ನಂತರ ಕಾಣೆಯಾದ ಪ್ರಕರಣ ದಾಖಲಾಗಿತ್ತು.
ನಾಲ್ಕು ದಿನಗಳ ನಂತರ ಕಾಣೆಯಾದ ವಕೀಲನ ದೇಹ ಇಂದು ಕೃಷ್ಣಾ ನದಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಅಥಣಿ ಪೊಲೀಸರು ದೌಡಾಯಿಸಿದ್ದಾರೆ ಇದರ ಜೊತೆ ಎನ್.ಡಿ.ಆರ್.ಎಫ್ ತಂಡ ನದಿಗೆ ಇಳಿದು ದೇಹವನ್ನು ತಗೆದಿದ್ದಾರೆ
ಅಥಣಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅಥಣಿ ವಕೀಲರು ಪ್ರಕರವನ್ನು ಗಂಬೀರ ಎಂದು ಪರಿಗಣಿಸಿ ತನಿಖೆಯನ್ನು ಮಾಡಲು ಒತ್ತಾಯಿಸಿದ್ದಾರೆಂದು ತಿಳಿದು ಬಂದಿದೆ.