ಬೆಳಗಾವಿಯ ಕೌಶಲ್ಯ ಅಭಿವೃದ್ಧಿ ಉದ್ಯಮಶಿಲತೆ &ಜೀವನೋಪಾಯ ಇಲಾಖೆಯಲ್ಲಿ ರಾಷ್ಟ್ರೀಯ ನಾಯಕರಿಗೆ ಅವಮಾನ ಡಾ ಅಂಬೇಡ್ಕರರಿಗೆ ಜಾಗವೇ ಇಲ್ಲಾ.
ಬಿಗ್ ಬ್ರೇಕಿಂಗ್ಸ್
ಬೆಳಗಾವಿ: ದೇಶದಲ್ಲಿ ಎಲ್ಲಡೆ ರಾಷ್ಟ್ರೀಯ ನಾಯಕಾರದ ಮಹಾತ್ಮ ಗಾಂಧಿ ಹಾಗೂ ಡಾ ಅಂಬೇಡ್ಕರರಿಗೆ ಪೂಜ್ಯನಿಯ ಸ್ಥಾನವಿದೆ. ಆದರೆ ಸುವರ್ಣ ವಿಧಾನ ಸೌಧದಲ್ಲಿ ಮಹಾತ್ಮ ಗಾಂಧಿಯವರನ್ನು ಟೇಬಲ್ ಮೇಲೆ ಫೊಟೊ ಇಟ್ರೆ ಡಾ ಅಂಬೇಡ್ಕರರಿಗೆ ಜಾಗವೇ ಇಲ್ಲವಾಗಿದೆ.
ಈ ಇಲಾಖೆಯ ಮೊದಲು ಮಹಾಂತೇಶ ನಗರದಲ್ಲಿ ಇತ್ತು ನಂತರ ಎಸ್.ವಿ.ಎಸ್ ಸ್ಥಳಾಂತರ ಆಗಿ ಎರಡು ವರ್ಷಗಳ ಕಳೆದಿವೆ ಆದರೆ ನಾಯಕರನ್ನು ಹೇಗೆ ಗೌರವಿಸಬೇಕು ಅನ್ನೋದು ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲಾ. ಎರಡು ವರ್ಷಗಳಿಂದಲೂ ಡಾ ಅಂಬೇಡ್ಕರರ ಭಾವಚಿತ್ರವೇ ಇಲ್ಲಿ ಕಾಣಲ್ಲಾ ಆದರೆ ಅವರ ದೇವರುಗಳು ಕಾಣುತ್ತವೆ.
ಇದನ್ನು ನೋಡಲು ಒಂದ್ಸಲ ಎಸ್.ವಿ.ಎಸ್ ದಲ್ಲಿರುವ ಕೌಶಲ್ಯ ಅಭಿವೃದ್ಧಿ ಉದ್ಯಮಶಿಲತೆ ಮತ್ತು ಜೀವನೋಪಾಯ ಇಲಾಖೆ ಭೆಟ್ಟಿ ಕೊಟ್ರೆ ಸಾಕು ನಿಮಗೆ ಆಶ್ಚರ್ಯವಾಗದೇ ಇರದು. ಇಲ್ಲಿ ನೀವು ಕಣ್ಣಾರೆ ಮಹಾನ್ ನಾಯಕರಿಗೆ ಅವಮಾನ ಮಾಡಿರುವದನ್ನು ಕಾಣಬಹುದು. ಇಲ್ಲಿ ದೇವರಿಗೆ ಜಾಗವಿದೆ ಅದರೆ ನಾಯಕರಿಗೆ ಜಾಗವೇ ಇಲ್ಲಾ ಅನ್ನೊದನ್ನು ಕಾಣಬಹುದು.
ಈ ಕುರಿತು ವಕೀಲ ನಿಂಗಪ್ಪ ಭಜಂತ್ರಿ ಇವರು ಇಲ್ಲಿನ ವ್ಯವಸ್ತೆ ರಾಷ್ಟ್ರೀಯ ನಾಯಕರಿಗೆ ಅವಮಾನ ಮಾಡಿದೆ ಅನ್ನೊದರಲ್ಲಿ ಎರಡು ಮಾತಿಲ್ಲಾ. ಇಲಾಖೆಯ ಜಿಲ್ಲೆಯ ಅಧಿಕಾರಿಗಳಿಗೆ ಕೌಶಲ್ಯ ಅಂದ್ರೆನೇ ಗೊತ್ತಿಲ್ಲಾ ಅಂತಾನೇ ಅನ್ನಬಹುದು ಅಷ್ಟೇ ಎಂದು ಹೇಳುತ್ತಾರೆ.