””ಗುತ್ತಿಗೆದಾರರ ವಿರುದ್ಧ ಎಫ್‌ಐಆರ್: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ.
ಬೆಂಗಳೂರು: ಬಾಕಿ ಒತ್ತಾಯಿಸಿದ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎನ್ನುವ ಪತ್ರಿಕಾ ವರದಿಗ ಳನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ ಕಾರಿದೆ. ಸರ್ಕಾರದ ಈ ಭಂಡತನಕ್ಕೆ ಕೊನೆ ಯಾವಾಗ ಎಂದು ಪ್ರಶ್ನೆ ಮಾಡಿದೆ.
ಅಕ್ರಮಗಳನ್ನು ಪ್ರಶ್ನಿಸಿದರೆ ಜೈಲು ಗ್ಯಾರಂಟಿ, ಅಕ್ರಮಗ ಳಲ್ಲಿ ಭಾಗಿಯಾದರೆ ಪ್ರಮೋಷನ್ ಗ್ಯಾರಂಟಿ ಎಂದು ಕುಹಕವಾಡಿದೆ. ಭ್ರಷ್ಟಾಚಾರದ ಆರೋಪದಡಿ ಸೂಕ್ತ ಸಾಕ್ಷಿಗಳು ದೊರೆತರೂ, ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವ ATMSarkara, ತನ್ನ ತಪ್ಪುಗಳ ಬಗ್ಗೆ ಪ್ರಶ್ನಿಸುವವರನ್ನು ಶಿಕ್ಷಿಸಲು ಸದಾ ಸಿದ್ಧವಾಗಿರುತ್ತದೆ.
ಸರ್ಕಾರದ ಜನವಿರೋಧಿ ನೀತಿಗಳನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಪ್ರಶ್ನಿಸುವವರ ಮೇಲೆ ಎಫ್.ಐ.ಆರ್ ಮಾಡಿದ್ದಾಯ್ತು.
ಈ ಬಗ್ಗೆ ‘ಎಕ್ಸ್’ನಲ್ಲಿ ಬರೆದುಕೊಂಡಿರುವ ಬಿಜೆಪಿ, 3 ಭ್ರಷ್ಟಾಚಾ ರದ ಆರೋಪದಡಿ ಸೂಕ್ತ ಸಾಕ್ಷಿಗಳು ದೊರೆತ ರೂ, ಅಂತಹ ಅಧಿಕಾರಿ ಗಳ ವಿರುದ್ಧ ಕ್ರಮಕೈಗೊಳ್ಳಲು ಹಿಂದೇಟು ಹಾಕುವ ಎಟಿಎಂ ಸರ್ಕಾರ, ತನ್ನ ತಪ್ಪುಗಳ ಬಗ್ಗೆ ಪ್ರಶ್ನಿಸುವವರನ್ನು ಶಿಕ್ಷಿಸಲು ಸದಾ ಸಿದ್ಧವಾಗಿ ರುತ್ತದೆ ಎಂದು ಹೇಳಿದೆ.
‘ಸರ್ಕಾರದ ಜನವಿರೋಧಿ ನೀತಿಗಳನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಪ್ರಶ್ನಿಸುವವರ ಮೇಲೆ ಎಫ್‌ಐಆರ್ ಮಾಡಿದ್ದಾಯ್ತು. ಈಗ ಸರ್ಕಾರದ ಲಂಚಗುಳಿತನವನ್ನು ಬಹಿರಂಗ ಪಡಿಸಿದರು ಎಂಬ ಕಾರಣಕ್ಕೆ ಗುತ್ತಿಗೆದಾರರ ವಿರುದ್ಧ ಸಹ ಎಫ್‌ಐಆರ್ ದಾಖಲಿಸಿ ತನ್ನ ದ್ವೇಷದ ರಾಜಕಾರಣವನ್ನು ಪ್ರದರ್ಶಿಸುತ್ತಿದೆ. ಸರ್ಕಾರದ ಈ ಭಂಡತನಕ್ಕೆ ಕೊನೆ ಎಂದು?’ ಎಂದು ಪ್ರಶ್ನೆ ಮಾಡಿದೆ.