ಧಾರವಾಡಸುವರ್ಣ ಗಿರಿ ಟೈಮ್ಸ್
”ಪಿ ಎಸ್ ಐ ನೇಮಕಾತಿಗಾಗಿ ಮರು ಪರೀಕ್ಷೆ ನಡೆಸಲು ಸಿದ್ದ: ಗೃಹ ಸಚಿವ ಜಿ ಪರಮೇಶ್ವರ.
ಧಾರವಾಡ: ಪಿ ಎಸ್ ಐ ಆಕ್ರಮ ನೇಮಕಾತಿ ಹಗರಣದ ತನಿಖೆ ನಡೆದಿದೆ. ಹಿರಿಯ ಪೊಲೀಸ ಅಧಿಕಾರಿಗಳು ಸಿಕ್ಕು ಬಿದ್ದಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇರೋದರಿಂದ ನ್ಯಾಯಾಲಯದ ಆದೇಶದಂತೆ ಸರ್ಕಾರ ಮುಂದೆ ಹೆಜ್ಜೆ ಇಡಲಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ.
ಧಾರವಾಡ ಎಸ್ ಪಿ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಪರಮೇಶ್ವರ, ಯಾವದೇ ಆಕ್ರಮ ಮಾಡದ ಇರುವ ವಿಧ್ಯಾರ್ಥಿಗಳನ್ನು ನೇಮಕಾತಿ ಆದೇಶ ಮಾಡ್ತಿರೋ, ಅಥವಾ ಮರು ಪರೀಕ್ಷೆ ನಡೆಸುತ್ತಿರೋ ಎಂದು ನ್ಯಾಯಾಲಯ ಸರ್ಕಾರದ ಅಭಿಪ್ರಾಯ ಕೇಳಿದೆ. ನಾವು ಮರು ಪರೀಕ್ಷೆ ಮಾಡುತ್ತೇವೆ ಎಂದು ಹೇಳಿದ್ದೇವೆ. ಒಂದು ವೇಳೆ ನಮ್ಮ ಅಭಿಪ್ರಾಯವನ್ನು ನ್ಯಾಯಾಲ ಯ ಎತ್ತಿ ಹಿಡಿದರೆ, ನ್ಯಾಯಾಲಯದ ಆದೇಶ ಹೊರಬಿದ್ದ ಒಂದು ತಿಂಗಳಲ್ಲೇ ಪಿ ಎಸ್ ಐ ನೇಮಕಾತಿಗಾಗಿ ಮರು ಪರೀಕ್ಷೆ ನಡೆಸುತ್ತೆವೆ ಎಂದು ಗೃಹ ಸಚಿವರು ಸ್ಪಷ್ಟ ಪಡಿಸಿದರು.