”ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ.
ಧಾರವಾಡ: ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ನ್ಯಾಯ ಒದಗಿ ಸುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಧಾರವಾಡ ಜಿಲ್ಲಾಧಿ ಕಾರಿಗಳ ಹಿಂದೆ ಅಪ್ರಪ್ತ ಬಾಲಕಿ ಸೌಜನ್ಯ ಗಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಬರ್ಬರವಾಗಿ ಕೊಲೆ ಮಾಡಿ ಬಿಸಾಕಿದ್ದ ಪ್ರಕರಣಕ್ಕೆ ಇನ್ನುವರೆಗೂ ನ್ಯಾಯ ದೊರಕಲಾರದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ್ ಗೋಕಾಕ್ ಮಾತನಾಡಿ ಧರ್ಮಸ್ಥಳ ಕೊಲೆಯಾದ ಅಪ್ರಾಪ್ತ ಹೆಣ್ಣು ಮಗಳಿಗೆ 11 ವರ್ಷವಾ ದರೂ ನ್ಯಾಯ ಸಿಗದಿರುವುದು ತುಂಬಾ ದುಃಖಕರ ಅಭಿಮಾನಿ ಬಳಗ ನ್ಯಾಯ ಸಿಗುವರೆಗೂ ಹೋರಾಟ ಕೈ ಬಿಡುವುದಿಲ್ಲ.
11 ವರ್ಷಗಳ ಹಿಂದೆ ಸೌಜನ್ಯ ಮೃತದೇಹ ಪತ್ತೆ ಆದಾಗ ಕೊಲೆಗಡುಕರನ್ನು ಹುಡುಕಿ ಬಂಧಿಸಬೇಕಾದ ಪೊಲೀಸ್ ಇಲಾಖೆ ಪಟ್ಟ ಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಮಾನಸಿಕ ಅಸ್ವಸ್ಥ ನಾಗಿದ್ದ ಸಂತೋಷ್ ರಾವ್ ಎಂಬ ಅಮಾಯಕನನ್ನು ಬಂಧಿಸಿ ಚಿತ್ರಹಿಂಸೆ ನೀಡಿ ಸಂತೋಷ್ ರಾವ್ ಅವರಿಂದ ಮಾಡದ ತಪ್ಪನ್ನು ಒಪ್ಪಿಕೊಳ್ಳುವ ಹಾಗೆ ಮಾಡಿ ಸುದೀರ್ಘ 11 ವರ್ಷಗಳ ಕಾಲ ಜೈಲಿನಲ್ಲಿ ಇಟ್ಟು ಸಿಬಿಐ, ಸಿ ಐ ಡಿ ತನಿಖಾ ತಂಡಗಳು ತನಿಖೆ ನಡೆಸಿತ್ತು. ಆದರೆ ಮಾನ್ಯ ಘನ ನ್ಯಾಯಾಲಯವು ಸಂತೋಷ್ ರಾವ್ ಅವರು ಕೃತ್ಯವನ್ನು ಎಸಗಿದ್ದಾರೆ ಎಂಬುದಕ್ಕೆ ಯಾವುದೇ ರೀತಿ ನಂಬುವಂತಹ ಸಾಕ್ಷ್ಯಾಧಾರಗಳ ಇಲ್ಲ ವೆಂದು ಪ್ರಕರಣದಿಂದ ಅಮಾಯಕ ಸಂತೋಷ ರಾವ್ ಅವರನ್ನು ಬಿಡುಗಡೆಗೊಳಿಸಿತ್ತು.
ಪ್ರಕರಣದಿಂದ ಸಂತೋಷ ರಾವ್ ಬಿಡುಗಡೆಗೊಳಿಸಿದ್ದು ನಾವು ಕೂಡ ಸ್ವಾಗತಿಸುತ್ತೇವೆ ಆದರೆ ಸೌಜನ್ಯಳ ಅಪ ಹರಣ ಅತ್ಯಾಚಾರ ಕೊಲೆ ಆರೋಪಿಗಳು ಯಾರು…?
ಮಾನ್ಯ ಮುಖ್ಯಮಂತ್ರಿಗಳು ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಹೈಕೋರ್ಟಿನ ನಿವೃತ್ತ ನ್ಯಾಯ ಮೂರ್ತಿಗಳ ತನಿಖಾ ತಂಡವನ್ನು ರಚಿಸಿ ತನಿಖಾ ತಂಡಕ್ಕೆ ಸಂಪೂರ್ಣ ಸ್ವತಂತ್ರ ನೀಡಿ ಈ ಪ್ರಕರಣದಲ್ಲಿ ಎಷ್ಟೇ ದೊಡ್ಡ ಪಟ್ಟಭದ್ರ ಹಿತಾಸಕ್ತಿಗಳು ಇದ್ದರೂ ಯಾವುದೇ ಒತ್ತಡಕ್ಕೂ ಮಣಿಯದೆ ಮರು ತನಿಖೆಗೆ ಆದೇಶ ನೀಡಬೇಕು.
ಸಂತೋಷ್ ರಾವ್ ಕುಟುಂಬ ಮಧ್ಯಮ ವರ್ಗದ ಕುಟುಂಬ ವಾಗಿದ್ದರೂ ಕೂಡ ಸುಖ ಸಂತೋಷ ನೆಮ್ಮದಿಯ ಜೀವನವನ್ನು ನಡೆಸುತ್ತಿತ್ತು ಆದರೆ ಈ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಏನು ತಪ್ಪು ಮಾಡದೆ 11 ವರ್ಷ ಗಳ ಕಾಲ ಸಂತೋಷ ರಾವ್ ಹಾಗೂ ಇಡೀ ಕುಟುಂಬ ಅಕ್ಷರಶ ನಲುಗಿ ನರಕಮಯ ಯಾತನೆಯನ್ನು ಅನುಭ ವಿಸಿತ್ತು ಒಂದು ರೀತಿ ಸಾಮಾಜಿಕ ಬಹಿಷ್ಕಾರಕ್ಕೆ ಒಳ ಪಟ್ಟಂತೆ ಜೀವನ ನಡೆಸುತ್ತಿತ್ತು ಈಗ ಸಂತೋಷ ರಾವ್ ಬಿಡುಗಡೆಯ ನಂತರ ಸ್ವಲ್ಪ ಚೇತರಿಸಿ ಕೊಂಡ ಕುಟುಂಬ ಆದರೂ ಸಂತೋಷ ರಾವ್ ಸಾರ್ವಜನಿಕರಿಂದ ದೂರ ವಾಗಿ ಮಾನಸಿಕವಾಗಿ ಪೊಲೀಸರು ನೀಡಿದ ಚಿತ್ರಹಿಂಸೆ ಯಿಂದ ದೈಹಿಕವಾಗಿ ಕುಗ್ಗಿ ಹೋಗಿದ್ದು ಸರ್ಕಾರ ಆ ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಕಿರಣ್ ಉಪ್ಪಾರ ಮಾತನಾಡಿ ಭಾರತದ ಸಂವಿಧಾನದ ಮೇಲೆ ನಮಗೆ ನಂಬಿಕೆ ಇದೆ ಸೌಜನ್ಯಾರಿಗೂ ನ್ಯಾಯ ಸಿಕ್ಕೆ ಸಿಗುತ್ತದೆ ಎಂಬ ಭರವಸೆ ಇದೆ ಈ ಪ್ರಕರಣದಲ್ಲಿ ಎಷ್ಟೇ ದೊಡ್ಡ ಶಕ್ತಿ ಗಳಿದ್ದರೂ ಕೂಡ ಸರ್ಕಾರ ಮರುತನಿಗೆ ಆದೇಶಿಸಿ ಆ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಿ ಸೌಜನ್ಯಳ ಆತ್ಮಕ್ಕೆ ಶಾಂತಿಯನ್ನು ನೀಡಬೇಕು ಅಮಾಯಕ ಸಂತೋಷ್ ರಾವ್ ಅವರಿಗೆ ಸರ್ಕಾರ ಜೀವ ನೋಪಾಯಕ್ಕೆ ದಾರಿ ಮಾಡಿಕೊಡ ಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಹೇಳಿದರು.
ಅಭಿಮಾನಿ ಬಳಗದ ಸದಸ್ಯರಾದ ವೀರೇಶ್ ಗೋಂದಿ ಸಚಿನ್ ಗಾಣಿಗೇರ್ ಎಲ್ಲಪ್ಪ ಅಂಬಿಗೇರ್ ಗಣೇಶ್ ಅಂಬಿಗೇರ್ ಪ್ರವೀಣ್ ಗೋಕಾವಿ ಸಂದೀಪ್ ಭಜಂತ್ರಿ ಸೋಹನ್ ಮೂಶಣ್ಣನವರ್ ವೀರೇಶ್ ಕಡಕೋಳಮಠ ರಾಮಚಂದ್ರ ದಳವಿ ದೀಪಕ್ ಕಲಾಲ್ ರಮೇಶ್ ಪವಾಡೆ ಹಾಗೂ ಇನ್ನೂ ನೂರಾರು ಅಭಿಮಾನಿ ಬಳಗದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.