“ವಕೀಲ ವೃತ್ತಿ ದುರ್ನಡತೆ ಆರೋಪ ಸಾಬೀತು: ಮಂಗಳೂರು, ಬೆಳಗಾವಿ ವಕೀಲರ ಸನದು ಶಾಶ್ವತ ರದ್ದು ಆದೇಶ.
ಬೆಳಗಾವಿ: ವಕೀಲ ವೃತ್ತಿಯಲ್ಲಿ ದುರ್ನಡತೆ ತೋರಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಕೀಲ ಇಬ್ಬರ ಸನದು ರದ್ದುಗೊಳಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಆದೇಶ ಹೊರಡಿಸಿದೆ.
ಈ ವಕೀಲರಲ್ಲಿ ಒಬ್ಬರು ಕರಾವಳಿ ಕರ್ನಾಟಕ ಹಾಗೂ ಇನ್ನೊಬ್ಬರು ಬೆಳಗಾವಿಯವರಾಗಿದ್ದಾರೆ. ಮಂಗಳೂರಿನ ವಕೀಲರಾದ ಡಿ. ಪದ್ಮನಾಭ ಕುಮಾರ್ ಹಾಗೂ ಬೆಳಗಾವಿಯ ಪ್ರಭು ಶಿವಪ್ಪ ಯತ್ನಟ್ಟಿ ಅವರೇ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಿಂದ ಶಿಕ್ಷೆಗೆ ಹೂಳಪಟ್ಟಿದ್ದಾರೆ.
ಸನದು ರದ್ದುಗೊಂಡ ಈ ವಕೀಲರು ದೇಶದ ಯಾವುದೇ ನ್ಯಾಯಾಲಯ ಅಥವಾ ಪ್ರಾಧಿಕಾರದ ಮುಂದೆ ವಕೀಲಿಕೆ ಮಾಡದಂತೆ ಶಾಶ್ವತವಾಗಿ ತಡೆ ಹಿಡಿಯಲಾಗಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷರಾದ ವಿಶಾಲ ರಘು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಮ್ಮ ಕಕ್ಷಿದಾರರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಲು ವಿಫಲರಾದ ಹಾಗೂ ಕಕ್ಷಿದಾರರಿಗೆ ವಂಚನೆ ಮಾಡಿದ ಆರೋಪ ರುಜುವಾತು ಆದ ಕಾರಣ ಸಮರ್ಪಕ ತನಿಖೆಯ ನಂತರ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಂಗಳೂರಿನ ಡಿ. ಪದ್ಮನಾಭ ಕುಮಾರ್ ಹಾಗೂ ಬೆಳಗಾವಿಯ ವಕೀಲರಾದ ಪ್ರಭು ಶಿವಪ್ಪ ಯತ್ನಟ್ಟಿ ಸನದು ರದ್ದುಗೊಳಿಸಲಾಗಿದೆ. ಹಾಗೂ ರೂ. 20,000/- ದಂಡ ವಿಧಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.