Court newsಮುಂಬೈಸುವರ್ಣ ಗಿರಿ ಟೈಮ್ಸ್

ಕೋರ್ಟ್ ಆವರಣದಲ್ಲೇ ತಮ್ಮ ಹುದ್ದೆಗೆ ಪದತ್ಯಾಗ ಘೋಷಿಸಿದ ಜಡ್ಜ್.

ಮುಂಬೈ: ನ್ಯಾಯಾಲಯದ ಆವರಣದಲ್ಲಿಯೇ ತಮ್ಮ ಹುದ್ದೆಗೆ ನ್ಯಾಯಾಧೀಶರೊಬ್ಬರು ರಾಜೀನಾಮೆ ನೀಡಿದ ಪ್ರಸಂಗ ಮುಂಬೈ ಹೈಕೋರ್ಟ್‌ನ ನಾಗಪುರ ವಿಭಾಗೀಯ ಪೀಠದ ಆವರಣದಲ್ಲಿ ನಡೆದಿದೆ.

ಮುಂಬೈ ಹೈಕೋರ್ಟ್ ನ ನ್ಯಾಯಮೂರ್ತಿ ರೋಹಿತ್ ಬಿ. ದೇವ್ ಅವರು ರಾಜೀನಾಮೆ ನೀಡಿದ ನ್ಯಾಯಾಧೀಶರು.

ತನಗೆ ಯಾರ ವಿರುದ್ಧವೂ ನಿಷ್ಠುರ ಭಾವನೆ ಇಲ್ಲ.. ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ.. ನಾನು ನನ್ನ ಸ್ವಾಭಿಮಾನಕ್ಕೆ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ರಾಜೀನಾಮೆ ನೀಡಿದ ಬಳಿಕ ಅವರು ಹೇಳಿದ್ದಾರೆ.

ಕಳೆದ ವರ್ಷ ಮಾವೋವಾದಿ ಸಂಪರ್ಕದಲ್ಲಿ ಇರುವ ಬಗ್ಗೆ ದಾಖಲಾದ ಪ್ರಕರಣದಲ್ಲಿ ಆರೋಪಿ ಪ್ರೊಫೆಸರ್ ಜಿ.ಎಸ್. ಸಾಯಿಬಾಬಾ ಅವರ ಬಿಡುಗಡೆ ಮಾಡಿದ ನ್ಯಾಯಪೀಠದ ಸದಸ್ಯರಾಗಿದ್ದರು. ಅಲ್ಲದೆ, ಅವರು ಹೈಕೋರ್ಟ್ ನಾಗಪುರ ಪೀಠದ ಸದಸ್ಯರಾಗಿದ್ದರು.

ಸಮೃದ್ಧಿ ಎಕ್ಸ್‌ಪ್ರೆಸ್ ಯೋಜನೆಯಲ್ಲಿ ಕೆಲಸ ಮಾಡುವ ಗುತ್ತಿಗೆದಾರರ ವಿರುದ್ಧ ದಂಡನಾತ್ಮಕ ಪ್ರಕ್ರಿಯೆಗಳನ್ನು ರದ್ದುಗೊಳಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಅಧಿಕಾರ ನೀಡುವ ಸರ್ಕಾರದ ನಿರ್ಣಯದ ವಿರುದ್ಧ ತೀರ್ಪು ನೀಡಿದ ನ್ಯಾಯಪೀಠದಲ್ಲಿ ರೋಹಿತ್ ಬಿ. ದೇವ್ ಅವರಿದ್ದರು. ಈ ತೀರ್ಪು ಇತ್ತೀಚೆಗೆ ಪ್ರಕಟವಾಗಿತ್ತು.

ಡಿಸೆಂಬರ್ 4, 2025ರ ವರೆಗೆ ಸೇವಾವಧಿ ಹೊಂದಿದ್ದ ನ್ಯಾಯಮೂರ್ತಿ ರೋಹಿತ್ ಬಿ. ದೇವ್ ಅವರು ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿರುವುದು ಎಲ್ಲರಿಗೂ ಅಚ್ಚರಿ ತಂದಿದೆ.

ನ್ಯಾಯಾಧೀಶರಾಗುವ ಮುನ್ನ ಅವರು ರಾಜ್ಯದ ಅಡ್ವಕೇಟ್ ಜನರಲ್ ಆಗಿದ್ದರು. 2017ರಲ್ಲಿ ಜಸ್ಟಿಸ್ ದೇವ್ ಅವರು ಹೈಕೋರ್ಟ್ ಪೀಠಕ್ಕೆ ಪದೋನ್ನತಿ ಹೊಂದಿದ್ದರು.

Related Articles

Leave a Reply

Your email address will not be published. Required fields are marked *

Back to top button