ಬೆಳಗಾವಿ: ಗ್ರಾಮ ಪಂಚಾಯತಿಯ ಸದಸ್ಯರ ಗೌರವಧನವನ್ನು ನುಂಗಿದ ಆಲಕನೂರ ಪಂಚಾಯತ ಪಿಡಿಓ ?
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಅಲಕನೂರ ಗ್ರಾಮ ಪಂಚಾಯತಿಯ ಪಿಡಿಓ ಸದಸ್ಯರ ಗೌರವಧನವನ್ನು ನುಂಗಿ ಹಾಕಿದ ಘಟನೆ ತಡವಾಗಿ ಬೆಳಕಿಗೆ ನಡೆದಿದೆ.
ರಾಯಬಾಗ ತಾಲೂಕಿನ ಆಲಕನೂರ ಪಂಚಾಯತಿಯಲ್ಲಿ 28 ಸದಸ್ಯರು ಇದ್ದು ಪ್ರತಿ ಸದಸ್ಯರಿಗೆ ಗೌರವ ಧನ ಎಂದು ತಿಂಗಳಿಗೆ 1000=00 ರೂ ಕೊಡುತ್ತಾರೆ ಈಗ ತಿಂಗಳಿಗೆ 2000=OO ಗಳಿಗೆ ಏರಿಸಿದೆ.
ಆದರೆ, ಪಂಚಾತಿಯು 12 ತಿಂಗಳುಗಳಿಂದ ಗೌರವಧನನ್ನು ನೀಡಿಲ್ಲಾ.
ಜಿಲ್ಲಾ ಪಂಚಾಯತಿಯು ಮಾರ್ಚ ತಿಂಗಳಲ್ಲಿ 16 ಲಕ್ಷ ರೂಗಳನ್ನು ರಾಯಬಾಗಕ್ಕೆ ಅನುಧಾನ ನೀಡಿದೆ. ಅದರಲ್ಲಿ ಆಲಕನೂರ ಪಂಚಾಯತಿಗೆ 62,017 ರೂ ಗಳನ್ನು ಬಿಡುಗಡೆ ಮಾಡಿದೆ. ಅದರಂತೆ ಒಟ್ಟು 12 ತಿಂಗಳ ಗೌರವ ಬಾಕಿ ಬರೊಬ್ಬರಿ 4 ಲಕ್ಷ 69 ಸಾವಿರ ಇದೆ ಎಂದು ಹೇಳಲಾಗಿದೆ. ಆದರೆ ಗ್ರಾಮ ಸಭೆಯಲ್ಲಿ ಗೌರವಧನದ ಬಗ್ಗೆ ಪ್ರಶ್ನೆ ಎತ್ತಿದಾಗ ಹಿಂದಿನ ಪಿಡಿಓ ಅವರು ಅನುಧಾನವನ್ನು ಬಳಸಿದ್ದಾರೆಂದು ಹಾಲಿ ಪಿಡಿಓ ಹೇಳಿದ್ದಾರೆ. ಸುದ್ಧಿ ತಿಳಿದ ಪಂ ಸದಸ್ಯರು ಹೌಹಾರಿದ್ದಾರೆ.
ಈ ಕುರಿತು ಗ್ರಾಮ ಪಂಚಾಯತಿಯ ಸದಸ್ಯರು ಹಾಗು ನಾಗರೀಕರು ಸೇರಿ ಹಿಂದಿನ ಪಿಡಿಓ ಸೌಜನ್ಯ ಪ್ರಭಾಕರ್ ಹಾಗೂ ಹಿಂದಿನ ಅಧ್ಯಕ್ಷ ಸತ್ಯವ್ಯ ಪೂಜೇರಿ ಇವರ ಮೇಲೆ ಕ್ರಮ ತಗೆದುಕೊಳ್ಳಬೇಕು ಎಂದು ಬೆಳಗಾವಿ ಜಿ.ಪಂ. ಗೆ ಮನವಿ ಮಾಡಿದ್ದಾರೆ.