ಚಾಮರಾಜನಗರಸುವರ್ಣ ಗಿರಿ ಟೈಮ್ಸ್

ಪೋಷಕ ಮಹಿಳೆಯೊಂದಿಗೆ ಅನುಚಿತ ವರ್ತನೆ; ಕಾಮುಕ ಶಿಕ್ಷಕನ ಅಮಾನತ್ತು

ಹನೂರು: ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರ ಹೇಳಿ ಕೇಳಿ ಶಿಕ್ಷಣ ಹಾಗೂ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಜಿಲ್ಲೆಗಳಲ್ಲಿ ಒಂದಾಗಿದೆ.ಇಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವುದೇ ದೊಡ್ಡ ವಿಚಾರ, ಹೀಗಾಗಿ ಖಾಸಗಿ ಶಾಲೆಗಳ ಹಾವಳಿ ಕಡಿಮೆಯಿದೆ.ಆದರೆ, ಇಲ್ಲೊಬ್ಬ ಸರ್ಕಾರಿ ಶಾಲಾ ಶಿಕ್ಷಕ ಕಷ್ಟಪಟ್ಟು ಮಗುವನ್ನು ಓದಿಸುತ್ತೇನೆ ಎಂದು ಮಗುವನ್ನು ಶಾಲೆಗೆ ಬಿಡಲು ಬಂದರೆ, ಆಕೆಯ ಮೇಲೆಯೇ ಕಣ್ಣು ಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ.ಶಿಕ್ಷಕರ ದುರ್ನಡತೆಯನ್ನು ಕಂಡ ಶಿಕ್ಷಣ ಈ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ಬಸಪ್ಪನದೊಡ್ಡಿ ಗ್ರಾಮ ಸಮೀಪದ ದಾಸನದೊಡ್ಡಿ ಗ್ರಾಮದ ಭಾಗ್ಯ ಎಂಬುವರ ಪುತ್ರ ಮಾದೇವ ಅಂಗವಿಕಲನಾಗಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾನೆ. ನ.8 ರಂದು ಶಾಲೆಯಲ್ಲಿ ಅಂಗವಿಕಲ ಮಕ್ಕಳಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಭಾಗ್ಯ ಅವರು ಶಾಲೆಗೆ ತೆರಳಿದ್ದರು.

ಈ ವೇಳೆ ಇಲ್ಲಿನ ಮುಖ್ಯ ಶಿಕ್ಷಕರು ಸಮೀಪದ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಆಹಾರ ಪದಾರ್ಥಗಳನ್ನು ಪಡೆದುಕೊಳ್ಳುವಂತೆ ತಿಳಿಸಿದ್ದರು. ಅಲ್ಲಿಗೆ ತೆರಳಿದ ಭಾಗ್ಯ ಆಹಾರ ಪದಾರ್ಥಗಳನ್ನು ನೀಡುವಂತೆ ಶಿಕ್ಷಕ ವೆಂಕಟನಾರಾಯಣ ಅವರನ್ನು ಕೇಳಿದ್ದಾರೆ.ಪ್ರತಿನಿತ್ಯ ಶಾಲೆಗೆ ಮಗುವನ್ನು ಬಿಡಲು ಬರುತ್ತಿದ್ದರಿಂದ ಈ ಶಿಕ್ಷಕ ಅವರನ್ನು ಸಲುಗೆಯಿಂದ ಮಾತನಾಡಿಸಿ, ಆ ದಿನ ಅಸಭ್ಯ ವರ್ತನೆ ತೋರಿದ್ದಾನೆ.

ಇದೀಗ ಕೆಲಸದಿಂದ ಸಸ್ಪೆಂಡ್ ಆಗಿ ಮನೆಯಲ್ಲಿ ಕುಳಿತಿದ್ದಾನೆ. ಈ ಬಗ್ಗೆ ತಿಳಿದ ಸ್ಥಳೀಯರು ಶಿಕ್ಷಕನಿಗೆ ಥಳಿಸಿದ್ದು ನ.11ರಂದು ರಾಮಾಪುರ ಪೊಲೀಸ್ ಠಾಣೆಯಲ್ಲಿ ಭಾಗ್ಯ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಕಾರಣ ಬಿಇಒ ಗುರುಲಿಂಗಯ್ಯ ಅವರು ವೆಂಕಟನಾರಾಯಣ ಅವರನ್ನು ಅಮಾನತಿನಲ್ಲಿರಿಸಿ ಆದೇಶ ಹೊರಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button