ಉಚಿತ ಪ್ರಯಾಣ ಬಸ್ ಇಲ್ಲದೇ 40 ಕ್ಕೂ ಹೆಚ್ಚು ಮಹಿಳೆಯರು ಹೈರಾಣ!
ಕಾರವಾರ :- ಫ್ರೀ ಬಸ್ ಎಂದು ವೀಕೆಂಡ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಕ್ಕೆ ಬಂದ ಮಹಿಳೆಯರಿಗೆ ವಾಯುವ್ಯ ಸಾರಿಗೆ ಇಲಾಖೆ ಶಾಕ್ ನೀಡಿದೆ.
ವೀಕೆಂಡ್ ಎಂದು ತುಮಕೂರು, ಹುಬ್ಬಳ್ಳಿ,ಹಾವೇರಿ,ಮಂಡ್ಯ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಯಿಂದ ಉತ್ತರ ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರಕ್ಕೆ ಆಗಮಿಸಿದ್ದ ಮಹಿಳೆಯರು ಮುರುಡೇಶ್ವರ,ಗೋಕರ್ಣ,ಇಡಗುಂಜಿ ದರ್ಶನ ಪಡೆದು ಮರಳಿ ತಮ್ಮೂರಿಗೆ ತೆರಳಲು ಹೊನ್ನಾವರ
ನಿಲ್ದಾಣಕ್ಕೆ ಆಗಮಿಸಿದ್ದರು.
ಆದರೆ ಜಿಲ್ಲೆಯಲ್ಲಿ ಸಂಜೆ 6-30 ರ ನಂತರ ಬೇರೆ ಜಿಲ್ಲೆಗಳಿಗೆ ತೆರಳಲು ವಾಯುವ್ಯ ಸಾರಿಗೆ ಬಸ್ ಸಮಸ್ಯೆಗಳಿದ್ದು ಯಾವುದೇ ಬಸ್ ಗಳು ಇರುವುದಿಲ್ಲ. ಹೀಗಾಗಿ ಬೆಂಗಳೂರು,ಹುಬ್ಬಳ್ಳಿ, ತುಮಕೂರು,ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗೆ ತೆರಳಲು ತಡವಾಗಿ ಬಂದು ಹೊನ್ನಾವರ ಬಸ್ ನಿಲ್ದಾಣದಲ್ಲಿ ತಮ್ಮ ಮಕ್ಕಳೊಂದಿಗೆ ಸಿಲುಕಿಕೊಂಡಿದ್ದಾರೆ. ಇನ್ನು ಹೆಚ್ಚು ಜನರಿದ್ದರಿಂದ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹೆಚ್ಚುವರಿ ಬಸ್ ಬಿಡುವಂತೆ ಮನವಿ ಮಾಡಿದರು.
ಅದರಿಂದ ಹೆಚ್ಚಿನ ಬಸ್ ಇಲ್ಲದ ಕಾರಣ ಹೆಚ್ಚುವರಿ ಬಸ್ ಬಿಡಲು ಸಾರಿಗೆ ಅಧಿಕಾರಿಗಳು ನಿರಾಕರಿಸಿದ್ದಾರೆ. ಇನ್ನು ಮುಂಜಾನೆ ವರೆಗೂ ಯಾವುದೇ ಬಸ್ ಇಲ್ಲದ ಕಾರಣ ಧಾರ್ಮಿಕ ಕ್ಷೇತ್ರಕ್ಕೆ ಬಂದ ಮಹಿಳೆಯರಿಗೆ ಬಸ್ ನಿಲ್ದಾಣದಲ್ಲೇ ಇರುವ ಪರಿಸ್ಥಿತಿ ಎದುರಾಗಿದೆ.