ಮೊಗಲ್ ದೊರೆ ಔರಂಗಜೇಬ್ ಗೋರಿಗೆ ಪುಷ್ಪ ನಮನ: ಚರ್ಚಾಸ್ಪದವಾದ ಪ್ರಕಾಶ್ ಅಂಬೇಡ್ಕರ್ ನಡೆ
ಮುಂಬೈ: ವಂಚಿತ ಬಹುಜನ ಅಘಾಡಿ ಪಕ್ಷದ ಸ್ಥಾಪಕರಾದ ಪ್ರಕಾಶ್ ಅಂಬೇಡ್ಕರ್ ಅವರು ಶನಿವಾರ ಔರಂಗಾಬಾದ್ ಜಿಲ್ಲೆ ಕುಲ್ದಾಬಾದ್ ನಲ್ಲಿರುವ, ಮೊಗಲ್ ದೊರೆ ಔರಂಗಜೇಬ್ ಅವರ ಗೋರಿಗೆ ಪುಷ್ಪ ನಮನ ಸಲ್ಲಿಸಿ, ತಲೆಬಾಗಿ ನಮಸ್ಕರಿಸಿದರು.
ಈ ಬೆಳವಣಿಗೆ ಕುರಿತು ವಿಡಿಯೋ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿ, ತ್ರೀವ್ರ ಚರ್ಚೆಗೂ ಗ್ರಾಸವಾಗಿದೆ. ಟ್ರಸ್ಟ್ ಗಳ ಜೊತೆ ಗೊಡಿ ಅವರು ಗೋರಿಗೆ ಪುಷ್ಪ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಟ್ರಸ್ಟ್ ನ ಸದಸ್ಯರು ಪ್ರಕಾಶ್ ಅವರನ್ನು ಸನ್ಮಾನಿಸಿದರು.
ಗೋರಿಗೆ ಬೇಡಿ ನೀಡಿ ನಮಸ್ಕರಿಸಿದ ಕುರಿತು ಪ್ರಶ್ನೆಗೆ, ‘ಔರಂಗಜೇಬ್ ಅವರು 50 ವರ್ಷ ಆಡಳಿತ ನಡೆಸಿದರು, ಇದನ್ನು ಇತಿಹಾಸದಿಂದ ತೆಗೆಯಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಶಿವಸೇನೆ ನಾಯಕ, ಸಚಿವ ದಾದಾ ಭುಸೆ ಅವರು, ‘ಎಲ್ಲಿಗೆ ಹೋಗಬೇಕು, ಯಾರಿಗೆ ತಲೆಬಾಗಿ ನಮಸ್ಕರಿಸಬೇಕು ಎಂಬುದು ಒಬ್ಬರ ವೈಯಕ್ತಿಕವಾದ ಆಯ್ಕೆ. ಆದರೆ ‘ದ್ರುವೀಕರಣ’ ಉದ್ದೇಶದಿಂದ ಇದನ್ನು ತಪ್ಪು ಮಾಡಿದ್ದಾರೆ ಎಂದು ಹೇಳಿದರು.
ಔರಂಗಜೇಬ್ ಅಧಿಕಾರಕ್ಕೆ ಬಂದಿದ್ದು ಹೇಗೆ ?
ಇದನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರೇ ವಿವರಿಸಿದ್ದಾರೆ. ಇದಕ್ಕಾಗಿ ನೀವು ಜೈಚಂದಗೆ ಶಾಪ ಹಾಕಬೇಕು. ಜೈಚಂದ್ ನಿಂದಾಗಿ ಔರಂಗಜೇಬ್ ಅಧಿಕಾರಕ್ಕೆ ಬಂದರು ಎಂದು ಹೇಳಿದರು.