Notice: Function _load_textdomain_just_in_time was called incorrectly. Translation loading for the loginizer domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home2/suvarnagiritimes/public_html/wp-includes/functions.php on line 6114
ಬೆಳಗಾವಿ: ಸರ್ಕಾರದ ‘ಅನ್ನಭಾಗ್ಯ’ ಯೋಜನೆಯಲ್ಲಿ ರೈತರಿಂದ ಧಾನ್ಯಗಳ ಖರೀದಿಗೆ ಆಗ್ರಹ. - suvarna giri times
Belgaumsuvarna giri times

ಬೆಳಗಾವಿ: ಸರ್ಕಾರದ ‘ಅನ್ನಭಾಗ್ಯ’ ಯೋಜನೆಯಲ್ಲಿ ರೈತರಿಂದ ಧಾನ್ಯಗಳ ಖರೀದಿಗೆ ಆಗ್ರಹ.

ಬೆಳಗಾವಿ: ಕರ್ನಾಟಕ ಸರ್ಕಾರದ 5 ಗ್ಯಾರಂಟಿಗಳಲ್ಲಿ ‘ಅನ್ನಭಾಗ್ಯ’ ಯೋಜನೆ ಹಸಿದವರ ಹೊಟ್ಟೆ ತುಂಬಿಸುವ ಅತ್ಯಂತ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ರಾಜ್ಯದಲ್ಲಿ ಪಡಿತರ ಚೀಟಿದಾರರಿಗೆ ಪೂರೈಸುವುದು ಮತ್ತು ಹಸಿವಿನಿಂದ ಯಾರು ಬಳಲಬಾರದು ಅದಕ್ಕಾಗಿ ಉಚಿತ ಅಕ್ಕಿ ವಿತರಣೆ ಮಾಡುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತಾ, ಭಾರತೀಯ ಕೃಷಿಕ ಸಮಾಜ (ಸಯುಂಕ್ತ)-ಕರ್ನಾಟಕ ಹಾಗೂ ಬೆಳಗಾವಿಯ ವಿವಿಧ ಸಂಘಟನೆಗಳ ವತಿಯಿಂದ ಸರ್ಕಾರಕ್ಕೆ ನಾಡಿನ ಜನತೆ ಮತ್ತು ರೈತರ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇವೆ ಎಂದು ರಾಜ್ಯಾದ್ಯಕ್ಷರಾದ ಸಿದಗೌಡ ಮೋದಗಿ ರವರು ಪ್ರತಿಕ್ರಿಯಿಸಿದರು.

ಕೇಂದ್ರ ಸರ್ಕಾರ ಪೂರೈಸುವ ಅನ್ನಭಾಗ್ಯಕ್ಕೆ ತಡೆ ನೀಡಿದ ಕುರಿತು ಸ್ವತಃ ಮುಖ್ಯಮಂತ್ರಿಯವರ ಮಾಹಿತಿ ಹಂಚಿಕೊಂಡಿರುವುದು ತಮಗೆ ತಿಳಿದಿರುವ ಸಂಗತಿ ಆದರೆ, ಹೊರ ರಾಜ್ಯಗಳಿಂದ ಖರೀದಿ ಮಾಡುವ ಗುಣಮಟ್ಟವಲ್ಲದ, ಸಾಧಾರಣ ಅಕ್ಕಿಯನ್ನು ಹೆಚ್ಚಿನ ಧಾರಣೆ ಕೊಡುವದರಿಂದ ರಾಜ್ಯ ಸರ್ಕಾರಕ್ಕೂ ಆರ್ಥಿಕ ಹೊರೆಯಾಗುತ್ತದೆ ಮತ್ತು
ರಾಜ್ಯ ರೈತರ ಹಿತವನ್ನು ಕಡೆಗಣಿಸಿದಂತಾಗುತ್ತದೆ. ಅದಕ್ಕಾಗಿ ಅನ್ನಭಾಗ್ಯ ಕೇವಲ ಅಕ್ಕಿ ವಿತರಣೆ ಮಾಡುವದಲ್ಲಾ, ಅಕ್ಕಿಯಿಂದ ಪೌಷ್ಟಿಕತೆ ಯೋಜನೆಯೆಂದರೆ ಕೇವಲ ಅಕ್ಕಿ ನಿವಾರಣೆಯಾಗದು. ಆದಕ್ಕಾಗಿ ಅಕ್ಕಿ ಜೊತೆಗೆ, ಜೋಳ, ರಾಗಿ, ಮತ್ತು ಸಿರಿಧಾನ್ಯಗಳನ್ನ ಖರೀದಿಸಿ ಹಂಚುವದರಿಂದ ಅಪೌಷ್ಟಿಕತೆಯನ್ನು ನಿವಾರಿಸಬಹುದು.

ವಿಶೇಷವಾಗಿ, ಕರ್ನಾಟಕದಲ್ಲಿ ಪ್ರಾಂತವಾರು, ವಲಯವಾರು ಆಹಾರದಲ್ಲಿ ವಿಶಿಷ್ಟವಾದ ಇದೆ, ಉತ್ತರ ಕರ್ನಾಟಕದಲ್ಲಿ ಜೋಳ, ದ ಕಟಕದಲ್ಲಿ ಆಗಿ, ಮಧ್ಯಕರ್ನಾಟಕ ಮತ್ತು ಕರಾವಳಿ, ಮಲೆನಾಡು ಕಾಣಬಹುದಾಗಿದೆ. ಪ್ರದೇಶಗಳಲ್ಲಿ ಅಕ್ಕಿ- ಹೀಗೆ ಆಹಾರದಲ್ಲಿ ವೈವಿಧ್ಯತೆಯನ್ನು ಕಾಣಬಹುದಾಗಿದೆ.

ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿಯದೆ ಕರ್ನಾಟಕದಲ್ಲಿ ಬೆಳೆಯುವ ಜೋಳ, ರಾಗಿ, ಕುಚಲಕ್ಕಿ ಹಾಗೂ ಸಿರಿಧಾನ್ಯಗಳನ್ನು ಪಡಿತರಕ್ಕೆ ಬೇಕಾಗುವಷ್ಟು ಆಹಾರ ಧಾನ್ಯವನ್ನು ಕೃಷಿ ಇಲಾಖೆಯ ಆಥವಾ ರಾಜ್ಯ ಆಹಾರ ನಿಗಮ ಮುಖಾಂತರ ಖರೀದಿಸಬಹುದು. ಕೃಷಿ ಸಂಪರ್ಕ ಕೇಂದ್ರಗಳು ಕೇವಲ ಬೀಜ, ಕೃಷಿ ಸಲಕರಣೆ ಪೂರೈಸುವ ಕೇಂದ್ರಗಳಾಗಿವೆ. ಉಳಿದ ಸಮಯದಲ್ಲಿ ಕೃಷಿ ಸಂಪರ್ಕ ಕೇಂದ್ರಗಳನ್ನೆ ರೈತರ ಉತ್ಪನ್ನಗಳ ಖರೀದಿ ಕೇಂದ್ರಗಳಾಗಿ ಪರಿವರ್ತನೆ ಮಾಡಿದರೆ, ಇದರಿಂದ ಸರ್ಕಾರಕ್ಕೆ ಮತ್ತು ರೈತರಿಗೆ ನೆರವಾದಂತಾಗುತ್ತವೆ. ಹೋಬಳಿಗೊಂದು ಕೃಷಿ ಸಂಪರ್ಕಗಳಿರುವದರಿಂದ ಸಾಗಾಣಿಕೆ ವೆಚ್ಚ ತಗ್ಗಲಿದೆ.

ಕರ್ನಾಟಕ ಸರ್ಕಾರ ನೇರವಾಗಿ ರೈತರಿಂದ ಖರೀದಿಸುವದರಿಂದ ಹಲವಾರು ಪ್ರಯೋಜನ ಪಡೆಯಬಹುದಾಗಿದೆ. ರೈತರಿಗೆ ಪಾರದರ್ಶಕ ವ್ಯವಹಾರ, ಗುಣಮಟ್ಟ ಆಹಾರಧಾನ್ಯ, ಉತ್ತಮಧಾರಣೆ, ಸಕಾಲಕ್ಕೆ ಹಣ ಪಾವತಿ, ಸಾಗಾಣಿಕೆ ವೆಚ್ಚ ಉಳಿತಾಯ, ಏಜಂಟರ ಹಾವಳಿ ನಿಯಂತ್ರಣ, ಮತ್ತು ಮುಖ್ಯವಾಗಿ ಸಕಾರದ ಹಣ ನೇರವಾಗಿ ರೈತರಿಗೆ ತಲಪುತ್ತದೆ. ಪ್ರಾಂತವಾರು, ವಲಯವಾರು ಉಪಯೋಗಿಸುವ ಧಾನ್ಯಗಳಿಗೆ ಪ್ರಧಾನ್ಯತೆ ನೀಡಿದಂತಾಗುತ್ತದೆ. ಕೇವಲ ಅಕ್ಕಿಯಿಂದ ಪೌಷ್ಟಿಕತೆ ಸಾಧ್ಯವಿಲ್ಲಾ.

ಅದಕ್ಕಾಗಿ “ಅನ್ನಭಾಗ್ಯ” ಯೋಜನೆಯಲ್ಲಿ ನೇರವಾಗಿ ರೈತರಿಂದಲೆ ಜೋಳ, ರಾಗಿ ಸಿರಿಧಾನ್ಯಗಳನ್ನು ಖರೀದಿಸಿದದರಿಂದ ರೈತರ ಉತ್ಪನ್ನಗಳನ್ನು ಹಂಚುವ ಮೂಲಕ ರೈತರಿಗೆ ಆರ್ಥಿಕ ಸ್ವಾವಲಂಭನೆಯಾಗುತ್ತದೆ. ಬಡವರಿಗೆ ಪೂರೈಸುವ ಆಹಾರದಲ್ಲಿ ಪೌಷ್ಟಿಕತೆಯನ್ನು ಕಾಯ್ದುಕೊಳ್ಳಬಹುದು ಆರ್ಥಿಕ ಸಂಕಷ್ಟ ನಿವಾರಿಸಿದಂತಾಗುತ್ತದೆ.

ಕರ್ನಾಟಕ ಸರ್ಕಾರ ಪರಿಗಣಿಸಬೇಕು. ಜೋಳ, ರಾಗಿ, ಭತ್ತ ಹಾಗೂ ಸಿರಿಧಾನ್ಯಗಳನ್ನು ಸ್ಪರ್ಧಾತ್ಮಕ, ಸಿರಿಧಾನ್ಯಗಳನ್ನು ಸ್ಪರ್ಧಾತ್ಮಕ, ಉತ್ತಮ ಮಾರುಕಟ್ಟೆ ಬೆಲೆಗೆ ಖರೀದಿಸುವಂತೆ ಭಾರತೀಯ ಕೃಷಿಕ ಸಮಾಜ (ಸಂಯುಕ್ತ)-ಕರ್ನಾಟಕ ಹಾಗೂ ವಿವಿಧ ಸಂಘಟನೆಗಳು ಈ ಮೂಲಕ ಸರ್ಕಾರಕ್ಕೆ ಆಗ್ರಹಿಸುತ್ತೇವೆ ಎಂದು ಹೇಳಿ ಮನವಿಯನ್ನು ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button