ವಿಜಯಪುರಸುವರ್ಣ ಗಿರಿ ಟೈಮ್ಸ್

ವೃತ್ತಿಗೆ ಗೌರವವನ್ನು ಕೂಡಿಸುವ ಕೆಲಸ ಶಾಸಕರು ಮಾಡಬೇಕಿತ್ತು ಅವಮಾನವಲ್ಲ:ತಾ. ಸವಿತಾ ಸಮಾಜ ಅಧ್ಯಕ್ಷರು ರವಿ ತೇಲಂಗಿ

ಮುದ್ದೇಬಿಹಾಳ: ನಾಗರಿಕ ಸಮಾಜದ ನಿರ್ಮಾಣದಲ್ಲಿ ಕುಲವೃತ್ತಿದಾರರ ಕೊಡುಗೆ ಅಪಾರವಾಗಿದೆ ಅದೇ ರೀತಿ ಕ್ಷೌರಿಕ ವೃತ್ತಿ ಸಹ ತನ್ನದೆಯಾದ ಕೊಡುಗೆ ಸುಂದರವಾಗಿ ಕಾಣಲು ನೀಡುತ್ತಿದೆ ಇಂದು ಕ್ಷೌರಿಕ ವೃತ್ತಿಗೆ ಅವಮಾನ ಮಾಡುವ ಮೂಲಕ ಜನಪ್ರತಿನಿಧಿಗಳಾದವರು ಬುರುಡೆ ಜ್ಯೋತಿಷಿಗಳು ಮಾಡುತ್ತಿದ್ದಾರೆ ಇದನ್ನು ಸರಿಮಾಡಬೇಕಾದವರೇ ವೃತ್ತಿಗೆ ಅವಮಾನ ಮಾಡುತ್ತಿರುವುದು ದುರದೃಷ್ಟಕರವಾಗಿದ್ದೆ.

ಶನಿವಾರ ಪಟ್ಟಣದ ಕೆಇಬಿ ಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆಎಸ್ ಡಿ ನಿಗಮದ ಅಧ್ಯಕ್ಷ ಸಿ.ಎಸ್ ನಾಡಗೌಡ ಅಪ್ಪಾಜಿ ಅವರು ವಿದ್ಯುತ್ ಇಲ್ಲದೆ ಏನು ನಡೆಯವುದಿಲ್ಲವೆಂಬ ಮಾತಿನ ಭರದಲ್ಲಿ ” ಹಜಾಮತಿ ‘ ಅಂಗಡಿಗಳು ಸಹ ನಡೆಯುವುದಿಲ್ಲವೆಂದು ಕ್ಷೌರಿಕ ವೃತ್ತಿಗೆ ಅಪಮಾನ ಮಾಡಿದ್ದಾರೆ. ಶಾಸಕರು ಕಟಿಂಗ್ ಅಂಗಡಿ ಅಥವಾ ಹೇರ ಸಲೂನ ಅಂತ ಪದಬಳಕೆ ಮಾಡಬಹುದಿತ್ತು ಅದನ್ನು ಹಜಾಮತಿ ಅಂಗಡಿ ಎನ್ನುವ ಮೂಲಕ ಪವಿತ್ರ ಕ್ಷೌರಿಕ ವೃತ್ತಿಗೆ ಅಪಮಾನ ಮಾಡಿದ್ದಾರೆ ಇಂದು ಕ್ಷೌರಿಕ ಸಮಾಜದಲ್ಲಿ ಶಾಲೆ ಕಲಿತ ಮಕ್ಕಳು ಕುಲವೃತ್ತಿ ಕ್ಷೌರಿಕ ವೃತ್ತಿಯತ್ತ ಬರದೆ ಇರಲು ಕಾರಣ ಕ್ಷೌರಿಕ ವೃತ್ತಿಗೆ ಅಪಮಾನ ಮಾಡುವ ಪದಬಳಕೆಯಿಂದ ಹಜಾಮ ಹಜಾಮತಿ ಅಂತ ಸಂಭೋದನೆಗೆ ಮನನೂಂದು ಈ ವೃತ್ತಿ ಗೂಡುವೆ ಬೇಡ ಅಂತ ಬೇರೆ ಕೆಲಸ ಅರಸಿ ಪಟ್ಟಣ ಪ್ರದೇಶಗಳತ್ತ ಮುಖ ಮಾಡುತ್ತಿದ್ದಾರೆ.

ಮಾನ್ಯ ಶಾಸಕರಾದವರು ಜನಪ್ರತಿನಿಧಿಗಳು ಸರಕಾರ ಗಜೆಟ್ ನಲ್ಲಿ ಹಜಾಮ ಪದ ತಗೆದು ಹಾಕಿದೆ ಮತ್ತು ಅವಮಾನಕರ ವಾಗಿ ಕ್ಷೌರಿಕ ವೃತ್ತಿಗೆ ಮಾಡಬಾರದೆಂದು ಹೇಳಿದೆ ಇದನ್ನು ಶಾಸಕರು ಅರಿಯಬೇಕು ತುಂಬಿದ ಸಭೆಯಲ್ಲಿ ಸರಕಾರಿ ಕಾರ್ಯಕ್ರಮದಲ್ಲಿ ನಮ್ಮ ವೃತ್ತಿಗೆ ಹಿಯ್ಯಾಳಿಸುವ ಪದಬಳಕೆ ಮಾಡಬಾರದಿತ್ತು, ಜನಪ್ರತಿನಿಧಿಗಾಳಾಗಿ ಕ್ಷೌರಿಕ ವೃತ್ತಿಗೆ ಗೌರವವನ್ನು ಕೊಡುವಂತ ಕೆಲಸವನ್ನು ಮಾಡಬೇಕು ಈ ಪ್ರಮಾದವನ್ನು ಸರಿಪಡಿಸಲು ಕ್ಷಮೆಯಾಚಿಸಬೇಕು ಕ್ಷೌರಿಕ ವೃತ್ತಿಗೆ ಅಪಮಾನ ಅವಮಾನಕರ ಪದಬಳಕೆ ಮಾಡದಂತೆ ಜನತೆಗೆ ತಿಳಿಸಬೇಕು ಮತ್ತು ಅವಮಾನ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಲು ಸರಕಾರದ ಮೇಲೆ ಒತ್ತಡ ಹಾಕಬೇಕು ರವಿ ತೇಲಂಗಿ ( ಹಡಪದ) ತಾಲೂಕ ಸವಿತಾ ಸಮಾಜದ ಅಧ್ಯಕ್ಷರು.

Related Articles

Leave a Reply

Your email address will not be published. Required fields are marked *

Back to top button