Crime newssuvarna giri times

ನಕಲಿ ಐಪಿಎಸ್ ಅಧಿಕಾರಿ ಬಂಧಿಸುವಲ್ಲಿ ಅಸಲಿ ಪೋಲಿಸರು ಯಶಸ್ವಿ.

ಬೆಂಗಳೂರು:ಪೋಲಿಸ್ ಅಧಿಕಾರಿಯ ಸೋಗಿನಲ್ಲಿ ಹಲವರಿಗೆ ವಂಚನೆ ಮಾಡಿದ್ದ ನಕಲಿ ಐಪಿಎಸ್ ಅಧಿಕಾರಿಯೊಬ್ಬರನ್ನು ಕಾಟನ್ ಪೇಟೆ ಠಾಣೆ ಪೋಲಿಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

ಮದ್ದೂರು ಮೂಲದ ವಿಶುಕುಮಾರ್ ಬಂಧಿತ ಆರೋಪಿ,ಮಲ್ಲೇಶ್ವರದ ನಿವಾಸಿ ಶ್ರೀನಿವಾಸ ಎಂಬುವರು ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾನು ಪೋಲಿಸ್ ಅಧಿಕಾರಿ ಎಂದು ಹೇಳಿಕೊಳ್ಳುತ್ತಿದ ಆರೋಪಿ ಪೋಲಿಸ್ ಇಲಾಖೆಯಲ್ಲಿ ಕೆಲಸ ಕೊಡಸುವುದಾಗಿ ಮತ್ತು ವರ್ಗಾವಣೆ ಮಾಡಿಸುವುದಾಗಿ ನಂಬಿಸಿ ಹಲವರಿಂದ ಹಣ ಪಡೆದು ವಂಚಿಸಿದ್ದರು.ಇದೇ ರೀತಿ ಮಲ್ಲೇಶ್ವರ ನಿವಾಸಿ ಶ್ರೀನಿವಾಸ ಅವರಿಗೆ ತಾನು ಸಿಸಿಬಿ ಅಧಿಕಾರಿ ಎಂದು ಪರಿಚಯಸಿಕೊಂಡು ನಿಮಗೆ ಸರ್ಕಾರಿ ಕೆಲಸ ಕೊಡಸುತ್ತೇನೆ. ಸದ್ಯ ನನಗೆ ತುಂಬಾ ಹಣದ ಅವಶ್ಯಕತೆ ಇದೆ ಎಂದು ಹೇಳಿ 25 ಲಕ್ಷ ರೂಪಾಯಿ ಪಡೆದುಕೊಂಡಿದ್ದರಂತೆ.

ಕೆಲವು ದಿನಗಳ ಬಳಿಕ ಹಣ ವಾಪಸ ಕೊಡುವಂತೆ ಕೇಳಿದ್ದಾಗ ನನ್ನನ್ನೇ ದುಡು ಕೇಳುತ್ತಿಯಾ ಒದು ಒಳಗೆ ಹಾಕುತ್ತೇನೆ ಎಂದು ಧಮ್ಕಿ ಹಾಕಿದ್ದರು. ಆಗ ಅನುಮಾನ ಬಂದು ಸಿಸಿಬಿ ಪೋಲಿಸರ ಬಳಿ ಹೋಗಿ ಈತನ ಬಗ್ಗೆ ವಿಚಾರಿಸಿದ್ದಾಗ ಆರೋಪಿಯ ಬಣ್ಣ ಬದಲಾಗಿದೆ. ಬಳಿಕ ತಾವು ಮೋಸ ಹೋಗಿರುವುದನ್ನು ಅರಿತ ಶ್ರೀನಿವಾಸನ್ ಈ ಸಂಬಂಧ ಕಾಟನ್ ಪೇಟೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿ ವಿಶುಕುಮಾರ್ ವರ್ಗಾವಣೆ ದಂಧೆಯನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದರು, ತನ್ನ ಹೆಸರನ್ನು ಭುವನ ವಿ ಕುಮಾರ್‌ ಎಂದು ಬದಲಿಸಿಕೊಂಡು ನಾನೊಬ್ಬ ಐಪಿಎಸ್ ಅಧಿಕಾರಿ ಎಂದು ಎಲ್ಲರಿಗೂ ಪರಿಚಯ ಮಾಡಿಕೊಂಡಿದ್ದನು,ಅಲ್ಲದೆ ತನ್ನ ಸಂಬಂಧಿಕರು ಹಿರಿಯ ಐಪಿಎಸ್ ಅಧಿಕಾರಿಗಳಿದ್ದಾರೆ.

ಅವರು ಮೂಲಕ ವರ್ಗಾವಣೆ ಮಾಡಿಸಿಕೊಡುತ್ತೇನೆ ಮತ್ತು ಒಳ್ಳೆ ಕಡೆ ಪೋಸ್ಟಿಗ್ ಕೊಡಿಸುತ್ತೇನೆ ಎಂದು ನಂಬಿಸುತ್ತಿದ್ದ ಈತನ ಮಾತಿಗೆ ಮರುಳಾದ ಕೆಲವು ಪೋಲಿಸರು ಪೋಸ್ಟಿಗ್ ಮಾಡಿಕೊಡಲು ಹಣ ನೀಡಿದ್ದಾರೆ.

ಹೀಗೆ ಸುಮಾರು ಒಂದೂವರೆ ಕೋಟಿಗೂ ಅಧಿಕ ಹಣವನ್ನು ಪಡೆದಿದ್ದಾರೆ ಎನ್ನಲಾಗಿದೆ. ಹಣ ಪಡೆದ ಬಳಿಕ ಪೋಸ್ಟಿಗ್ ವಿಚಾರ ಕೇಳಿದಾಗ ಸಬೂಬು ಹೇಳುತ್ತಿದ್ದರು, ಇದೇ ವೇಳೆ ಈತನ ಬಗ್ಗೆ ಕಾಟನ್ ಪೇಟೆ ಪೋಲಿಸರಿಗೆ ದೂರು ಬಂದಿದ್ದು ಪೋಲಿಸರು ಕಾರ್ಯಚರಣೆಗೆ ಇಳಿದ ಸಂದರ್ಭದಲ್ಲಿ ದೂರುದಾರನಿಂದ ಹಣ ಕೊಡುತ್ತೇನೆ ಎಂದು ಕರೆಸಿಕೊಂಡಿದಾರೆ.ಹಣ ಪಡೆಯಲ್ಲು ಬಂದ ಆರೋಪಿಯನ್ನು ಬಂಧಿಸಿರುವ ಪೋಲಿಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಆರೋಪಿ ಯನ್ನು ಸಿಸಿಬಿ ಹೆಸರು ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಸಿಸಿಬಿ ವರ್ಗಾವಣೆಯಾಗುವ ಸಾಧ್ಯತೆ ಇದ್ದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button