suvarna giri timesರಾಜಕೀಯ

ಶಾಸಕ ಜನಾರ್ದನ ರೆಡ್ಡಿ, ಅವರ ಪತ್ನಿ ಒಡೆತನದ 82 ಆಸ್ತಿಗಳ ಜಪ್ತಿಗೆ ಕೋರ್ಟ್ ಆದೇಶ

ಬೆಂಗಳೂರು: 2012ರ ಎಎಂಸಿ ಅಕ್ರಮ ಕಬ್ಬಿಣದ ಅದಿರು ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಪತ್ನಿ ಲಕ್ಷ್ಮಿ ಅರುಣಾ ಅವರ 82 ಆಸ್ತಿಗಳನ್ನು ಜಪ್ತಿ ಮಾಡಲು ವಿಶೇಷ ನ್ಯಾಯಾಲಯವು ಅನುಮತಿ ನೀಡಿದೆ.

ಶಾಸಕರ ಈ ಹಿಂದಿನ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಲಯವು ಅಂದಾಜು 65.05 ಕೋಟಿ ಬೆಲೆ ಬಾಳುವ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜನಪ್ರತಿನಿಧಿಗಳ ನ್ಯಾಯಲಯದ ನ್ಯಾಯಮೂರ್ತಿ ಜಯಂತ್​ ಕುಮಾರ್ ಆದೇಶ ಹೊರಡಿಸಿದ್ದಾರೆ.

ಜನಾರ್ದನ ರೆಡ್ಡಿ ಹೆಸರಲ್ಲಿರುವ 6 ಹಾಗೂ ಲಕ್ಷ್ಮಿ ಅರುಣಾ ಹೆಸರಿನಲ್ಲಿದ್ದ 117 ಆಸ್ತಿಗಳನ್ನು ಜಪ್ತಿ ಮಾಡುವಂತೆ ಸಿಬಿಐ ಕೋರಿತ್ತು. ಪ್ರಸ್ತುತ ಪ್ರಕರಣದಲ್ಲಿ ಆರೋಪಿಸಲಾದ ಅಪರಾಧಗಳು ಪ್ರಾರಂಭವಾಗುವ ಮೊದಲು ಇತರ ಆಸ್ತಿಗಳನ್ನು ಖರೀದಿಸಿದ್ದರಿಂದ ನ್ಯಾಯಾಲಯವು ರೆಡ್ಡಿಯವರು ಮೇಲೆ 2009 ಜನವರಿ ನಂತರ ಖರೀದಿ ಮಾಡಿದ 5 ಆಸ್ತಿ ಮತ್ತು ಅರುಣಾರವರ 77 ಆಸ್ತಿಗಳನ್ನು ಜಪ್ತಿ ಮಾಡಲು ಅನುಮತಿಸಿತು.

ಕೇಸ್‌ ಸಂಖ್ಯೆ​ 135/2013ರ ಅಂತಿಮ ಆದೇಶ ಆಗುವವರೆಗೂ ಆಸ್ತಿ ಮುಟ್ಟುಗೋಲು ಹಾಕುವಂತೆ ಆದೇಶ ಹೊರಡಿಸಿದೆ. ಸೈಟ್, ಕಟ್ಟಡ, ಖಾಲಿ ಜಮೀನು ಸೇರಿದಂತೆ ನೂರಕ್ಕೂ ಅಧಿಕ ಆಸ್ತಿಗಳು ಬಗ್ಗೆ ಸರಿಯಾದ ದಾಖಲೆ ನೀಡಲು ಕೋರ್ಟ್​ ಕೋರಿದೆ.

2023ರ ಜನವರಿ 12 ರಂದು ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಕರ್ನಾಟಕ ಗೃಹ ಇಲಾಖೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಹಾಗಾಗಿ ಈಗಾಗಲೇ ಸಿಬಿಐ ಅಧಿಕಾರಿಗಳು ಪ್ರಕರಣದ ತನಿಖೆ ವೇಳೆ ಆಸ್ತಿಗಳನ್ನ ಗುರುತಿಸಿಕೊಂಡಿದ್ದರು.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲೆ ಪ್ರವೇಶಿಸದಂತೆ ತಡೆಯಲಾಗಿದೆ. ಹಾಗಾಗಿ ಅವರು ಗಂಗಾವತಿ ಕ್ಷೇತ್ರದಿಂದ ಕೆಆರ್‌ಪಿಪಿ ಪಕ್ಷದಿಂದ ಕಣಕ್ಕಿಳಿದು ಜಯ ಕಂಡಿದ್ದರು. ಆದರೆ ಬಳ್ಳಾರಿ ಕ್ಷೇತ್ರಕ್ಕೆ ತಮ್ಮ ಪತ್ನಿ ಲಕ್ಷ್ಮಿ ಅರುಣಾರನ್ನು ಕಣಕ್ಕಿಳಿಸಿದರೂ ಅವರು ಸೋಲು ಅನುಭವಿಸಿದರು.

Related Articles

Leave a Reply

Your email address will not be published. Required fields are marked *

Back to top button