ಕೇಂದ್ರ ಮಂತ್ರಿ ಅಮೀತ ಶಾ ಇವರನ್ನು ಮಂತ್ರಿಗಿರಿಯಿಂದ ವಜಾಗೊಳಿಸಲು ಬೆಳಗಾವಿ ವಕೀಲರಿಂದ ಆಗ್ರಹ.
ಬೆಳಗಾವಿ: ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೇಯ ವಕೀಲರುಗಳು ಮತ್ತು ಭಾರತ ರತ್ನ ಡಾ।। ಬಾಬಾ ಸಾಹೇಬ ಅಂಬೇಡ್ಕರಿಗೆ ಕಳೆದ ವಾರ ಸಂಸತ್ತಿನ ಅಧಿವೇಷನದಲ್ಲಿ ಸಂವಿಧಾನದ 75ನೇ ವರ್ಷದ ಚರ್ಚಾ ವಿಷಯದಲ್ಲಿ ಕೇಂದ್ರ ಗೃಹ ಮಂತ್ರಿಗಳಾದ ಅಮೀತ ಶಾ ಇವರು ಭಾರತ ರತ್ನ ಡಾ॥ ಬಾಬಾ ಸಾಹೇಬ ಅಂಬೇಡ್ಕರರ ಕುರಿತು ಅವಹೇಳನ ಮಾಡಿದ್ದಕ್ಕಾಗಿ ಮಂತ್ರಿಗಿರಿಯಿಂದ ವಜಾ ಮಾಡಬೇಕು ಎಂದು ಇಂದು ಬೆಳಗಾವಿಯಲ್ಲಿ ಆಗ್ರಹಿಸಿದರು.
ಮುಂದಾಳತ್ವ ವಹಿಸಿದ್ದ ವಕೀಲ ಸುರೇಂದ್ರ ಉಗಾರೆ ಶಾ ಇವರ ಅವಹೇಳನ ಹೇಳಿಕೆಯು ಅಖಂಡ ಭಾರತಕ್ಕೆ ಅವಮಾನ ಮಾಡಿದಂತೆ. ಇಂತಹ ಅವಮಾನವನ್ನು ನಾವು ಖಂಡಿಸುತ್ತೇವೆ. ಸಂವಿದಾನವನ್ನು ಬರೆದಂತಹ ಪಿತಾಮಹಾ ಭಾರತ ರತ್ನ ಡಾ॥ ಬಾಬಾ ಸಾಹೇಬ ಅಂಬೇಡ್ಕರರ ಬಗ್ಗೆ ಸರಿಯಾದ ಮಾತನಾಡದೇ ಸಂವಿಧಾನಿಕ ಹುದ್ದೆಯಲ್ಲಿದ್ದು ಸವಿದಾನದ ಆಧಾರದ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡಿ ಸಂವಿದಾನ ಬರೆದಂತಹ ಪಿತಾಮಾಹಾನಿಗೆ ಅವಮಾನ ಮಾಡಿದ್ದು ಇರುತ್ತದೆ ಎಂದರು.
ಆದ್ದರಿಂದ ತಕ್ಷಣವೇ ಕೇಂದ್ರ ಗೃಹಮಂತ್ರಿಗಳಾದ ಅಮೀತ ಶಾ ಇವರನ್ನು ಮಂತ್ರಿಹುದ್ದೆಯಿಂದ ತಕ್ಷಣವೆ ವಜಾಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇ ಸಮಯದಲ್ಲಿ ವಕೀಲರಾದ ಬಾಳಕೃಷ್ಣ ಕಾಂಬಳೆ, ಲಕ್ಷ್ಮಣ್ ಅಕ್ಕೇನ್ನವರ್, ಎಮ್ ಎಮ್ ಮಿರಜನ್ನವರ, ಎನ್ ಆರ್ ಲಾತೂರ್, ಅಜೀತ್ ಕೋಲಕಾರ್, ಕುಮಾರ್ ಕಾಂಬಳೆ, ಅಯ್ ಜಿ ನದಾಪ್, ನಿಂಗಪ್ಪ ಭಜಂತ್ರಿ ಶಕುಂತಲಾ ಕಾಂಬಳೆ ಉಮಾ ಕಾಂಬಳೆ ಇತರ ವಕೀಲರು ಹಾಜರಿದ್ದರು.