ಕಳೆದ 12 ದಿನಗಳಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ; ತಹಶೀಲ್ದಾರ ಕಾರ್ಯಾಲಯದ ಮುಂದೆ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಧರಣಿ ಸತ್ಯಾಗ್ರಹ.!!
ಚಿಕ್ಕೋಡಿ: ಕಳೆದ 12 ದಿನಗಳಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂದು, ತಹಶೀಲ್ದಾರ ಕಾರ್ಯಾಲಯದ ಮುಂದೆ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಧರಣಿ ಸತ್ಯಾಗ್ರಹ ನಡೆದಿದೆ, ಆದರೆ ಯಾವೊಬ್ಬ ಜನಪ್ರತಿನಿಧಿಗಳು ವೇದಿಕೆಗೆ ಭೆಟ್ಟಿ ನೀಡದೇ ಇರುವುದು ಖಂಡನೀಯ.
ಚಿಕ್ಕೋಡಿ ತಹಶೀಲ್ದಾರ ಚಿದಂಬರ ಕುಲಕರ್ಣಿ ಅವರು ವೇದಿಕೆಗೆ ಭೆಟ್ಟಿ ನೀಡಿ, ಹೋರಾಟಗಾರರ ಯೋಗಕ್ಷೇಮ ವಿಚಾರಿಸಿದರು, ಹೋರಾಟಗಾರರು ತಮಗೆ ನ್ಯಾಯ ಸಿಗಲಿಲ್ಲ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು, ಈ ಸಂಧರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಕಳೆದ 25 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಬೇಡಿ ವಿವಿಧ ತರದ ಹೋರಾಟ ಮಾಡುತ್ತ ಬಂದಿದ್ದೇವೆ, ಸರಕಾರಕ್ಕೆ ಎಳ್ಳಷ್ಟು ಕನಿಕರ ಬರಲಿಲ್ಲ, ನಮ್ಮ ಹೋರಾಟ ಎಂದಿಗೂ ನಿಲ್ಲದು, ಮುಂದೆಯೂ ಸಹ ನಿರಂತರ ಇರಲಿದೆ ಎಂದು ಹೇಳಿದರು.
ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ ಉತ್ತರ ಕರ್ನಾಟಕದ ಜನರು ವೋಟು ಹಾಕಲಿಕ್ಕೆ ಮತ್ತು ತೆರಿಗೆ ತುಂಬಲಿಕ್ಕೆ ಮಾತ್ರ ಸೀಮಿತರಾಗಿದ್ದಾರೆ, ಇವರ ಅಭಿವೃದ್ಧಿಯ ಬಗ್ಗೆ ಯಾವ ಸರಕಾರಕ್ಕೂ ಆಸಕ್ತಿ ಇರುವುದಿಲ್ಲ, ಹೀಗೆಯೇ ಮುಂದುವರಿದರೆ ಶ್ರೀ ಸಂಪಾದನಾ ಮಹಾಸ್ವಾಮಿಗಳ ನೇತೃತ್ವದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡುವ ದಿವಸಗಳು ಇನ್ನೇನು ದೂರವಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ತಹಶೀಲ್ದಾರ ಚಿದಂಬರ ಕುಲಕರ್ಣಿ ಅವರು ಮಾತನಾಡಿ ಚಳಿಗಾಲದ ಅಧಿವೇಶನ ಅಂತೂ ಮುಕ್ತಾಯಗೊಂಡಿದೆ, ತಮ್ಮ ಪ್ರಯತ್ನ ವಿಫಲಗೊಂಡ ಬಗ್ಗೆ ನಮಗೂ ಸಹ ಅಸಮಾಧಾನ ತಂದಿದೆ, ಸರಕಾರಕ್ಕೆ ಬೇಕಾಗುವ ಎಲ್ಲ ಮಾಹಿತಿಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಿ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾಗಲು ಸರಕಾರಕ್ಕೆ ಅನುಮೋದಿಸುತ್ತೇವೆ ದಯಮಾಡಿ ಹೋರಾಟಗಾರರು ತಮ್ಮ ಹೋರಾಟವನ್ನು ಇಂದಿಗೇ ಕೈ ಬಿಟ್ಟು ತಮ್ಮ ತಮ್ಮ ಮನೆಗಳಿಗೆ ತೆರಳಿ ಎಂದು ವಿನಂತಿಸಿದರು.
ತಹಶೀಲ್ದಾರರ ಹೇಳಿಕೆಯನ್ನು ಪಡೆದ ಎಲ್ಲ ಹೋರಾಟಗಾರರು ಮಾನ್ಯ ತಹಶೀಲ್ದಾರ ಸಾಹೇಬರಿಗೆ ಗೌರವ ನೀಡುವ ಮೂಲಕ, ಕೆಲವು ದಿನಗಳ ಮಟ್ಟಿಗೆ ಹೋರಾಟವನ್ನು ಹಿಂಪಡೆದು ಮಟಕುಗೊಳಿಸಿದರು.
ಈ ಸಂಧರ್ಭದಲ್ಲಿ ಶ್ರೀಕಾಂತ ಅಸೋದೆ, ಅಪ್ಪಾಸಾಹೇಬ ಹಿರೆಕೋಡಿ, ದುರದುಂಡೇಶ್ವರ ಬಡಿಗೇರ, ದಯಾನಂದ ಮಾಂಜರೇಕರ, ಅಮೂಲ ಮಾಳಿ, ರಮೇಶ ಡಂಗೇರ, ದಾದಾ ಮಗದುಮ್, ಮೋಹನ ಪಾಟೀಲ, ಬಿಜೆಪಿ ಓಬಿಸಿ ಜಿಲ್ಲಾ ಘಟಕದ ಅಧ್ಯಕ್ಷರಾದ ಭೀಮಸಿ ಬನಶಂಕರಿ, ಸಾಬಣ್ಣಾ ಹಿಟ್ಟಣಗಿ, ಸಚೀನ ದೊಡ್ಡಮನಿ ಹಾಗೂ ಹಲವಾರು ಹೋರಾಟಗಾರರು ಉಪಸ್ಥಿತರಿದ್ದರು.