ಚಾಮರಾಜನಗರಸುವರ್ಣ ಗಿರಿ ಟೈಮ್ಸ್
ಚಾಮರಾಜನಗರದಲ್ಲಿ ಅಕ್ರಮ ಸೇಂದಿ ಮಾರಾಟ: ಇಬ್ಬರ ಬಂಧನ
ಚಾಮರಾಜನಗರ: ದಕ್ಷಿಣಕನ್ನಡ ಜಿಲ್ಲೆ ಹೊರತು ಪಡಿಸಿ ಬೇರೆಡೆ ಸೇಂದಿ ಇಳಿಸುವುದನ್ನು ನಿಷೇಧಿಸಲಾಗಿದೆ. ಇದನ್ನು ಇಳಿಸುವುದು ಮತ್ತು ಸಂಗ್ರಹಿಸಿಡುವುದು ಅಪರಾಧವಾಗಿದೆ. ಈ ಜಿಲ್ಲೆಯ ಸಂತೇಮರಹಳ್ಳಿ ಸಮೀಪದ ಉಮ್ಮತ್ತೂರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 82 ಲೀಟರ್ ಸೇಂದಿ ಪತ್ತೆಯಾಗಿದೆ.
ಕುಮಾರ್ ಕೊಳತ್ತೂರು ಇವರು ಉಮ್ಮತ್ತೂರು ಗ್ರಾಮದ ನಿವಾಸಿ ಪುಟ್ಟಣ್ಣ ಎಂಬುವರ ತೋಟದಲ್ಲಿ ಅಕ್ರಮವಾಗಿ ಸುಮಾರು 82 ಲೀಟರ್ ಸೇಂದಿಯನ್ನು ಇಳಿಸಿ, ಸಂಗ್ರಹಿಸಿ ಮಾರಾಟ ಮಾಡಲು ತಯಾರಿ ನಡೆಸಿದ್ದರು.
ತೋಟದಲ್ಲಿ ಸೇಂದಿ ಸಂಗ್ರಹಿಸಿರುವ ಖಚಿತ ಮಾಹಿತಿಯ ಮೇರೆಗೆ ಕುದೇರು ಪೊಲೀಸ್ ಠಾಣೆಯ ಪಿಎಸ್ ಐ ಕುಮದಾ ನೇತೃತ್ವದಲ್ಲಿ, ಪೊಲೀಸ್ ಸಿಬ್ಬಂದಿ ನಾಗನಾಯಕ, ಉಮೇಶ್ ಹಾಗೂ ವಿಜಯಕುಮಾರ ದಾಳಿ ನಡೆಸಿ, ಆರೋಪಿ ಕುಮಾರ್ ಬಿನ್ ಪಳನಿಸ್ವಾಮಿ ಹಾಗೂ ಕೊಳತ್ತೂರು ಎಂಬುವರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.