ಬೆಳಗಾವಿಸುವರ್ಣ ಗಿರಿ ಟೈಮ್ಸ್

ಹಿಂದೂಳಿದ ವರ್ಗಗಳ ಜಿಲ್ಲಾ ಅಧಿಕಾರಿ ಶಿವಪ್ರಿಯಾ ಸ್ಪಷ್ಟನೆ: ತುಟಿ ಬಿಚ್ಚದ ಜಿಲ್ಲಾಡಳಿತ, ಗೊಂದಲದಲ್ಲಿ ಅಧಿಕಾರಿ ವರ್ಗ !?

ಬೆಳಗಾವಿ: ಇಲಾಖೆಯ ಸಿಬ್ಬಂದಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವು ಸತ್ಯಕ್ಕೆ ದೂರವಾಗಿದ್ದು, ದೂರುಪತ್ರವೊಂದಕ್ಕೆ ಬಳಸಲಾಗಿರುವ ಸಹಿಗಳು ಕೂಡ ಇದಕ್ಕೆ ಸಂಬಂಧಿಸಿರುವುದಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶಿವಪ್ರಿಯಾ ಕಡೇಚೂರ ಅವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ದಿನಾಂಕ 5-11-2024 ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಇಲಾಖೆಯ ವಸತಿನಿಲಯಗಳ ಮೆನು ಹಾಗೂ ಡಯಟ್ ಬದಲಾವಣೆಗೆ ಸಂಬಂಧಿಸಿದಂತೆ ಮಾನ್ಯ ಸಚಿವರಿಗೆ ಸಲ್ಲಿಸಲು ಸಿದ್ಧಪಡಿಸಲಾಗಿದ್ದ ಮನವಿಪತ್ರಕ್ಕೆ ಮಾಡಲಾಗಿರುವ ಸಹಿಗಳನ್ನೇ ದುರ್ಬಳಕೆ‌ ಮಾಡಿಕೊಂಡು ಇದಕ್ಕೆ ಸಂಬಂಧವಿಲ್ಲದ ದೂರುಪತ್ರಕ್ಕೆ ಬಳಕೆ‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇಲಾಖೆಯ ಸಿಬ್ಬಂದಿ ಅಥವಾ ವಸತಿನಿಲಯಗಳ ಮೇಲ್ವಿಚಾರಕರಿಗೆ ಯಾವುದೇ ರೀತಿಯ ಕಿರುಕುಳ ನೀಡಿರುವುದಿಲ್ಲ. ಇಲಾಖೆಯ ಪ್ರತಿಯೊಂದು ಕೆಲಸವನ್ನು ಸರಕಾರದ ನಿಯಮ ಮತ್ತು ಮಾರ್ಗಸೂಚಿಯ ಪ್ರಕಾರವೇ ನಿರ್ವಹಿಸಲಾಗುತ್ತಿದೆ. ಹಲವಾರು ದಿನಗಳಿಂದ ವಿನಾಕಾರಣ ತಮಗೆ ಕಿರುಕುಳ ನೀಡಲಾಗುತ್ತಿದ್ದು, ಆದಾಗ್ಯೂ ಇಲಾಖೆಯ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ ಎಂದು ಶಿವಪ್ರಿಯಾ ಕಡೇಚೂರ ತಿಳಿಸಿದ್ದಾರೆ.

ಆದರೆ ಬೆಳಗಾವಿಯ ಜಿಲ್ಲೆಯಲ್ಲಿ ಜಿಲ್ಲಾ ಅಧಿಕಾರಿಯ ಕಿರುಕುಳ ಕುರಿತು ೧೩ ಅಂಶಗಳ ಸಮೇತ ಮನವಿ ಮಾಡಿದ್ದರೂ ಕೆಲವು ಜನರ ಕಾಲ್ ರಿಕಾರ್ಡಗಳು ಹಾಗಿ ಅಧಿಕಾರಿಗಳ ಸಹಿಯ ಕುರಿತು ದುರುಪಯೋಗ ವಾಗಿದೆ ಸ್ಪಷ್ಟಣೆ ನೀಡಿದ್ದಾರೆ. ಅದು ಸ್ಪಷ್ಟಣೆ ಯಾರಿಗೆ ಎಂಬುದು ಸಂಶಯ ಬರದೇ ಇರದು. ಕೇವಲ ನಾಲ್ಕು ಜನರು ಸ್ಪಷ್ಟಣೆ ಕೊಟ್ರೆ ಮುಗೀತಾ ? ೮೦ ಜನ ಅಧಿಕಾರಿಗಳು ಸಹಿ ಮಾಡಿ ಈಗ ದುರುಪಯೋಗ ಪಡಿಸಿಕೊಂಡಿದ್ದಾರೆ ಇವರು ಅಧಿಕಾರ ವರ್ಗನಾ ? ಹೆಬ್ಬಟ್ಟಿನ ಗ್ಯಾಂಗ ಕಣ್ಮುಚ್ಚಿ ಮನವಿಗೆ ಸಹಿ ಮಾಡಲು. ತಮ್ಮ ನೋವನ್ನು ೧೩ ಅಂಶಗಳಲ್ಲಿ ಪಟ್ಟಿ ಮಾಡಿ ಕೊಟ್ಟಿದ್ದಾರೆ. ಹೀಗೆ ಹೇಳಿಕೊಳ್ಳದಿದ್ದರೆ ಮೊನ್ನೆ ಮೊನ್ನೆ ಆತ್ಮ ಹತ್ಯೆಗೆ ಶರಣಾದ ಕಂದಾಯ ಅಧಿಕಾರಿ ತರಹ ಹಿಂದೂಳಿದ ವರ್ಗಗಳ ಇಲ್ಲಾಖೆಯಲ್ಲಿ ಆತ್ಮ ಹತ್ಯೆ ಮಾಡಿಕೋಬೇಕಾ ? ಅಥವಾ ಆತ್ಮಹತ್ಯೆ ಮಾಡಿಕೊಂಡ ಮೇಲೆಯೇ ಜಿಲ್ಲಾಡಳಿತ ಎಚ್ಚರ ವಾಗುತ್ತಾ ಎಂಬುದು ಪ್ರಶ್ನೆ ಮೂಡುವಂತಾಗಿದೆ. ಅಥವಾ ಜಿಲ್ಲಾಡಳಿತ ಯಾವ ಗುಂಗಿನಲ್ಲಿದೆ ಎಂಬುದನ್ನು ಜಿಲ್ಲಾಡಳಿತವೇ ಸ್ಪಷ್ಟವಾಗಿ ಹೇಳಬೇಕಾಗಿದೆ.

ಆದರೆ ಜಿಲ್ಲಾಧಿಕಾರಿ ಮೊಹಮ್ಮದ, ಜಿಲ್ಲಾ ಪಂಚಾಯತ ಸಿಇಓ ಸೈಲೆಂಟ ಹೋಗಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸೈಲೆಂಟ್ ಆಗಿದ್ದಾರೆ. ಒಟ್ಟಾರೆ, ಈ ಮೂವರು ಸೈಲೆಂಟ್ ಆಗಿದ್ದಾರೆ ಅಂದರೆ ಜಿಲ್ಲಾ ಅಧಿಕಾರಿ ಶಿವಪ್ರೀಯಾ ಕಡೆಚೂರ ಇವರನ್ನು ರಕ್ಷಣೆ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡೆ ಮುಡುತ್ತದೆ. ಈ ಮೂವರ ತಿಕ್ಕಾಟದಲ್ಲಿ ೮೦ ಜನ ಅಧಿಕಾರ ವರ್ಗದವರ ಮುಂದಿನ ಕಥೆ ಎನು ?

Related Articles

Leave a Reply

Your email address will not be published. Required fields are marked *

Back to top button