ಬೆಳಗಾವಿಸುವರ್ಣ ಗಿರಿ ಟೈಮ್ಸ್

ಜಿಲ್ಲಾ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ: ಸರ್ವಾಧಿಕಾರಿ ಆದ್ರಾ ಶಿವಪ್ರೀಯಾ ಕಡೆಚೂರ ? ಬಂಡೆದ್ದ ತಾಲೂಕಾ ಅಧಿಕಾರಿಗಳು & ಕಿರಿಯ ಅಧಿಕಾರಿಗಳು.‌

Big Breaking

ಬೆಳಗಾವಿ: ಬೆಳಗಾವಿ ಜಿಲ್ಲಾ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಕುಮಾರಿ ಶಿವಪ್ರೀಯಾ ಕಡೆಚೂರ ವಿರೂದ್ದ ತಾಲೂಕಿನ ಅಧಿಕಾರಿಗಳು ಸಮೇತ ಸುಮಾರು ೮೦ ಜನ ಅಧಿಕಾರಿ ವರ್ಗ ಉಸ್ತುವಾರಿ ಮಂತ್ರಿಗಳಿಗೆ ನ್ಯಾಯ ಕೊಡಿಸಲು ಮನವಿಯ ಪಟ್ಟಿಯನ್ನೇ ಮಾಡಿದ್ದಾರೆಂದು ತಿಳಿದು ಬಂದಿದೆ.

ಅಧಿಕಾರಿ ವರ್ಗ ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದು ಹೀಗೆ:

ಬೆಳಗಾವಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಳಗಾವಿ ಜಿಲ್ಲೆಯ ಸಿಬ್ಬಂದಿಗಳು ಉತ್ತಮ ಕೆಲಸ ಹಾಗೂ ಎಲ್ಲಾ ವಸತಿ ನಿಲಯಗಳನ್ನು ಅಚ್ಚುಕಟ್ಟಾಗಿ. ವ್ಯವಸ್ಥಿತವಾಗಿ ನಿರ್ವಹಿಸುವದರ ಜೊತೆಗೆ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ ಕಳೆದ ಒಂದುವರೆ ವರ್ಷದಿಂದ ಕುಮಾರಿ ಶಿವಪ್ರಿಯಾ ಕಡೇಚೂರ, ಮಾನ್ಯ ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಳಗಾವಿ ಇವರ ಅಸಹಕಾರದಿಂದ ಪ್ರಸ್ತುತ ದಿನಗಳಲ್ಲಿ ವಸತಿ ನಿಲಯಗಳ ನಿರ್ವಹಣೆಯಲ್ಲಿ ಹಲವಾರು ಸಮಸ್ಯೆಗಳು, ತೊಂದರೆಗಳು, ಅಡಚಣೆಗಳುಂಟಾಗುತ್ತಿದ್ದು ಸುಗಮವಾಗಿ ವಸತಿ ನಿಲಯ ನಿರ್ವಹಿಸುವುದು ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಇವರ ಸತತ ಅಸಹಕಾರ ಹಾಗೂ ದ್ವೇಷದಿಂದ ಕೂಡಿದ ಆಡಳಿತದಿಂದ ಪ್ರತಿ ಹಂತದಲ್ಲಿಯೂ ಸಿಬ್ಬಂದಿಗಳನ್ನು ಸಂಶಯದಿಂದ ನೋಡುತ್ತಾ ಸಿಬ್ಬಂದಿಗಳಲ್ಲಿ ಕೆಲಸ ಮಾಡುವ ಉತ್ಸಾಹವನ್ನೇ ಕುಂದಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲೂಕಾ ಕಲ್ಯಾಣಾಧಿಕಾರಿಗಳು, ವಿಸ್ತರಣಾಧಿಕಾರಿಗಳು, ನಿಲಯಪಾಲಕರು/ನಿಲಯ ಮೇಲ್ವಿಚಾರಕರು ಹಾಗೂ ಗ್ರುಪ್ “ಡಿ” ಸಿಬ್ಬಂದಿಗಳು ಭಯದಿಂದ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ.

ಯಾವ ಸಂದರ್ಭದಲ್ಲಿ ಯಾವ ಆರೋಪ ಹಾಕಿ ನೋಟಿಸ್ ನೀಡುತ್ತಾರೋ ಅಥವಾ ಅಮಾನತ್ತಿಗೆ ಆಫಾರಸ್ಸು ಮಾಡುತ್ತಾರೋ ತಿಳಿಯುತ್ತಿಲ್ಲ. ವ್ಯವಸ್ಥಿತವಾಗಿ ವಸತಿ ನಿಲಯಗಳನ್ನು ನಿರ್ವಹಣೆ ಮಾಡಲು ಸೂಕ್ತ ಮಾರ್ಗದರ್ಶನಗಳನ್ನು ನೀಡುವ ಬದಲಾಗಿ ಅನಾವಶ್ಯಕ ಸಮಸ್ಯೆಗಳನ್ನು ಸೃಷ್ಟಿಮಾಡಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ವಸತಿನಿಲಯಗಳ

ನಿರ್ವಹಣಾ ಬಿಲ್ಲಗಳನ್ನು ತೆಯಾರಿಸಿ ಮೇಲು ರುಜುವಿಗೆ ಸಲ್ಲಿಸಿದರೇ, ಅನುಮೋದನೆ ನೀಡಿ, ಮೇಲುರುಜು ಮಾಡುವುದು ತಿಂಗಳುಗಟ್ಟಲೇ ಜಿಲ್ಲಾ ಕಚೇರಿಗೆ ಅಲೆದಾಡುವುದು ಮತ್ತು ಆ ಸಂದರ್ಭದಲ್ಲಿ ಮಾನ್ಯರು ನೀಡುವ ಹಿಂಸೆ ಹೇಳತಿರದು.

ಇವರು ಹೇಳಿದಂತೆ ಒಪ್ಪಿ ಅದರಂತೆ ಬಿಲ್ಲಗಳನ್ನು ತೆಯಾರಿಸಿ ಮೇಲುರುಜುವಿಗೆ ಸಲ್ಲಿಸಿದರೇ, ಮಾತ್ರ ಸಹಿಯಾಗುತ್ತವೇ ಇಲ್ಲಾ ಅಂದರೆ ಯಾವುದೇ ಕಾರಣಕ್ಕೂ ಮೇಲುರುಜು ಮಾಡುವದಿಲ್ಲ. ಇದರಿಂದಾಗಿ ಅತೀ ಹಿಂಸೆ ಅನುಭವಿಸುವಂತಾಗಿದೆ.

ಎಲ್ಲ ಹಂತದ ಅಧಿಕಾರವನ್ನು ತಾವೇ ಕೇಂದ್ರಿಕರಿಸಿಕೊಂಡು, ವಸತಿ ನಿಲಯಗಳಲ್ಲಿ ಒಂದು ಸಣ್ಣ ರಿಪೇರಿಗೂ ಅವಕಾಶ ನೀಡುತ್ತಿಲ್ಲ. ಎಷ್ಟೇ ಮನವಿ ಬರೆದು ವಿನಂತಿಸಿದರೂ ಸ್ಪಂದಿಸುವದಿಲ್ಲ. ಎನಾದರೂ ತೊಂದರೆಗಳಾದರೆ ಇನ್ನುಳಿದವರ ಮೇಲೆ ಹಾಕಿ ನನಗೇನು ಗೊತ್ತಿಲ್ಲ ಅಂತಾ ಹೇಳಿ ಭಯಪಡಿಸುವುದು ಸರ್ವೇಸಾಮಾನ್ಯವಾಗಿದೆ.

ತಾಲೂಕಾವಾರು ಕಾರು ಟೆಂಡರ್ ನಿಯಮಾನುಸಾರ ಕರೆದು, ಕಡತ ಅನುಮೋದನೆಗೆ ಸಲ್ಲಿಸಿದರೇ ಅನಾವಶ್ಯಕ ಬೇಡಿಕೆ ಇಡುತ್ತಾ, ಇನ್ನೂ ಅನುಮೋದನೆ ನೀಡದೇ ಅಲ್ಲಿಯೇ ಉಳಿಸಿಕೊಂಡು ತೊಂದರೆ ನೀಡುತ್ತಾರೆ.

ತಾಲೂಕಾ ಅಧಿಕಾರಿಗಳ ಗಮನಕ್ಕೆ ಬಾರದೇ ಆ ತಾಲೂಕಿನಲ್ಲಿ ಗ್ರುಪ್-ಸಿ ಅಥವಾ ಡಿ ವರ್ಗಗಳ ಸಿಬ್ಬಂದಿಗಳ ನಿಯೋಜನೆ ಮಾಡಿ ವಸತಿನಿಲಯಗಳ ನಿರ್ವಹಣೆಗೆ ಅಸಹಕಾರ ನೀಡುತ್ತಿದ್ದಾರೆ. ವಸತಿ ನಿಲಯಗಳಲ್ಲಿಯ ಅತೀ ಅವಶ್ಯಕ ಎನಿಸಿದ ರಿಪೇರಿ ಕೆಲಸಗಳನ್ನು ಮಾಡಲು ಅವಕಾಶ ನೀಡದೇ ವಸತಿನಿಯಗಳಲ್ಲಿ ಸಮಸ್ಯೆಗಳಾಗಲು ಮೂಲ ಕಾರಣ ಆಗಿದ್ದಾರೆ.

ತಾಲೂಕಿನಲ್ಲಿರುವ ವಸತಿನಿಲಯಗಳ ವಿದ್ಯುತ್ ಬಿಲ್ಲ ಭರಣಾ ಮಾಡುವದಕ್ಕೂ ಅನುಮೋದನೆ ಪಡೆಯಲು ತಿಂಗಳುಗಟ್ಟಲೇ ಕಾಯಬೇಕು. ಅಲ್ಲಿಯವರೆಗೆ ಕೆ.ಇ.ಬಿ ಯವರು ವಿದ್ಯುತ್ ಕನೆಕ್ಷನ್ ತೆಗೆಯುತ್ತಿರುವದರಿಂದ ನಿಲಯಗಳ ನಿರ್ವಹಣೆಗೆ ತೊಂದರೆಯಾಗುತ್ತಿದೆ.

ವಸತಿನಿಲಯಗಳ ಖಾಲಿಯಿರುವ ನಿಲಯಪಾಲಕರ ಪ್ರಭಾರ ವಹಿಸುವ ಆದೇಶವನ್ನು ತಮ್ಮ ಹಂತದಲ್ಲಿಯೇ ಇಟ್ಟುಕೊಂಡು, ತಮಗೆ ತಿಳಿದಂತೆ ಆದೇಶಗಳನ್ನು ಮಾಡಿ ನಿಲಯಪಾಲಕರ ಸುಲಿಗೆ ಮಾಡುವುದು ಸಾಮಾನ್ಯವಾಗಿದೆ.

ವಸತಿ ನಿಲಯಗಳಲ್ಲಿ ಅತೀ ಅವಶ್ಯ ಮೂಲಭೂತ ಸೌಕರ್ಯ ಅಥವಾ ರಿಪೇರಿ ಕುರಿತು ಅನುಮತಿಗಾಗಿ ಪತ್ರ ಬರೆದು ವಿನಂತಿಸಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಒಂದು ವೇಳೆ ಮಾಡುವದೇ ಆದರೇ ಇವರು ಹೇಳಿದಷ್ಟು ಕೊಟ್ಟರೇ ಮಾತ್ರ ಬಿಲ್ಲುಗಳನ್ನು ಮೇಲುರುಜು ಮಾಡುತ್ತಾರೆ.

ಪ್ರತಿಯೊಂದು ಹಂತದಲ್ಲಿಯೂ ಸಂಶಯ ಪಡುವದು ಹಾಗೂ ಅಗೌರವಾಗಿ ನಡೆದುಕೊಳ್ಳುವುದು ಇವರ ರೂಢಿಯಾಗಿದೆ.

ಇವರ ಈ ಅವ್ಯವಸ್ಥೆಯ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೇ ಅಂಥಹ ಸಿಬ್ಬಂದಿಗಳನ್ನು ನೇರ ಟಾರ್ಗೆಟ್ ಮಾಡಿ ಹಿಂಸೆ ಕೋಡಲು ಪ್ರಾರಂಭಿಸುತ್ತಾರೆ. ಅನಾವಶ್ಯಕ ಕಾರಣ ಹುಡುಕಿ ನೋಟಿಸ ನೀಡುವುದು, ಅಮಾನತ್ತಿಗೆ ಶಿಫಾರಸ್ಸು ಮಾಡುವುದು ಇವರ ಕಾಯಕವಾಗಿದೆ. ಇದರಿಂದ ಬೆಸತ್ತು ಯಾರೂ ಸಹ ಜಿಲ್ಲಾ ಕಚೇರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ದಯವಿಟ್ಟು ಇವರು ಮಾಡುವ ವರದಿ ಆಧಾರದ ಮೇಲೆ ಯಾವ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸದೇ ತಾವೇ ಪರಿಶೀಲಿಸಿ ಕ್ರಮ ಜರುಗಿಸಬೇಕೆಂದು ವಿನಂತಿ.

ಇನ್ನೂ ಹಲವಾರು ಕಾರಣಗಳಿಂದ ಜಿಲ್ಲೆಯಲ್ಲಿ ವಸತಿ ನಿಲಯ ನಿರ್ವಹಣೆಯಲ್ಲಿ ಮಾನ್ಯರಿಂದ ಯಾವುದೇ ಸ್ಪಂದನೆ ಸಿಗದೇ ತಾಲೂಕಾ ಕಲ್ಯಾಣಾಧಿಕಾರಿಗಳು, ವಿಸ್ತರಣಾಧಿಕಾರಿಗಳು, ನಿಲಯಪಾಲಕರು/ನಿಲಯ ಮೇಲ್ವಿಚಾರಕರು ಹಾಗೂ ಗ್ರುಪ್ “ಡಿ” ಸಿಬ್ಬಂದಿಗಳು ಪರದಾಡುವ ಸ್ಥಿತಿ ಬಂದಿದೆ. ಇದರಿಂದಾಗಿ ನಮ್ಮ ಮಾತೃ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಮಾನ್ಯರು ನಮ್ಮ ಈ ಮನವಿಯನ್ನು ಸಹನಾಭೂತಿಯಿಂದ ಪರಿಶೀಲಿಸಿ ನಮಗೆ ನ್ಯಾಯ ಕೋಡಿಸಬೇಕೆಂದು ಹಾಗೂ ನಿಯಮಾನುಸಾರ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೋಡಬೇಕೆಂದು ಈ ಮೂಲಕ ತಮ್ಮನ್ನು ಕೈಮುಗಿದು ಬೇಡಿಕೊಳ್ಳುತ್ತೇವೆ.

ಈ ರೀತಿ ತಮ್ಮ ಇಲಾಖೆಯ ಕೆಳ ಸಿಬ್ಬಂಧಿಗಳಿಗೆ ಹೀಗೆ ತೊಂದರೆ ಕೊಡುತ್ತಿದ್ದಾರೆ ಆದರೂ ಜಿಲ್ಲಾಡಳಿತ ಸರ್ವಾಧಿಕಾರಿ ಧೋರಣೆಯ ಅಧಿಕಾರಿಯನ್ನು ಜಿಲ್ಲೆಯಲ್ಲಿ ಇಟ್ಟುಕೊಂಡಿದ್ದಾರೆ ಅಂದ್ರೆ ಯಾವುದೇ ಬಲವಾದ ಕಾರಣ ಇರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ ಜಿಲ್ಲಾ ಪಂಚಾಯತ ಸಿ.ಇ.ಓ ರಾಹುಲ್ ಸಿಂಧೆ ಎನು ಮಾಡುತ್ತಿದ್ದಾರೆ. ಅವರಿಗೆ ಇದು ಗೊತ್ತಿಲ್ಲವೇ ? ಗೊತ್ತಿದ್ದರು ಏಕೆ ಸುಮ್ನೆ ಇದ್ದಾರೆ ? ಅದು ಯಾವ ತರಹ ಋಣ ಅವರ ಮೇಲೆ ಅನ್ನೋದು ತಿಳಿತಾ ಇಲ್ಲಾ ಹೀಗಾಗಿ ಇದು ಒಂದು ಯಕ್ಷ ಪ್ರಶ್ನೆ ಆಗಿದೆ.

ಈಗಾಗಲೇ ಸುವರ್ಣ ಗಿರಿಯಲ್ಲಿ ಅನೇಕ ಸುದ್ಧಿಗಳನ್ನು ಮಾಡಲಾಗಿತ್ತು. ಆದರೂ, ಅವರ ಮೇಲೆ ಯಾವೂದೇ ಕ್ರಮ ತಗೆದುಕೊಂಡಿಲ್ಲಾ. ಈಗ ಕೆಳ ಅಧಿಕಾರಿಗಳೇ ಬಂದು ಎದ್ದು ಉಸ್ತುವಾರಿ ಮಂತ್ರಿಗಳಿಗೆ ನ್ಯಾಯ ಕೊಡಿಸಲು ವಿನಂತಿ ಮಾಡಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button