ಹುಬ್ಬಳ್ಳಿ ಸಾಮಾಜಿಕ ಅರಣ್ಯ ವಲಯದಲ್ಲಿ ಲಕ್ಷ ಲಕ್ಷ ಲೂಟಿ, ತನಿಖೆಗೆ ಒತ್ತಾಯ.
ಧಾರವಾಡ: ದೇಶದ ಜನ ಲೋಕಸಭೆ ಚುನಾವಣೆಯಲ್ಲಿ ಬಿಜಿಯಿದ್ದಾಗ ಧಾರವಾಡದ ಸಾಮಾಜಿಕ ಅರಣ್ಯ ವಲಯದ ಕೆಲವು ಅಧಿಕಾರಿಗಳು ಹಣ ಕೊಳ್ಳೆ ಹೊಡೆಯುತ್ತಿರುವ ಮಾಹಿತಿಯನ್ನು ವಕೀಲರು ಹಾಗೂ ಪರಿಸರವಾದಿಯೊಬ್ಬರು ಹೊರಗೆ ತಂದಿದ್ದಾರೆ.
ಧಾರವಾಡ ವಿಭಾಗದ ಹುಬ್ಬಳ್ಳಿಯ ಅರಣ್ಯ ವಲಯ ಅಧಿಕಾರಿ ಅರವಿಂದ ಕಣವಿ ಬರೋಬ್ಬರಿ ಒಂದು ಕೋಟಿ ರೂಪಾಯಿಗಳನ್ನ ನಕಲಿ ದಾಖಲೆ ಸೃಷ್ಟಿಸಿ, ಕೊಳ್ಳೆ ಹೊಡೆಯಲಾಗಿದೆ. ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಪರಿಮಳ ಹುಲಗನ್ನವರ ಅವರು ಯಾವುದೇ ತಪಾಸಣೆ ಮಾಡದೇ, ಹಣ ದುರುಪಯೋಗ ಮಾಡಿಕೊಳ್ಳಲು ಸಾಥ್ ನೀಡಿದ್ದಾರೆಂಬ ಅಂಶವನ್ನು ಹೊರಗೆ ಹಾಕಿದ್ದಾರೆ.
ಇಲಾಖೆಯ ಸಿಬ್ಬಂದಿಗಳು ಹಾಗೂ ವಾಚರ್‌ಗಳನ್ನೇ ಕೂಲಿ ಕಾರ್ಮಿಕರಂತೆ ತೋರಿಸಲಾಗಿದೆ. ದಾಖಲೆಯಲ್ಲಿ ಇರುವ ಕೂಲಿ ಕಾರ್ಮಿಕರೇ ಬೇರೆ, ಪೋಟೊದಲ್ಲಿರುವವರೇ ಬೇರೆ ಎಂಬುದು ದಾಖಲೆಗಳ ಸಮೇತ ಹೊರಬಿದ್ದಿದೆ.
ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮೂಲಕ ವಕೀಲ ಮತ್ತು ಪರಿಸರವಾದಿ ಸುರೇಂದ್ರ ಉಗಾರೆ ಹೇಳಿದ್ದಾರೆ.