ಕೋಲಾರಸುವರ್ಣ ಗಿರಿ ಟೈಮ್ಸ್
ಕೋಲಾರದಲ್ಲಿ ವಿದ್ಯುತ್ ಶಾಕ್ ನಿಂದ ಕಂಬದಲ್ಲೇ ಬೆಸ್ಕಾಂ ಗುತ್ತಿಗೆ ನೌಕರರ ಸಾವು.
ಕೋಲಾರ: ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಸುತ್ತಿದ್ದಂತ ವೇಳೆಯಲ್ಲಿ ವಿದ್ಯುತ್ ಶಾಕ್ ನಿಂದಾಗಿ ಬೆಸ್ಕಾಂ ಗುತ್ತಿಗೆ ನೌಕರರನೊಬ್ಬ ಕಂಬದಲ್ಲೇ ಸಾವನ್ನಪ್ಪಿರೋ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಾಗೇರಿ ಬಳಿಯಲ್ಲಿ ಬೆಸ್ಕಾಂ ಗುತ್ತಿಗೆ ನೌಕರ ಮಂಜುನಾಥ್(45) ವಿದ್ಯುತ್ ದುರಸ್ತಿ ಮಾಡೋದಕ್ಕೆ ಕಂಬ ಹತ್ತಿದ್ದನು. ಈ ವೇಳೆಯಲ್ಲಿ ವಿದ್ಯುತ್ ಶಾಕ್ ಹೊಡೆದು, ಕಂಬದಲ್ಲೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.