ಬೀದರ್ಸುವರ್ಣ ಗಿರಿ ಟೈಮ್ಸ್
ಬೀದರ್: ಪಿಡಿಒ ಗಳ ಸಾಮೂಹಿಕ ರಾಜೀನಾಮೆಗೆ ಸಜ್ಜು?
ಬೀದರ್: ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಕ್ಕೆ ಸಾಮೂಹಿಕ ರಾಜೀನಾಮೆಗೆ ಸಜ್ಜಾದ ಘಟನೆ ನಡೆದಿದೆ.
ಬಿದರ ಜಿಲ್ಲೆಯ ಎಲ್ಲಾ ಪಿಡಿಒಗಳು ಶರತ ಮುಂದಾಳತ್ವದಲ್ಲಿ ಇಂದು ಜಿಲ್ಲಾ ಪಂಚಾಯತ ಎದುರಿಗೆ ಎಲ್ಲಾ ಅಧಿಕಾರಿಗಳು ಸಾಮೂಹಿಕ ರಾಜಿನಾಮೆಯ ಪತ್ರಕ್ಕೆ ಸಹಿ ಹಾಕಿ ಪ್ರತಿಭಟನೆ ನಡೆಸುತ್ತಿದ್ದರೆಂದು ತಿಳಿದು ಬಂದಿದೆ.
ಜಿಲ್ಲೆಯ ಎಲ್ಲಾ ಪಿಡಿಒ ಗಳು ಮೇಲಿಂದ ಮೇಲೆ ಮೇಲಾಧಿಕಾರಿಗಳ ಕಿರುಕುಳ ಹಾಗೂ ರಾಜಕಾರಣಿಗಳ ಕಿರುಕುಳಕ್ಕೆ ಬೇಸತ್ತು ಇಂತಹ ನಿರ್ಧಾರಕ್ಕೆ ಬಂದಿದ್ದಾರೆಂದು ತಿಳಿದು ಬಂದಿದೆ. ಪಿಡಿಒ ಗಳ ಇಂತಹ ಒಂದು ನಿರ್ಧಾರ, ಇದು ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೊದು ಕಾದು ನೋಡಬೇಕು.