ಬೆಂಗಳೂರುಸುವರ್ಣ ಗಿರಿ ಟೈಮ್ಸ್

ಲೊಕ ಚುನಾವಣೆ 2024: ಪೌರಾಡಳಿತ ಅಧಿಕಾರಿಗಳ ವರ್ಗಾವಣೆಗೆ ತಯಾರಿ ನಡೆಸಿದ ಇಲಾಖೆ.

ಬೆಂಗಳೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಹಿನ್ನೆಲೆಯಲ್ಲಿ ಪೌರಾಡಳಿತ/ಪೌರ ಸೇವೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಭಾರತ ಚುನಾವಣಾ ಆಯೋಗವು ದಿನಾಂಕ: 21.12.2023ರ ಪತ್ರದಲ್ಲಿ ನಿರ್ದೇಶನ ನೀಡಿರುತ್ತದೆ ಎಂದು ಸರ್ಕಾರ ವರ್ಗಾವಣೆಯ ಆದೇಶ ಹೊರಡಿಸಿದೆ.

ಭಾರತ ಚುನಾವಣಾ ಆಯೋಗದ ಪತ್ರ ದಿನಾಂಕ: 21.12.2023ರ ಪತ್ರದಲ್ಲಿ ನೀಡಿರುವ ನಿರ್ದೇಶನದಂತೆ ಹಾಗೂ ಸದರಿ ಪತ್ರದ ಅಂಶ 5 ಮತ್ತು 6 ರಲ್ಲಿ ತಿಳಿಸಿರುವಂತೆಯೂ ಸಹ ಪರಿಶೀಲಿಸಿಕೊಂಡು ಪೌರಾಡಳಿತ/ಪೌರಸೇವೆಯ ಅಧಿಕಾರಿಗಳ ಸೇವಾವಧಿಯು ಕಳೆದ 04 ವರ್ಷಗಳಲ್ಲಿ ದಿನಾಂಕ: 30.06.2024ಕ್ಕೆ 03 ವರ್ಷ ತುಂಬುವಂತಹ ಪ್ರಕರಣಗಳು ಹಾಗೂ ಅಧಿಕಾರಿಗಳು ಅವರ ಸ್ವಂತ ಜಿಲ್ಲೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವಂತಹ ಅಧಿಕಾರಿಗಳನ್ನು/ನೌಕರರನ್ನು ವರ್ಗಾವಣೆ ಮಾಡಲು ಅಂತಹ ಪ್ರಕರಣಗಳ ಕುರಿತು ಪರಿಶೀಲಿಸಿ ವೃಂದವಾರು ಪ್ರತ್ಯೇಕವಾಗಿ ಮಾಹಿತಿ ಸಿದ್ಧಪಡಿಸಿ, ನಗರಸಭೆಗಳ ಪೌರಾಯುಕ್ತರು, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಮುಖ್ಯಾಧಿಕಾರಿಗಳು -ಪುರಸಭೆ/ಪಟ್ಟಣ ಪಂಚಾಯಿತಿ ಹಾಗೂ ಇತರ ವೃಂದದ ಅಧಿಕಾರಿ ನೌಕರರುಗಳ ಬಗ್ಗೆ ಪರಿಶೀಲಿಸಿ ಎರಡು (2) ದಿನಗಳಲ್ಲಿ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ ಸರ್ಕಾರಕ್ಕೆ (ಇಮೇಲ್: uddma123@gmail.comರ ಮುಖಾಂತರವೂ) ವರದಿ ಸಲ್ಲಿಸುವಂತೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button