ದಕ್ಷಿಣಕನ್ನಡಸುವರ್ಣ ಗಿರಿ ಟೈಮ್ಸ್

ಹಿಂದೂಗಳು ಒಂದೆರಡು ಮಕ್ಕಳಿಗೆ ಜನ್ಮ ನೀಡಿದರೆ, ಮುಸ್ಲಿಂ ಜನಸಂಖ್ಯೆ ಹಿಂದುಗಳನ್ನು ಮೀರಿಸುತ್ತೆ: ಶಾಸಕ ಹರೀಶ್ ಪೂಂಜಾ

ದಕ್ಷಿಣ ಕನ್ನಡ : ಹಿಂದೂಗಳು ಕೇವಲ ಒಂದೋ ಎರಡೋ ಮಕ್ಕಳಿಗೆ ಜನ್ಮ ನೀಡಿದರೆ ಸಾಕಾಗೋದಿಲ್ಲ. ಇದರಿಂದ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು ಹಿಂದೂಗಳ ಜನಸಂಖ್ಯೆಗಿಂತ ಹೆಚ್ಚಾಗುತ್ತದೆ ಎಂದು ಉಡುಪಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜನವರಿ 7ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪೆರಾಡಿಯಲ್ಲಿ ನಡೆದ ಅಯ್ಯಪ್ಪ ದೀಪೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಹಿಂದೂಗಳ ಜನಸಂಖ್ಯೆ 80 ಕೋಟಿ ಮತ್ತು ಮುಸ್ಲಿಮರು ಕೇವಲ 20 ಕೋಟಿ ಇದ್ದಾರೆ ಎಂದು ಕೆಲವರು ಭಾವಿಸುತ್ತಾರೆ. ಆದರೆ, ನೀವು ಇನ್ನೊಂದು ದಿಕ್ಕಿನಲ್ಲಿ ಯೋಚಿಸಬೇಕಿದೆ ಎಂದು ಹೇಳಿದ್ದಾರೆ.

ಮುಸ್ಲಿಮರು ಸಂಖ್ಯೆಯಲ್ಲಿ ಕಡಿಮೆಯಿದ್ದಾರೆ ಮತ್ತು ಅವರು ಯಾವುದೇ ಹಾನಿ ಮಾಡುವುದಿಲ್ಲ ಎಂಬುದು ನಮ್ಮ ನಂಬಿಕೆ. ಆದರೆ, ಮುಸ್ಲಿಮರು ತಲಾ ನಾಲ್ಕು ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ ಮತ್ತು ಹಿಂದೂಗಳು ಹೆಚ್ಚಾಗಿ ಒಂದು ಅಥವಾ ಎರಡು ಮಕ್ಕಳನ್ನು ಹೊಂದಿದ್ದಾರೆ. 20 ಕೋಟಿ ಇರುವ ಮುಸ್ಲಿಮರು ತಲಾ ನಾಲ್ಕು ಮಕ್ಕಳಿಗೆ ಜನ್ಮ ನೀಡಿದರೆ ಅವರ ಜನಸಂಖ್ಯೆ 80 ಕೋಟಿಯಾಗುತ್ತದೆ. ನಮ್ಮ ಜನಸಂಖ್ಯೆ 20 ಕೋಟಿಗೆ ಇಳಿಯಲಿದೆ ಎಂದು ಹೇಳಿದ್ದಾರೆ.

ಹೀಗೆ ಮುಂದುವರಿದರೆ, ಮುಸ್ಲಿಂ ಜನಸಂಖ್ಯೆಯು 80 ಕೋಟಿಯನ್ನು ಮುಟ್ಟುತ್ತದೆ ಮತ್ತು ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತದೆ. ಆಗ ದೇಶದಲ್ಲಿ ಹಿಂದೂಗಳ ದುಸ್ಥಿತಿಯನ್ನು ನೀವು ಊಹಿಸಬಹುದೇ? ಈ ದೇಶದಲ್ಲಿ ಮುಸ್ಲಿಮರು ಬಹುಸಂಖ್ಯಾತರಾದರೆ, ಹಿಂದೂಗಳ ಸಂಕಷ್ಟ ಹೇಗಿರುತ್ತದೆ ಎಂಬ ಬಗ್ಗೆ ನೀವು ಮನೆಯಲ್ಲಿ ಕುಳಿತು ಯೋಚಿಸಬೇಕು’ ಎಂದು ಪೂಂಜಾ ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button