ದಲಿತ ಸಿಬ್ಬಂದಿಗಳ ಮೇಲೆ ಸುಳ್ಳು ಆರೋಪ ಮಾಡಿ ಅಮಾನತು: ಪರಶುರಾಮ ಮಣಕೂರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ.
ಧಾರವಾಡ: ಧಾರವಾಡ ದಲಿತ ಸಿಬ್ಬಂದಿಗಳ ಮೇಲೆ ಸುಳ್ಳು ಆರೋಪ ಮಾಡಿ ಅಮಾನತುಗೊಳಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿರುವ ಪರಶುರಾಮ ಮಣಕೂರ ಉಪವಲಯ ಅರಣ್ಯಾಧಿಕಾರಿ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯನ್ನು ಮಾಡಿದರು.
ಹೊನ್ನಾಪೂರ ನರ್ಸರಿ ಕ್ವಾರ್ಟರ್ಸ್ ನಲ್ಲಿ ಸಾಗವಾನಿ ಕಟ್ಟಿಗೆಗಳು ಸಿಕ್ಕಿದ್ದು ಇರುವ ಬಗ್ಗೆ ಶಿವಾನಂದ ಕೊಂಡಿಕೊಪ್ಪ ಅರಣ್ಯ ರಕ್ಷಕ, ಅವಿನಾಶ ರಣಕಾಂಬೆ ಉಪ ವಲಯ ಅರಣ್ಯಾಧಿಕಾರಿ ಇವರು ರೇಡ್ ಮಾಡಿ ಆರ್.ಎಫ್.ಓ ರವರಿಗೆ ಮಾಹಿತಿ ನೀಡಿದರೂ ಅವರ ಅಂದರೆ ಪರಶುರಾಮ ಮಣಕೂರ ಡಿ.ಆರ್.ಎಫ್.ಓ ಇವರ ಮೇಲೆ ವರದಿ ಮಾಡಿದರೂ ವರದಿ ಸ್ವೀಕರಿಸದೇ ಶಿವಾನಂದ ಕೊಂಡಿಕೊಪ್ಪ ಅರಣ್ಯ ರಕ್ಷಕ ರವರು ದೂರವಾಣಿ ಕರೆ ಮಾಡಿ ವಾಟ್ಸಪ್ ಮೂಲಕ ಕಟ್ಟಿಗೆ, ಅವರ ಸರ್ಕಾರಿ ದ್ವಿಚಕ್ರ ವಾಹನದ ಸಮೇತ ಇರುವ ಫೋಟೋಗಳನ್ನು ಆರ್.ಎಫ್.ಓ ಧಾರವಾಡ ರವರಿಗೆ ತಿಳಿಸಿದರೂ
ಪರಶುರಾಮ ಮಣಕೂರ ಈತನ ಮೇಲೆ ಕ್ರಮ ಕೈಗೊಂಡಿರುವುದಿಲ್ಲ. ಆದಾಗ್ಯೂ ಸಹ ಇಲಾಖೆಯ ಪರವಾಗಿ ಕೆಲಸ ಮಾಡಿದ ಸಿಬ್ಬಂದಿಗಳನ್ನು ಬಿಟ್ಟು ಶಿವಾನಂದ ಕೊಂಡಿಕೊಪ್ಪ ಅರಣ್ಯ ರಕ್ಷಕ ಇವರನ್ನು ಅಮಾನತ್ತು ಮಾಡಿ ಸಿಬ್ಬಂದಿಗಳಿಗೆ ಅನ್ಯಾಯ ಮಾಡಿದ್ದು ಕಂಡು ಬರುತ್ತದೆ.
ಅರಣ್ಯದಲ್ಲಿ ಸಾಗವಾನಿ ಮರಗಳನ್ನು ಕಟಾವು ಮಾಡಿದ ಬಗ್ಗೆ ಮಾಹಿತಿ ಬಂದು ತಡೆಯಲು ಹೋದ ಸಿಬ್ಬಂದಿಗಳ ಮೇಲೆ ಎಫ್.ಐ.ಆರ್ ದಾಖಲಿಸಿರುವುದು ಪುನಃ ಅನ್ಯಾಯ ಎಸಗಿರುವುದು ಸಿಬ್ಬಂದಿಗಳಿಗೆ ಉದೇಶಪೂರ್ವಕವಾಗಿ ದಲಿತ ಸಿಬ್ಬಂದಿಗಳ ಮೇಲೆ ದೌರ್ಜನ್ಯ ಎಸಗಿರುವುದು ಕಂಡು ಬರುತ್ತದೆ. ಇದರ ಬಗ್ಗೆ ಮಾಧ್ಯಮದಲ್ಲಿ ವರದಿ ಆದ ಮೇಲೆ ನಮ್ಮ ಸಂಘಟನೆಯ ಗಮನಕ್ಕೆ ಬಂದಿರುತ್ತದೆ.
ಸಾರ್ವಜನಿಕರ ಹೇಳಿಕೆ ಪಡೆದು ಅಮಾನತು ಮಾಡುವುದು, ಕರ್ತವ್ಯದ ಮೇಲೆ ಇದ್ದರೂ ಸುಳ್ಳು ಆರೋಪ ಮಾಡಿ ಗೈರು ಹಾಜರಿ ಎಂದು ವರದಿ ಮಾಡುವುದು, ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಸಿಬ್ಬಂದಿಗಳನ್ನು ಬಲಿಪಶು ಮಾಡರುವುದು ದೌರ್ಜನ್ಯ ಎಸಗಿರುವುದು ಕಂಡು ಬರುತ್ತಿದೆ.
ಇದಾದ ನಂತರ ಪರಶುರಾಮ ಮಣಕೂರ ಡಿ.ಆರ್.ಎಫ್.ಓ ಈತನು ದಲಿತ ಸಿಬ್ಬಂದಿಯಾದ ಅವಿನಾಶ ರಣಕಾಂಬೆ ಡಿ.ಆರ್.ಎಫ್.ಓ ಇವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಜಾತಿ ನಿಂದನೆ ಮಾಡಿದ್ದು ಈ ಕುರಿತು ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ಕೂಡಾ ದಾಖಲಿಸಿದ್ದು, ಕೂಡಲೇ ದಲಿತ ಸಿಬ್ಬಂದಿಗಳ ಮೇಲೆ ದೌರ್ಜನ್ಯ ಎಸಗಿದ, ಜಾತಿ ನಿಂದನೆ ಮಾಡಿದ ಪರಶುರಾಮ ಮಣಕೂರ ಈತನ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ. ಬುತ್ತೇವೆಯೂ ಪರಶುರಾಮನೆ ಮಣಕೂರ ಡಿ.ಆರ್.ಎಫ್.ಓ ಅಕ್ರಮವಾಗಿ ಕಟ್ಟಿಗೆ ಸಾಗಾಟ ಮಾಡುವಾಗ ಅಮಾನತು ಆಗಿರುತ್ತಾರೆ. ಈತನು ನಿರಂತರ ಈ ದಂಧೆಯಲ್ಲಿ ಇದ್ದು, ಅರಣ್ಯ ಸಂಪತ್ತನ್ನು ಲೂಟಿ ಮಾಡುವ ಕೆಲಸದಲ್ಲಿ ನಿರತರಾಗಿದ್ದರೂ ಅವನು ನೀಡುವ ಹಣಕ್ಕೆ ಅಧಿಕಾರಿಗಳು ಸಹಕಾರ ನೀಡುತ್ತಿರುವುದು ಕಂಡು ಬರುತ್ತದೆ. ಅರಣ್ಯವನ್ನು ಕಾಪಾಡಬೇಕಾದವರೇ ಬೇಲಿ ಎದ್ದು ಹೊಲ ಮೇಯ್ದಂತೆ ಆಗುತ್ತಿದೆ.
ಕಾರಣ ಅಮಾನತ್ತು ಮಾಡಿದ ಶಿವಾನಂದ ಕೊಂಡಿಕೊಪ್ಪ ಅರಣ್ಯ ರಕ್ಷಕ ಇವರನ್ನು ಈ ಕೂಡಲೇ ಅಮಾನತ್ತಿನಿಂದ ತೆರುವುಗೊಳಿಸಿ ನ್ಯಾಯ ಒದಗಿಸಿಕೊಡಬೇಕು. ಇದಕ್ಕೆಲ್ಲಾ ಕಾರಣೀಕರ್ತನಾದ ಪರಶುರಾಮ ಮಣಕೂರ ಡಿ.ಆರ್.ಎಫ್.ಓ ರವರನ್ನು ಕೂಡಲೇ ಅಮಾನತ್ತುಗೊಳಿಸಬೇಕು. ಇಲ್ಲದಿದ್ದಲ್ಲಿ ಆರಣ್ಯ ಇಲಾಖೆ ಕಛೇರಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಇದಕ್ಕೆ ಅವಕಾಶ ನೀಡದೇ ವಂಚಿತ ನೌಕರರಿಗೆ ನ್ಯಾಯ ಒದಗಿಸಿ ತಪ್ಪಿತಸ್ಥ ಪರಶುರಾಮ ಮಣಕೂರ ಡಿ.ಆರ್.ಎಫ್.ಓ ರವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇವೆ ಎಂದು ಧಾರವಾಡ ಜಿಲ್ಲಾ ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಪರಮೇಶ್ವರ ಕಾಳೆ ರವರು ಹೇಳಿದರು.