ರಾಯಾಬಾಗ ವ್ಯಾಪಾರಿ ಮಳಿಗೆ ಅಕ್ರಮ ಹಂಚಿಕೆ ಪ್ರಕರಣ: ಮುಖ್ಯಾಧಿಕಾರಿಯ ತಲೆದಂಡ ಫಿಕ್ಸ್ ?
ಬಿಗ್ ಬ್ರೆಕಿಂಗ್ಸ್
ಬೆಳಗಾವಿ: ರಾಯಬಾಗ ಪಟ್ಟಣದ ವ್ಯಾಪರಿ ಮಳಿಗೆ ಹಂಚಿಕೆ ಪ್ರಕರಣ ಕೊನೆಗೂ ಅಂತ್ಯವಾಗಿದ್ದು ಮುಖ್ಯಾಧಿರ ತಲೆದಂಡ ಪಿಕ್ಸ್ ಎಂದು ಪೌರಾಡಳಿತ ಇಲಾಖೆಯ ಜಿಲ್ಲೆಯ ಬೆಳಗಾವಿ ಡಿಯುಡಿಸಿಯಲ್ಲಿ ಸುದ್ಧಿಯೊಂದು ಹರಿದಾಡುತ್ತಿದೆ.
ರಾಯಬಾಗದ ಪಟ್ಟಣ ಪಂಚಾಯತಿ ಹನ್ನೊಂದು ಮಳಿಗೆಗಳನ್ನು ಕಟ್ಟಿದ್ದರು ಅವುಗಳನ್ನು ಹಂಚಿಕೆ ಮಾಡಿದ್ದರು. ನಂತರ ಸಾಮಾಜಿಕ ಹೊರಾಟಗಾರ ಸುರೇಂದ್ರ ಉಗಾರೆ ಇವರು ರಾಜಕೀಯ ಬಂಟರಿಗೆ ಮಳಿಗೆಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆಂದು ನಿಯಮ ಪಾಲಿಸಿಲ್ಲಾ ಎಂದು ಬೆಳಗಾವಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು. ಜಿಲ್ಲಾಡಳಿತ ಸರಿಯಾದ ಕ್ರಮ ತಗೆದುಕೊಳ್ಳಲು ಹಿಂದೇಟು ಹಾಕಿದ್ದರಿಂದ ಪೌರಾಡಳಿತ ನಿರ್ದೇಶನಾಲಯಕ್ಕೆ ಜಿಲ್ಲಾಡಳಿತ ವಿರೂದ್ದ ಮನವಿ ಮಾಡಿದ್ದರು.
ಪೌರಾಡಳಿತ ಇಲಾಖೆಯು ಮೂರು ಜನ ಅಧಿಕಾರಿಗಳ ತಂಡ ರಚಿಸಿತ್ತು. ತನಿಖಾ ತಂಡ ಜೂನ ತಿಂಗಳಲ್ಲಿ ಸ್ಥಾನಿಕ ಚೌಕಾಸಿ ಮಾಡಿ ವರದಿಯನ್ನು ಇಲಾಖೆಗೆ ತನ್ನ ವರದಿಯನ್ನು ಸಲ್ಲಿಸಿತ್ತು.
ತನಿಖಾ ವರದಿಯ ಪ್ರಕಾರ ಮುಖ್ಯಾಧಿಕಾರಿಗಳು ವ್ಯಾಪಾರಿ ಮಳಿಗೆಗಳ ಹಂಚಿಕೆಯಲ್ಲಿ ನಿಯಮ ಪಾಲಿಸಿಲ್ಲಾ ಎಂದು ವರದಿ ನೀಡಿದ್ದಾರೆ. ಇದರ ಕುರಿತು ಸುವರ್ಣಗಿರಿ ಕೇಳಿದಾಗ ಈ ಕುರಿತು ಮುಂದಿನ ಕ್ರಮಕ್ಕಾಗಿ ಒಂದು ವಿಸ್ತೃತವಾದ ವರದಿಯನ್ನು ತಯಾರಿಸಲಾಗುತ್ತಿದೆ ಎಂದು ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ ಇವರು ಖಚಿತಪಡಿಸಿದ್ದಾರೆ.