ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ !
ನಾಳೆ ಮೊದಲ ಮಹಿಳಾ ಶಿಕ್ಷಕಿ,ಸಮಾಜ ಸುಧಾರಕಿ, ಕವಿಯತ್ರಿ, ಮಹಿಳಾವಾದಿ ಹೀಗೆಲ್ಲ ಗುರುತಿಸಲ್ಪಡುವ ಆ ಮಹಾನ್ ತಾಯಿ ಸಾವಿತ್ರಿಬಾಯಿ ಫುಲೆಯವರ ಜನ್ಮದಿನ.
ಭಾರತದ ಇತಿಹಾಸದಲ್ಲಿ ಪೂಜ್ಯನೀಯ ಸ್ಥಾನ ಹೊಂದಿದ ಈ ಶ್ರೇಷ್ಟ ಮಹಿಳೆಯ ಸಾಧನೆಯ ಹಿಂದೆ ಮಹಾನ್ ಚಿಂತಕ ಜ್ಯೋತಿರಾವ್ ಫುಲೆ ಎಂಬ ಶಕ್ತಿ ಇತ್ತು.
ಇವರಿಬ್ಬರು ದಂಪತಿಗಳು ಮಾಡಿದ ಸಮಾಜ ಪರಿವರ್ಥನಾ ಕೆಲಸಗಳು ಮಾನವ ಕುಲಕ್ಕೆ ಸಲ್ಲಿಸಿದ ಶ್ರೇಷ್ಟ ಕೆಲಸಗಳಾಗಿದ್ದವು. ಬ್ರಾಹ್ಮಣಶಾಹಿ ವ್ಯವಸ್ಥೆಯಿOದ ಕೆಳವರ್ಗಗಳು ವಿದ್ಯೆ ಇಲ್ಲದೆ, ಸರಿಯಾದ ಅನ್ನವಿಲ್ಲದೆ, ಸೂರು ಇಲ್ಲದೆ ಅತ್ಯಂತ ಅಮಾನವೀಯವಾಗಿ ಗುಲಾಮರಾಗಿ ಬಿದ್ದಿದ್ದವರ ಪರ ಈ ದಂಪತಿಗಳು ತಮ್ಮ ಜೀವನದುದ್ದಕ್ಕೂ ಹೋರಾಡಿದ್ದಿದೆ.
ಜ್ಯೋತಿರಾವ್ ಫುಲೆಯವರಂತು ಅತ್ಯಂತ ಹರಿತವಾದ ಚಿಂತನೆಗಳನ್ನು ಮೈಗೂಡಿಸಿಕೊOಡಿದ್ದರು. ಬ್ರಾಹ್ಮಣರ ದಟ್ಟವಾದ ಪ್ರಭಾವಕ್ಕೊಳಗಾಗಿದ್ದ ಪುಣೆಯಲ್ಲಿಯೇ ಬ್ರಾಹ್ಮಣರ ನೀಚತನಗಳನ್ನೆಲ್ಲ ಖಂಡಿಸಿ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡಿದ್ದರು.ಜೊತೆಗೆ ತಮ್ಮ ಧರ್ಮಪತ್ನಿಯಾದ ಸಾವಿತ್ರಿಬಾಯಿಯವರನ್ನೂ ಸಹ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಳ್ಳುವOತೆ ನೋಡಿಕೊOಡಿದ್ದರು.
ಫುಲೆಯವರಿಗೆ ಬ್ರಿಟೀಷರ ಬಗ್ಗೆ ತುಂಬಾ ಹೆಮ್ಮೆ ಇತ್ತು. 1857 ರ ಸಿಪಾಯಿ ದಂಗೆ ಬಗ್ಗೆ ಹೀಗೆ ಹೇಳಿದ್ದರು “ಬ್ರಿಟೀಷ್ ಬಹಾದ್ದೂರರ ಕೈಯಿಂದ ಸಿಪಾಯಿ ದಂಗೆಯನ್ನು ಹುಟ್ಟಡಗಿಸುವುದರ ಹಿಂದೆ ದೇವರು ಅಸ್ಪೃಶ್ಯ -ಕೆಳವರ್ಗಗಳ ರಕ್ಷಣೆ ಮಾಡುಂತ ಅವರ ಮೇಲಿನ ದಯೆಯನ್ನು ತೋರಿಸಿದ್ದಾನೆ.” ಎಂದು.
ಕೋರೆಗಾಂವ್ ಕದನದಲ್ಲಿ ದಿಗ್ವಿಜಯ ಸಾಧಿಸಿದ ಮಹಾರ್ ಬಗೆಗೆ ಫುಲೆಯವರಿಗೆ ಗೌರವ ಇತ್ತು.ಆ ದಿಗ್ವಿಜಯದಿಂದಲೇ ಬ್ರಿಟೀಷರು ಇಲ್ಲಿ ತಳವೂರಿ ಬ್ರಾಹ್ಮಣಶಾಹಿ ಜಾಲವನ್ನೆಲ್ಲಾ ಹರಿದುಹಾಕಿ ಎಲ್ಲಾ ಮನುಷ್ಯರಿಗೆ ಎಲ್ಲವನ್ನೂ ಮುಕ್ತವಾಗಿಟ್ಟಿದ್ದು.
ಇಂಥಹ ಮಹಾನ್ ವ್ಯಕ್ತಿಗಳು ಹುಟ್ಟಿ ಬ್ರಾಹ್ಮಣಶಾಹಿ ಗೊಡ್ಡು ಸಂಪ್ರದಾಯಗಳಿಗೆ ಶೆಡ್ಡು ಹೊಡೆದೆದ್ದು ಗಟ್ಟಿಯಾಗಿ ನಿಲ್ಲಲು ಕೋರೆಗಾಂವ್ ಕದನ ಒಂದು ಭೂಮಿಕೆಯನ್ನು ಒದಗಿಸಿಕೊಟ್ಟಿತ್ತು.
ಈ ಚಾರಿತ್ರಿಕ ಕದನದ ಫಲಶೃತಿಯೇ ಫುಲೆ ದಂಪತಿಗಳಂತ ಮಹಾನ್ ಸಮಾಜ ಸುಧಾರಕರು ರೂಪುಗೊOಡಿದ್ದು. ಇಲ್ಲವಾದರೆ ಪುರೋಹಿತಶಾಹಿ ಶೃಷ್ಟಿಸಿದ್ದ ಅಸಮಾನ ವ್ಯವಸ್ಥೆಯಲ್ಲಿ ಇಂತಹ ಮಹಾನ್ ಚೇತನಗಳು ಹುಟ್ಟಿ ಮಹಾನ್ ಘಟನೆಗಳು ಘಟಿಸಲಿಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ.
3/1/1831 ರಲ್ಲಿ ಜನಿಸಿ ತಮ್ಮ ಜೀವನದುದ್ದಕ್ಕೂ ಮಹಾನ್ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸಾವಿತ್ರಿಬಾಯಿ ಫುಲೆಯವರು 10/3/1897 ರಲ್ಲಿ ಬಡರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾಗ ಮರಣಹೊOದುತ್ತಾರೆ. ಅಂತಹ ಮಹಾನ್ ತಾಯಿ ಇಂದಿಗೂ ಅರಿವಿನ ಜ್ಯೋತಿಯಾಗಿ ನಮಗೆಲ್ಲ ಆದರ್ಶವಾಗಿ ದಾರಿದೀಪವಾಗಿದ್ದಾಳೆ. ಅವಳ ಜಯಂತಿ ನಿಮಿತ್ಯ ಅವಳಿಗೆ ಕೋಟಿಕೋಟಿ ನಮನಗಳು…..
ಡಾ.ಗೌತಮ್ ಬನಸೋಡೆ