‘ಶುಕ್ರಿಯಾ ಮೋದಿಜಿ’ !! ಮುಸ್ಲಿಂ ಮಹಿಳೆಯರ ಮತ ಪಡೆಯಲು ಬಾಜಪ ರಣ-ತಂತ್ರ !?
ಬೆಂಗಳೂರು: ಲೋಕಾ 2024 ರ ಚುನಾವಣೆಗಾಗಿ ದೇಶದ ಮುಸ್ಲಿಂ ಮಹಿಳೆಯರ ಮತ ಪಡೆಯಲು ‘ಶುಕ್ರಿಯಾ ಮೋದಿಜಿ’ ಎಂಬ ರಣ ತಂತ್ರದ ಮಂತ್ರವನ್ನು ಭಾರತೀಯ ಜನತಾ ಪಕ್ಷ ರಣ ತಂತ್ರ ಹಣೆದಿರುವದಾಗಿ ತಿಳಿದು ಬಂದಿದೆ.
‘ಶುಕ್ರಿಯಾ ಮೋದಿಜಿ’ ಲೋಕಾ ಮಂತ್ರವು ಜನೇವರಿ 02 ರಿಂದ ಉತ್ತರ ಪ್ರದೇಶದಿಂದ ಆರಂಭವಾಗಲಿದ್ದು ಅಲ್ಪ ಸಂಖ್ಯಾತರ ಮೋರ್ಚಾಗಳ ಮೂಲಕಾ ಮಹಿಳೆಯರಿಗೆ ಮುಟ್ಟಿಸುವ ಕಾರ್ಯವನ್ನು ರೂಪಿಸಲಾಗಿದೆ. ಮೊದಲು ದಕ್ಷಿಣ ಭಾರತದ 25 ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಲಿದೆ ಎಂದು ಮಾಜಿ ಬಾಜಪ ಮೊರ್ಚಾ ಅಧ್ಯಕ್ಷ ಮುಜಮಿಲ್ ಅಹ್ಮದ ಬಾಬು ತಿಳಿಸಿದ್ದಾರೆ.
ರಾಜ್ಯದಲ್ಲಿ ಬೆಳಗಾವಿ, ವಿಜಯಪೂರ, ಕಲಬುರ್ಗಿ, ಬೆಂಗಳೂರು ಉತ್ತರ ಕ್ಷೇತ್ರಗಳ ಮೇಲೆ ಹೆಚ್ಚು ಕಣ್ಣು ಹಾಕಲಾಗಿದೆ ಇಲ್ಲಿ ಹೆಚ್ಚು ಮುಸ್ಲಿಂ ಮತಗಳು ಇವೆ.
ಧರ್ಮದ ದಂಗಲ್ ನಡುವೆ ಇಂತಹ ಒಂದು ‘ಶುಕ್ರಿಯಾ ಮೋದಿಜಿ’ ರಣತಂತ್ರ ಹಣೆದಿದ್ದು ಲೊಕಾ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೊದನ್ನು ಕಾದು ನೋಡಬೇಕು. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಎನ್,ಡಿ.ಎ ದ ಭಾಗವಾದ ಮೇಲೆ ಹೆಚ್ಚು ಮುಸ್ಲಿಂ ಮತಗಳು ಕೈ ಪಾಲಾಗಲಿವೆ ಎಂದು ತಿಳಿದು ಅದನ್ನು ತಡೆಯಲು ಇಂತಹ ಒಂದು ‘ಶುಕ್ರಿಯಾ ಮೋದಿಜಿ’ ಎಂಬ ‘ರಣ-ತಂತ್ರ’ವನ್ನು ಬಾಜಪ ಹಣೆದಿದೆ.