ಹುಕ್ಕೇರಿ ತಾಲೂಕಿನ ಅಂಕಲೆ ಗ್ರಾಮದಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆಯ ಕಂಡಿಸಿ ಡಿಸಿಗೆ ಮನವಿ !
ಬೆಳಗಾವಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಹತ್ತಿರವಿರುವ ಅಂಕಲೆ ಎಂಬ ಗ್ರಾಮದಲ್ಲಿ ಕನ್ನಡ ಧ್ವಜ ಹಾರಿಸಿದ್ದಕ್ಕಾಗಿ ಕನ್ನಡ ಹುಡುಗರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಎಫ್.ಐ.ಆರ್ ಆಗಿ ಮೂರು-ನಾಲ್ಕು ದಿನ ಕಳೆದರೂ ಸಂಕೇಶ್ವರ ಪೊಲೀಸರು ಕೇವಲ ಒಬ್ಬನ್ನನ್ನು ಅಂದರೆ ಹೇಮಂತ ಅಜರೇಕರ ಎಂಬಾತನನ್ನು ಮಾತ್ರ ಬಂಧಿಸಿದ್ದಾರೆ ಆದರೆ ಇನ್ನೂ ನಾಲ್ಕು ಜನ ಅಂದರೆ ಅಂಗದ ಕರಮೆ, ಅನಿಕೇತ ಕರಮೆ, ನಾಗರಾಜ ಪವಾರ, ಶಾಹು ಮಗದುಮ್ಮ ಇವರನ್ನು ಪೊಲೀಸರು ಬಂಧಿಸಿರುವುದಿಲ್ಲ. ನಾವು ಹಲವಾರು ಬಾರಿ ಮಾನ್ಯ ಸಿ.ಪಿ.ಆಯಾ ಮತ್ತು ಪಿ.ಎಸ್.ಐ ಸಾಹೇಬರಿಗೆ ಈ ಕುರಿತು ಕೇಳಿದರೂ ನಮಗೆ ಹಾರಿಕೆ ಉತ್ತರ ನೀಡಿ ಕಳುಹಿಸುತ್ತಿದ್ದಾರೆ.
ಆದಕಾರಣ ತಾವು ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಕೂಡಲೇ ಬಂಧಿ ಅವರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಂಡು ಗಡಿಪಾರು ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಹಾಗೇ ಈ ಕೆಲಸಗಳಿಗೆ ಕುಮ್ಮಕ್ಕೂ (ಪ್ರಚೋದನೆ) ನೀಡುತ್ತಿರುವ ಮತ್ತು ಗಡಿಭಾಗದಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ನಡು ವಿಷದ ಬೀಜ ಬಿತ್ತುತ್ತಿರುವ ಸಂಕೇಶ್ವರ ಕೆಲವು ಪುಂಡರು ಅಂದರೆ ಜಯಪ್ರಕಾಶ ಶಿವಾಜಿ ಸಾವಂತ ಜಯು ಶಿವ ಸಾವಂತ ಹಾಗೂ ಇನ್ನಿತರರ ಮೇಲೆಯೂ ಕೂಡಾ ಗೂಂಡಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕು ಎಂದು ಕರ್ನಾಟಕ ರಾಜ್ಯೋತ್ಸವ ಸಮಿತಿ ಅಧ್ಯಕ್ಷರು ಸಂತೋಷ ಸತ್ಯನಾಯಕ ಹೇಳಿದರು.
ಪ್ರತಿಭಟನೆಯಲ್ಲಿ ವಿಕ್ರಮ ಕರನಿಂಗ, ದಿಲೀಪ್ ಹೊಸಮನಿ, ಪ್ರಮೋದ್ ಹೊಸಮನಿ, ಸಂತೋಷ ಪಾಟೀಲ್, ಪ್ರದೀಪ್ ಮನಗಾಂವಿ, ಪ್ರೀತಮ್ ಸಂಮಾರೆ, ಗಣೇಶ ಪಾಟೀಲ್, ವಿಜಯ ಜಿರಳೆ ಮತ್ತಿತರು ಇದ್ದರು.